ವಿಜಯಪುರ: ಜಿಲ್ಲೆಯಲ್ಲಿ ಈವರೆಗೆ 48 ಪೊಲೀಸ್ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಕೊರೊನಾ ಕುರಿತಂತೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಮಾಹಿತಿ ಕೊರೊನಾ ಪಾಸಿಟಿವ್ ಪೀಡಿತರ ಸಂಖ್ಯೆ 758ಕ್ಕೆ ತಲುಪಿದೆ. ಇದರಲ್ಲಿ ಹಲವು ಸರ್ಕಾರಿ ಸಿಬ್ಬಂದಿಯೂ ಸೇರಿದ್ದಾರೆ. ಈವರೆಗೆ 48 ಪೊಲೀಸರು ಕೊರೊನಾ ಸೊಂಕಿನಿಂದ ಬಳಲಿದ್ದಾರೆ. ಹಲವರು ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ದು, ಸ್ವತಃ ಎಸ್ಪಿಅನುಪಮ ಅಗರವಾಲ್ ಹೋಮ್ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಅಲ್ಲದೇ 14 ಪೊಲೀಸ್ ಸಿಬ್ಬಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಜೊತೆ ಮಹಾನಗರ ಪಾಲಿಕೆ, ನೀರು ಸರಬರಾಜು ಮಂಡಳಿ ಕಚೇರಿ ಸೇರಿ ಹಲವು ಸರ್ಕಾರಿ ಕಚೇರಿ ಕೊರೊನಾ ಸೋಂಕಿಗೆ ಸಿಲುಕಿವೆ.
ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರು ಸೇರಿ 18 ನೌಕರರಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಮಹಾನಗರ ಪಾಲಿಕೆಯನ್ನು ಸೀಲ್ಡೌನ್ ಮಾಡಿ, ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ಪಾಲಿಕೆ ಹಿಂಬದಿಯ ಬ್ಯಾಂಕ್ ಸೇರಿ ಕಟ್ಟಡದ ಎಲ್ಲ ಭಾಗದಲ್ಲಿ ಸ್ಯಾನಿಟೈಸರ್ ಮಾಡಲಾಗಿದ್ದು, ನೀರು ಸರಬರಾಜು ಮಂಡಳಿಯ ಇಬ್ಬರು ನೌಕರರಿಗೆ ಸೋಂಕು ತಗುಲಿದೆ.