ETV Bharat / state

ತೊಗರಿ ಇ-ನೋಂದಣಿ ಪ್ರಕ್ರಿಯೆಯಲ್ಲಿ ತಪ್ಪು ಮಾಹಿತಿ.. ನೊಂದ ರೈತರ ಪ್ರತಿಭಟನೆ

ತೊಗರಿ ಬೆಳೆ ಖರೀದಿ ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆನ್​​​​ಲೈನ್​​​ನಲ್ಲಿ ಅಧಿಕಾರಿಗಳು ತಪ್ಪು ಮಾಹಿತಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿ ವಿಜಯಪುರದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ರೈತರು ಪ್ರತಿಭಟನೆ
ರೈತರು ಪ್ರತಿಭಟನೆ
author img

By

Published : Jan 20, 2020, 6:20 PM IST

ವಿಜಯಪುರ: ಅಧಿಕಾರಿಗಳು ತೊಗರಿ ಬೆಳೆ ಬದಲಿಗೆ ಆನ್‌ಲೈನ್‌ನಲ್ಲಿ ಬೇರೆ ಬೆಳೆ ನೋಂದಣಿ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು. ಜನವರಿ 31ರವರೆಗೂ ತೊಗರಿ ಬೆಳೆ ಆನ್​​ಲೈನ್​ ನೋಂದಣಿ ಪ್ರಕ್ರಿಯೆ ಇರಲಿದೆ.

ತೊಗರಿಗೆ ಬೆಂಬಲ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ತೊಗರಿ ಬೆಳೆಗೆ ₹6,100 ಬೆಲೆ ನಿಗದಿ ಮಾಡಿದೆ. ಅದಕ್ಕಾಗಿ ಜಿಲ್ಲೆಯಲ್ಲಿ 100ಕ್ಕೂ ಅಧಿಕ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಿದೆ. ಆದರೆ, ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡದೆ ಸಮೀಕ್ಷೆ ಮಾಡುತ್ತಿದ್ದಾರೆ. ಅಲ್ಲದೆ ಜಮೀನಿನಲ್ಲಿ ತೊಗರಿ ಬೆಳೆದರೆ ಅಧಿಕಾರಿಗಳು ಕಡಲೆ ಎಂದು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತಿದೆ‌ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತೊಗರಿ ಆನ್​​​​ಲೈನ್‌ ನೋಂದಣಿ ಪ್ರಕಿಯೆಯಲ್ಲಿ ತಪ್ಪು ಮಾಹಿತಿ ಖಂಡಿಸಿ ರೈತರ ಪ್ರತಿಭಟನೆ..

ಈಗಾಗಿರುವ ಎಡವಟ್ಟು ಸರಿಪಡಿಸಿ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ತೊಗರಿ ಬೆಳೆ ಕುರಿತು ಆನ್​ಲೈನ್​​ನಲ್ಲಿ ನಿಖರ ಮಾಹಿತಿ ತೋರಿಸಬೇಕು ಎಂದು ಆಗ್ರಹಿಸಿದರು. ಈ ಕುರಿತು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಅವರಿಗೆ ರೈತರು ಮನವಿ‌ ಸಲ್ಲಿಸಿದರು.

Intro:ವಿಜಯಪುರ: ಕೇಂದ್ರ ಸರ್ಕಾರ ರೈತರಿಂದ ನೇರವಾಗಿ ತೊಗರಿ ಖರೀದಿಸಲು ರೈತರ ತೊಗರಿ ಬೆಳೆ ಆನ್ಲೈನ್ ನೋಂದಣಿ ( ಜಿಪಿಎಸ್) ಮಾಡುವ ಅಧಿಕಾರಿಗಳು ತಪ್ಪು ಮಾಹಿತಿ ಅಪ್ಲೋಡ್ ಮಾಡುತ್ತಿ್ದಾದ್ದಾರೆ ಎಂದು ರೈತರು ಪ್ರತಿಭಟನೆ ನಡೆಸಿದರು.

Body:ನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ‌ ಪ್ರತಿಭಟನೆ ನಡೆಸಿದ ರೈತರು ಜನವರಿ 31 ವರಿಗೂ ರೈತರ ತೊಗರಿ ಬೆಳೆ ಆನ್ಲೈನ್ ನೋಂದಣಿ ಪ್ರಾರಂಭವಾಗಿ ಆದ್ರೇ ಅಧಿಕಾರಗಳ ಎಡವಟ್ಟಿನಿಂದ ರೈತರ ತೊಗರಿ ಬೆಳೆಗೆ ಬದಲಿಗೆ ಬೆಳೆ ಆನ್ಲೈನ್ ಮೂಲಕ‌ ನೋಂದಣಿ ಮಾಡಲಾಗುತ್ತಿದೆ ಎಂದು ರೈತರು ಪ್ರತಿಭಟನೆ ನಡೆಸಿದ್ರು. ಇನ್ನೂ ರೈತರ ತೊಗರಿ ಬೆಳೆ ಸರ್ಕಾರ 6100 ಬೆಲೆ ನಿಗದಿ ಮಾಡಿದೆ. ಅಲ್ಲದೆ ಜಿಲ್ಲೆಯಲ್ಲಿ ನೂತನವಾಗಿ 100 ಅಧಿಕ ತೊಗರಿ ಖರೀದಿ ಕೇಂದ್ರ ಆರಂಭಿಸಿದೆ. ಇತ್ತ ಅಧಿಕಾರಿಗಳು ಜಮೀನಗಳಿಗೆ ಭೇಟಿ ನೀಡದೆ ಸರ್ವೆ ಮಾಡಿತ್ತಿದ್ದಾರೆ. ನಾವು ಹೊಲದಲ್ಲಿ ತೊಗರಿ ಬೆಳೆದರೆ ಅಧಿಕಾರಿ ಕಡಲೆ ಎಂದು ನೋಂದಣಿ ಮಾಡಿಕೊಳ್ಳುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ‌ ರೈತರು ಪ್ರತಿಭಟನೆ ನಡೆಸಿದರು.

Conclusion:ಅಧಿಕಾರಿಗಳು ನೋಂದಣಿ ಮಾಡಿದ ಎಡವಟ್ಟು ಸರಿಪಡಿಸಿ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ತೊಗರಿ ಬೆಳೆ ಬಗ್ಗೆ ನಿಖರ ಮಾಹಿತಿ ನೋಂದಣಿ ಮಾಡುವಂತೆ ಕೋರಿ ರೈತರು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಗೆ ಮನವಿ‌ ಸಲ್ಲಿಸಿದರು..

ಬೈಟ್ : ಮಲಕಪ್ಪ ( ರೈತ)

ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.