ವಿಜಯಪುರ: 12 ನೇ ಶತಮಾನದಲ್ಲೇ ಪ್ರಜಾಪ್ರಭುತ್ವದ ಕಲ್ಪನೆ ಕೊಟ್ಟವರು ಬಸವಣ್ಣನವರು ಎಂದು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಹೇಳಿದ್ರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಬಸವಣ್ಣ ಸಮಾಜದ ಒಳಿತಿಗಾಗಿ ಸಮಾಜ ಉದ್ಧಾರ ಹಾಗೂ ಸಮಾನತೆಗಾಗಿ ದುಡಿದವರು. ಅಲ್ಲದೆ ಕೆಲಸದಲ್ಲಿ ಕೈಲಾಸ ಕಾಣುವ ಸಂದೇಶವನ್ನ ಜನರಿಗೆ ತಿಳಿಸಿದವರು. ಜೊತೆಗೆ ಮಹಿಳೆಯರಿಗೆ ಸಮಾನ ಹಕ್ಕು ನೀಡಿದವರು. ಅವರ ಅಂದಿನ ಬುನಾದಿಯೇ ಇಂದು ಪ್ರಜಾಪ್ರಭುತ್ವವಾಗಿ ಕಾರ್ಯ ರೂಪಕ್ಕೆ ಬಂದಿದೆ ಎಂದರು.
ಕಚೇರಿಯಲ್ಲಿ ಕಾರ್ಯಕ್ರಮಕ್ಕೂ ಆರಂಭಕ್ಕೂ ಮುನ್ನ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.