ETV Bharat / state

ವಿಜಯಪುರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಗೂ ಕೊರೊನಾ ಪಾಸಿಟಿವ್​ - ವಿಜಯಪುರ ವೈದ್ಯಕೀಯ ವಿದ್ಯಾರ್ಥಿನಿಗೆ ಕೋವಿಡ್​-19 ದೃಢ

ವಿಜಯಪುರ ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ 429 ನೇ ಸಂಖ್ಯೆಯ 25 ವರ್ಷದ ಯುವತಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್​​​​ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ  ಸುದ್ದಿಗೋಷ್ಠಿ
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸುದ್ದಿಗೋಷ್ಠಿ
author img

By

Published : Apr 23, 2020, 3:07 PM IST

ವಿಜಯಪುರ: ಇಂದು ಜಿಲ್ಲೆಯಲ್ಲಿ ಬಂದಿರುವ ಎರಡು ಪಾಸಿಟಿವ್ ಫಲಿತಾಂಶ ಸಾಕಷ್ಟು ಕೂತುಹಲ ಕೆರಳಿಸಿದ್ದು, ಇದರಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸುದ್ದಿಗೋಷ್ಠಿ

ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ 429 ನೇ ಸಂಖ್ಯೆಯ 25 ವರ್ಷದ ಯುವತಿಗೆ ಸೋಂಕು ತಗುಲಿದೆ. ಆಂಧ್ರಪ್ರದೇಶ ಮೂಲದ ಈ ಯುವತಿಗೆ ಯಾವ ರೀತಿ ಸೋಂಕು ತಗುಲಿದೆ ಎನ್ನುವುದರ ಬಗ್ಗೆ ತಿಳಿಯಲು ಮೂವರು ಹಿರಿಯ ವೈದ್ಯರ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್​​​​ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿಯ ಕುರಿತು ಕಳೆದ ಒಂದು ತಿಂಗಳ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಆಕೆಗೆ ಜ್ವರ, ಇನ್ನಿತರ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಸ್ವಯಂ ಆಗಿ ಕೊರೊನಾ ವೈರಸ್ ಪರೀಕ್ಷೆಗೆ ಬಂದಿದ್ದಳು. ಆಕೆ ಹಾಗೂ ಆಕೆಯ ಸಂಪರ್ಕದಲ್ಲಿದ್ದ 25 ಜನರ ಗಂಟಲು ದ್ರವದ ಮಾದರಿ ಪಡೆದುಕೊಂಡು ಪರೀಕ್ಷೆಗೆ ಒಳಪಡಿಸಿದ್ದು, ಈ ಯುವತಿಯೊಬ್ಬಳದ್ದು ಮಾತ್ರ ಪಾಸಿಟಿವ್ ಬಂದಿದೆ. ಉಳಿದವರದ್ದು ನೆಗೆಟಿವ್ ಬಂದಿದೆ ಎಂದರು.

ಏ.15 ರಿಂದ ಆಕೆ ಆಸ್ಪತ್ರೆಯಲ್ಲಿ ಯಾವ ರೋಗಿಗಳನ್ನು ಪರೀಕ್ಷಿಸಿದ್ದಾಳೆ ಎನ್ನುವ ಇತಿಹಾಸ ಪಡೆದುಕೊಳ್ಳಲಾಗುತ್ತಿದೆ. ರೋಗಿಯಿಂದ ಇವಳಿಗೆ ಕೊರೊನಾ ವೈರಸ್ ಬಂದಿರಬಹುದು ಎನ್ನುವ ಸಂಶಯ ಮೂಡಿದೆ. ಮತ್ತೆ ಈಕೆ ಭೇಟಿಯಾದ ಎರಡನೇ ಸಂಪರ್ಕದವರ ಪತ್ತೆ ಮಾಡಲಾಗುತ್ತಿದೆ. ಸದ್ಯ ಆಕೆಯನ್ನು ಆಸ್ಪತ್ರೆಯ ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದರು.

ಒಟ್ಟು ಜಿಲ್ಲೆಯಲ್ಲಿ ಇಲ್ಲಿಯವರೆಗೆ 1,705 ಜನರ ಮೇಲೆ ನಿಗಾ ಇಡಲಾಗಿದೆ. 378 ಜನ 28 ದಿನದ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ. 1,325 ಜನ ಇನ್ನೂ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. 1,426 ಸ್ಯಾಂಪಲ್ ಕಳುಹಿಸಲಾಗಿದ್ದು, ಅದರಲ್ಲಿ 1,245 ನೆಗೆಟಿವ್ ಬಂದಿದೆ. 37 ಪಾಸಿಟಿವ್ ಬಂದಿದೆ. ಇನ್ನೂ 144 ಜನರ ವರದಿಗಾಗಿ ಕಾಯಲಾಗುತ್ತಿದೆ ಎಂದು ಹೇಳಿದರು.

ಇನ್ನೊಂದು ಪಾಸಿಟಿವ್ ಬಂದಿರುವ 428 ನೇ ಸಂಖ್ಯೆಯ ಸೋಂಕಿತ 32 ವರ್ಷದ ಪುರುಷರಾಗಿದ್ದು, 221 ನೇ ಸಂಖ್ಯೆಯ ಸೋಂಕಿತರ ಸಂಬಂಧಿಯಾಗಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.