ವಿಜಯಪುರ: ಜಿಲ್ಲೆಯಲ್ಲಿ ಮತ್ತೊಮ್ಮೆ ಭೂಕಂಪನವಾಗಿದೆ. ಒಂದು ತಿಂಗಳಲ್ಲಿ 7ನೇ ಬಾರಿ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ್ದು, ಜನರು ಮತ್ತೆ ಆತಂಕಗೊಂಡಿದ್ದಾರೆ.
ಬಸವನಬಾಗೇವಾಡಿಯ ಮಗೂಳಿಯಲ್ಲಿ ಗುರುವಾರ ಸಂಜೆ 6.21ರ ಸುಮಾರಿಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆಯ ಕಂಪನ ದಾಖಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್‌ಸಿಎಸ್) ದೃಢಪಡಿಸಿದೆ.
-
Earthquake of magnitude 3.2 on the Richter scale occurred at Vijayapura, Karnataka at 1821 hours today: National Center for Seismology
— ANI (@ANI) October 14, 2021 " class="align-text-top noRightClick twitterSection" data="
">Earthquake of magnitude 3.2 on the Richter scale occurred at Vijayapura, Karnataka at 1821 hours today: National Center for Seismology
— ANI (@ANI) October 14, 2021Earthquake of magnitude 3.2 on the Richter scale occurred at Vijayapura, Karnataka at 1821 hours today: National Center for Seismology
— ANI (@ANI) October 14, 2021
ಜಿಲ್ಲೆಯಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಭೂಕಂಪನ ತಜ್ಞರು ವಿಜಯಪುರಕ್ಕೆ ಭೇಟಿ ನೀಡಲಿದ್ದಾರೆ.
ಸೆಪ್ಟೆಂಬರ್ 4ರ ಬಳಿಕ ಜಿಲ್ಲೆಯಲ್ಲಿ ಒಟ್ಟು 7 ಬಾರಿ ಭೂಕಂಪನದ ಅನುಭವವಾಗಿದೆ. ಕಂಪನದಿಂದ ಇದುವರೆಗೂ ಯಾರಿಗೂ ತೊಂದರೆಯಾಗಿಲ್ಲ. ಮನೆಯ ಕಿಟಕಿ ಗಾಜು ಒಡೆದಿದ್ದು, ಪಾತ್ರೆಗಳು ನೆಲಕ್ಕುರುಳಿವೆ.