ವಿಜಯಪುರ: ವಿಡಿಎ ಕಾಂಪ್ಲೆಕ್ಸ್‌ನಲ್ಲಿ ಯುವಕ ಪದ್ದು ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ, ಗುಂಡು ಹಾರಿಸಿದ ಆರೋಪಿ ತುಳಸಿ ಹರಿಜನ ಹಾಗೂ ಆತನ ಜೊತೆಗೆ ಮೂವರನ್ನ ಈಗಾಗಲೇ ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಆರೋಪಿ ತುಳಿಸಿ ಹರಿಜನ (24) ಯುವಕ ಕಳೆದ ಎರಡ್ಮೂರು ವರ್ಷಗಳಿಂದ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಆತನ ತಂದೆ, ತಾಯಿ ಟೀ ಅಂಗಡಿ ಮಾಡಿಕೊಂಡಿದ್ದಾರೆ ಎಂದು ಎಸ್ಪಿ ಹೇಳಿದರು.
ಬಾಗಪ್ಪ ಹರಿಜನನಿಂದ ಆರೋಪಿ ತುಳಸಿ ಪ್ರೇರಣೆಗೊಳಗಾಗಿ, ಡಿಜೆ ಬಾಯ್ಸ್ ಹಾಗೂ ಡಿಜೆ ಸರ್ಕಾರ ಎಂಬ ವಾಟ್ಸಪ್ ಗ್ರೂಪ್ ಕೂಡ ಕ್ರಿಯೇಟ್ ಮಾಡಿದ್ದಾನೆ. ಅಂತವರ ಮೇಲೆ ಕೂಡ ನಾವು ನಿಗಾ ವಹಿಸಿದ್ದು, ತನಿಖೆ ಮುಂದುವರಿಸಿದ್ದೇವೆ ಎಂದು ಎಸ್ಪಿ ಅನುಪಮ ಅಗರವಾಲ್ ಮಾಹಿತಿ ನೀಡಿದರು.