ವಿಜಯಪುರ : ಕೊರೊನಾ ಮಹಾಮಾರಿ ಹಿನ್ನೆಲೆ ರಾಜ್ಯದಲ್ಲಿ ಜಾರಿಯಾಗಿರುವ ಲಾಕ್ಡೌನ್ನಲ್ಲಿ ವ್ಯಕ್ತಿಯೊಬ್ಬ ಐಪಿಎಸ್ ಅಧಿಕಾರಿಯೊಬ್ಬರ ಪೋಟೋವನ್ನು ತನ್ನ ಕಾರು ಹಿಂಬದಿ ಅಂಟಿಸಿಕೊಂಡು ಕಿರಾಣಿ ವಸ್ತು ತಗೆದುಕೊಂಡು ಹೋಗುವಾಗ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡು ದಂಡ ತೆತ್ತ ಘಟನೆ ನಗರದಲ್ಲಿ ನಡೆದಿದೆ.
ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕಾರು ಅಡ್ಡಗಟ್ಟಿದ್ದಾರೆ. ಆ ಕಾರಿನ ಹಿಂಭಾಗದ ಗ್ಲಾಸ್ಗೆ ಎಸ್ಪಿ ರವಿ ಡಿ.ಚೆನ್ನಣ್ಣನವರ ಫೋಟೋ ಹಾಕಿಕೊಂಡು ಹೋಗುತ್ತಿದ್ದ ವಾಹನ ಚಾಲಕನನ್ನು ವಿಚಾರಿಸಿದ್ದಾರೆ.
ಓಮಿನಿ ಕಾರ್ ಹಿಂಭಾಗ ಎಸ್ಪಿ ರವಿ ಡಿ ಚೆನ್ನಣ್ಣನವರ ಫೋಟೋ ಹಾಕಿಕೊಂಡು ಓಡಾಡುತ್ತಿದ್ದಿ ಯಾಕೆ ಎಂದು ಕೇಳಿದಾಗ, ಕಾರ್ ಚಾಲಕ, ಇಲ್ಲ ಸರ್, ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ಪೊಲೀಸರು ಕಾರು ಕೀ ಕಸಿದುಕೊಂಡು 500 ರೂ. ದಂಡ ಭರಿಸಿಕೊಂಡು ಕಾರು ಬಿಟ್ಟು ಕಳುಹಿಸಿದ್ದಾರೆ.