ETV Bharat / state

ಮೇಡಂಗೆ ಪೇಮೆಂಟ್ ಮಾಡಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ್​ ಕಟೀಲ್ ​

author img

By

Published : Sep 27, 2022, 5:57 PM IST

ರಾಜ್ಯದಲ್ಲಿ ಯಾರಾದರೂ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್ ಅವರು ಆರೋಪಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ್​ ಕಟೀಲ್​

ವಿಜಯಪುರ: ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪೇ ಸಿಎಂ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್ ಅವರು ಆರೋಪಿಸಿದರು.

ವಿಜಯಪುರದಲ್ಲಿ ‌ಮಾತನಾಡಿದ ಅವರು, ರಾಜ್ಯದಲ್ಲಿ ಯಾರಾದರೂ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ. ಅವರು ಪೇಮೆಂಟ್ ಮಾಡಿ ಸಿಎಂ ಆಗಿದ್ದಾರೆ. ಮೇಡಂ (ಸೋನಿಯಾ ಗಾಂಧಿ)ಗೆ ಪೇಮೆಂಟ್ ಮಾಡಿ ಸಿದ್ದರಾಮಯ್ಯ ಸಿಎಂ ಆಗಿರೋದು ಎಲ್ಲರಿಗೂ ಗೊತ್ತಿದೆ. ಖರ್ಗೆ, ಪರಮೇಶ್ವರ್​ ಸಿನಿಯರ್, ಡಿಕೆಶಿ, ದೇಶಪಾಂಡೆಯಂತಹ ಲೀಡರ್ ನಡುವೆ ಸಿಎಂ ಆಗಿದ್ದು, ಪೇಮೆಂಟ್ ಮಾಡಿಯೇ ತಾನೇ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ್​ ಕಟೀಲ್​ ಅವರು ಮಾತನಾಡಿದರು

ಮೇಡಂಗೆ ಪೇಮೆಂಟ್ ಮಾಡಿ ಸಿದ್ದರಾಮಯ್ಯ ಸೀಟ್ ಉಳಿಸಿಕೊಂಡಿದ್ದು, ಪೇ ಮಾಡಿಯೇ ಮೇಡಂರನ್ನು ಸಿದ್ದರಾಮಯ್ಯ ಸಂತೋಷ ಪಡೆಸಿದ್ದಾರೆ. PAYCM ಅಲ್ಲಿ ಎರಡು ಅರ್ಥ ಇದೆ. ಒಂದು ಪೇ ಸಿಎಂ ಸಿದ್ದರಾಮಯ್ಯ, ಇನ್ನೊಂದು ಪೇ ಕಾಂಗ್ರೆಸ್ ಮೇಡಂ, ಪೇಮೆಂಡ್ ಮಾಡಿದ ಸಿಎಂ ಪೇ ಸಿಎಂ. ಪೇಮೆಂಟ್ ಪಡೆದ ಮೇಡಂ ಪೇ ಕಾಂಗ್ರೆಸ್ ಮೇಡಂ ಎಂದು ವ್ಯಂಗ್ಯ ಮಾಡಿದರು.

ಪೇಸಿಎಂ ಅಭಿಯಾನ ಶುರು: ಫೇ ಸಿಎಂ‌ ವಿಚಾರವನ್ನು ಸಿದ್ದು ಮತ್ತೆ ಡಿಕೆಶಿ ಕಟೀಲ್ ತಗಲಾಕಿದರು. ಈ ಬುದ್ಧಿವಂತಿಕೆ ಹಿಂದೆ ಡಿಕೆಶಿ ಇದ್ದಾರೆ. ಸಿದ್ದರಾಮಯ್ಯಗಾಗಿಯೇ ಈ ಪೇಸಿಎಂ ಅಭಿಯಾನ ಶುರು ಮಾಡಿದ್ದಾರೆ. ಪೋಟೋದಲ್ಲಿ ಮಾತ್ರ ಸಿಎಂ ಬೊಮ್ಮಾಯಿ ಫೋಟೋ ಬಳಕೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಹೊಡೆಯೋಕೆ ಡಿಕೆಶಿ ಪೇ ಸಿಎಂ ಮುಂದೆ ತಂದಿದ್ದಾರೆ ಎಂದರು.

ಡಿಕೆಶಿ ಈ ಪ್ಲಾನ್ ಮಾಡಿದ್ದಾರೆ: ನಮ್ಮ ಬಾಯಲ್ಲಿ ಹೇಳಿಸಲೆಂದೇ ಡಿಕೆಶಿ ಈ ಪ್ಲಾನ್ ಮಾಡಿದ್ದಾರೆ. PAYCM ಅಂತಿರೋದೆ ಸಿದ್ದರಾಮಯ್ಯಗೆ ಎಂದು ಡಿಕೆಶಿ ಇದನ್ನ ನೇರವಾಗಿ ಹೇಳದೇ ಹೀಗೆ ಮಾಡ್ತಿದ್ದಾರೆ ಎಂದು ಹೇಳಿದರು.

ಓದಿ: ಬೊಮ್ಮಾಯಿ ಇಸ್ ಹೆಡ್ ಆಫ್ ದಿ ಗವರ್ನಮೆಂಟ್.. ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ: ಸಿದ್ದರಾಮಯ್ಯ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.