ETV Bharat / state

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆರೋಪ; ಜನಸೇನಾ ಸಂಘಟನೆ ಅಧ್ಯಕ್ಷನ ವಿರುದ್ಧ ಪ್ರಕರಣ - ಕರ್ನಾಟಕ ರಾಜ್ಯ ಯುವ ಜನ ಸೇನಾ ಸಂಘಟನೆಯ ರಾಜ್ಯಾಧ್ಯಕ್ಷ ಶಿವಾನಂದ ವಾಲಿ

ನಾಲತವಾಡದಲ್ಲಿ ಭಾನುವಾರ ಮಳೆಯಾದ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಿಗೆ ನೀರು ನುಗ್ಗಿತ್ತು. ಪರಿಸ್ಥಿತಿ ಪರಿಶೀಲನೆಗೆ ತಹಶೀಲ್ದಾರ್ ಅಧಿಕಾರಿಗಳೊಂದಿಗೆ ತೆರಳಿದ್ದಾಗ ನಾಲತವಾಡದ ಬಸ್ ನಿಲ್ದಾಣದ ಬಳಿ ವಾಲಿ ಹಾಗೂ ಇನ್ನೂ ಕೆಲವು ಜನರು ತಹಶೀಲ್ದಾರ್ ಅವ‌ರನ್ನು ತಳ್ಳಾಡಿದ್ದಾರೆ ಎಂದು ದೂರಲಾಗಿದೆ.

Complaint
ಕರ್ತವ್ಯಕ್ಕೆ ಅಡ್ಡಿ
author img

By

Published : Jun 30, 2020, 10:25 AM IST

ಮುದ್ದೇಬಿಹಾಳ (ವಿಜಯಪುರ): ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ತಾಲೂಕಿನ ನಾಲತವಾಡದ ನಿವಾಸಿ, ಕರ್ನಾಟಕ ರಾಜ್ಯ ಯುವ ಜನ ಸೇನಾ ಸಂಘಟನೆಯ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ ದೂರು ದಾಖಲಾಗಿದೆ.

ತಾಲೂಕಿನ ನಾಲತವಾಡ ಪಟ್ಟಣ ಪಂಚಾಯಿತಿಯ ಪ್ರಭಾರಿ ಮುಖ್ಯಾಧಿಕಾರಿ ಹಾಲಿ ಮುದ್ದೇಬಿಹಾಳ ಪುರಸಭೆ ಮುಖ್ಯಾಧಿಕಾರಿಯಾಗಿರುವ ಗೋಪಾಲ ಕಾಸೆ ಅವರು ಶಿವಾನಂದ ವಾಲಿ ವಿರುದ್ಧ ದೂರು ನೀಡಿದ್ದಾರೆ.

fir
ದೂರು ಪ್ರತಿ

ಘಟನೆಯ ಪೂರ್ಣ ವಿವರ:

ನಾಲತವಾಡದಲ್ಲಿ ಭಾನುವಾರ ಜೋರು ಮಳೆಯಾಗಿದ್ದು ಕೆಲವು ಪ್ರದೇಶಗಳಿಗೆ ನೀರು ನುಗ್ಗಿತ್ತು. ಇದರ ಪರಿಶೀಲನೆಗೆ ತಹಶೀಲ್ದಾರ್ ಜಿ.ಎಸ್.ಮಳಗಿ ಹಾಗೂ ಇತರೆ ಸ್ಥಳೀಯ ಅಧಿಕಾರಿಗಳೊಂದಿಗೆ ತೆರಳಿದ್ದಾಗ ನಾಲತವಾಡದ ಬಸ್ ನಿಲ್ದಾಣದ ಬಳಿ ಇರುವ ಮಸೀದಿಯ ಹತ್ತಿರ ಬಂದ ವಾಲಿ ಹಾಗೂ ಇನ್ನೂ ಕೆಲವು ಜನರು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ತಹಶೀಲ್ದಾರ್‌ರನ್ನು ತಳ್ಳಾಡಿದ್ದಾರೆ.

ತಳ್ಳಾಟ ಏಕೆ? ನಿಮ್ಮ ಸಮಸ್ಯೆ ಹೇಳಿ ನಾವು ಮಾಡಿಕೊಡುತ್ತೀವಿ, ತಹಶೀಲ್ದಾರ್ ಅವ‌ರನ್ನೇಕೆ ತಳ್ಳಾಡುತ್ತೀರಿ? ಎಂದಾಗ, ವಾಲಿ ಅದನ್ನೇನು ಕೇಳುತ್ತೀಯಾ? ಎಂದು ತಮಗೂ ಏಕವಚನದಲ್ಲಿ ನಿಂದಿಸಿ ಬೆನ್ನು, ಭುಜಕ್ಕೆ ಹೊಡೆದಿದ್ದಾರೆ. ಅಲ್ಲದೇ ನಮಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪುರಸಭೆ ಅಧಿಕಾರಿ ಕಾಸೆ ಉಲ್ಲೇಖಿಸಿದ್ದಾರೆ.

ಸ್ಥಳದಲ್ಲಿದ್ದ ಪೊಲೀಸರು ಶಿವಾನಂದ ವಾಲಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.