ETV Bharat / state

ವಿಜಯಪುರದಲ್ಲಿ ಕೊರೊನಾ ರಣಕೇಕೆ: ಒಂದೇ ದಿನ 39 ಜನರಿಗೆ ಸೋಂಕು - corona news

ವಿಜಯಪುರದಲ್ಲಿ ಇಂದು 39 ಕೊರೊನಾ ಪಾಸಿಟಿವ್​ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 286 ಕ್ಕೆ ಏರಿಕೆಯಾಗಿದೆ.

ವಿಜಯಪುರ ಜಿಲ್ಲಾಸ್ಪತ್ರೆ
ವಿಜಯಪುರ ಜಿಲ್ಲಾಸ್ಪತ್ರೆ
author img

By

Published : Jun 21, 2020, 7:52 PM IST

ವಿಜಯಪುರ: ಜಿಲ್ಲೆಯಲ್ಲಿಂದು ಕೊರೊನಾ ರಣಕೇಕೆ ಹಾಕಿದ್ದು, ಒಂದೇ ದಿನ 39 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 286ಕ್ಕೆ ಏರಿಕೆಯಾಗಿದೆ.

ಒಂದು ವರ್ಷದ ಬಾಲಕ ಸೇರಿ 4 ಬಾಲಕರು, ಇಬ್ಬರು ಬಾಲಕಿಯರು, ಮೂವರು ಯುವಕ, ಯುವತಿ, 14 ಜನ ಪುರುಷರು, 13 ಜನ ಮಹಿಳೆಯರಿಗೆ ಸೋಂಕು ತಗುಲಿದೆ. ಇದರಲ್ಲಿ 28 ಜನರಿಗೆ ಕಂಟೇನ್​​ಮೆಂಟ್ ಝೋನ್​​ನಲ್ಲಿ ಇದ್ದವರ ಮೂಲಕ ಸೋಂಕು ತಗುಲಿದೆ. ಉಳಿದ 11 ಜನ ತೀವ್ರ ಉಸಿರಾಟ ತೊಂದರೆ ಹಾಗೂ ಇನ್ನಿತರ ರೋಗದಿಂದ ಆಸ್ಪತ್ರೆಗೆ ದಾಖಲಾದಾಗ ಅವರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ಕಂಡು ಬಂದಿದೆ.

217 ಜನ ಗುಣಮುಖ:

ಇಂದು 7 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇವರನ್ನು ಸೇರಿಸಿ ಇಲ್ಲಿಯವರೆಗೆ 217 ಜನ ಗುಣಮುಖರಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಒಟ್ಟು 62 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಮಹಾಮಾರಿ ಕೊರೊನಾಗೆ 7 ಜನ ಬಲಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.