ETV Bharat / state

ಬಿಜೆಪಿ ತೆಕ್ಕೆಗೆ ಇಂಡಿ ಪುರಸಭೆ... ಚುನಾವಣೆ ಪ್ರಕ್ರಿಯೆ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ - ಇಂಡಿ ಪುರಸಭೆ ಚುನಾವಣೆ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ

ಬಿಜೆಪಿ ವಾಮಮಾರ್ಗದ ಮೂಲಕ ಪುರಸಭೆ ಅಧ್ಯಕ್ಷ ಗಾದಿಗೇರಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆರೋಪಿಸಿದ್ದು, ತಮ್ಮ ಬೆಂಬಲಿಗರು, ಪುರಸಭೆಯ ಕಾಂಗ್ರೆಸ್ ಸದಸ್ಯರಿಂದ ಇಂಡಿ ಪಟ್ಟಣದ ಮಿನಿ ವಿಧಾನಸಭಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

municipality
ಚುನಾವಣೆ
author img

By

Published : Jan 20, 2022, 8:35 PM IST

ವಿಜಯಪುರ: ಹಾಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರಾಜೀನಾಮೆಯಿಂದ ತೆರವಾಗಿದ್ದ ಇಂಡಿ ಪುರಸಭೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿಯ ಬನ್ನಮ್ಮ ಹದ್ರಿ ಹಾಗೂ ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಅರಬ್ ಆಯ್ಕೆಯಾಗಿದ್ದಾರೆ. ಆದರೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವಾಮಮಾರ್ಗದ ಮೂಲಕ ಬಿಜೆಪಿ ಅಧಿಕಾರಕ್ಕೆ

ಬಿಜೆಪಿ ವಾಮಮಾರ್ಗದ ಮೂಲಕ ಪುರಸಭೆ ಅಧ್ಯಕ್ಷ ಗಾದಿಗೇರಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆರೋಪಿಸಿದ್ದು, ತಮ್ಮ ಬೆಂಬಲಿಗರು, ಪುರಸಭೆಯ ಕಾಂಗ್ರೆಸ್ ಸದಸ್ಯರಿಂದ ಇಂಡಿ ಪಟ್ಟಣದ ಮಿನಿ ವಿಧಾನಸಭಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಸದಸ್ಯೆ ಅನುಸೂಯ ಕಾಲೇಬಾಗರನ್ನು ಬಿಜೆಪಿ ಚುನಾವಣೆ ಪೂರ್ವ ಅಪಹರಣ ಮಾಡಿದೆ. ಇದರ ಜೊತೆ ಕಾಂಗ್ರೆಸ್​ಗೆ ಬೆಂಬಲ ನೀಡಲು ಮುಂದಾಗಿದ್ದ ಬಿಜೆಪಿ ಸದಸ್ಯ ಭೀಮನಗೌಡ ಪಾಟೀಲ್​ರನ್ನೂ ಬಿಜೆಪಿ ಮುಖಂಡರು ಅಪಹರಣ ಮಾಡಿದ್ದಾರೆ ಎಂದು ಆರೋಪಿದರು.

ಇದನ್ನೂ ಓದಿ: ಪದವಿ ಕಾಲೇಜುಗಳಲ್ಲಿ ಕಡ್ಡಾಯ ಕನ್ನಡ ಕಲಿಕೆ: ಜನವರಿ 31ಕ್ಕೆ ವಿಚಾರಣೆ

ಅಪಹರಣವಾದ ಇಬ್ಬರು ಸದಸ್ಯರ ಅನುಪಸ್ಥಿತಿಯಲ್ಲಿ ಚುನಾವಣೆ ನಡೆಸಲಾಗಿದೆ. ಅಲ್ಲದೇ, ಚುನಾವಣಾಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತಿಸಿದ್ದಾರೆಂದು ದೂರಿದರು. ಇಂಡಿ ತಹಶೀಲ್ದಾರ್ ನೇತೃತ್ವದಲ್ಲಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸಿದ್ದಾರೆ. ಇಂಡಿ ತಹಶೀಲ್ದಾರ್ ಪಿ.ಎಸ್. ಕುಲಕರ್ಣಿ ಬಿಜೆಪಿ ಪರ ಕೆಲಸ ಮಾಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್​ ಟೀಕಿಸಿದ್ದಾರೆ.

23 ಸದಸ್ಯ ಬಲದ ಇಂಡಿ ಪಟ್ಟಣದ ಪುರಸಭೆಯಲ್ಲಿ ಕಾಂಗ್ರೆಸ್ 9, ಬಿಜೆಪಿ 10, ಜೆಡಿಎಸ್ 2, ಪಕ್ಷೇತರ 2 ಸದಸ್ಯರು ಬಲ ಹೊಂದಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ ಜೆಡಿಎಸ್ ಹಾಗೂ ಪಕ್ಷೇತರರು ಕಾಂಗ್ರೆಸ್​ಗೆ ಬೆಂಬಲಿಸಿದ್ದರು. ಈಗ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.