ETV Bharat / state

ಕೂಲಿ ಕೊಡದಿರುವ ಪಿಕೆಪಿಎಸ್ ಅಧಿಕಾರಿ ಮೇಲೆ ಕ್ರಮಕ್ಕೆ ಒತ್ತಾಯ...

ಮುದ್ದೇಬಿಹಾಳ ತಾಲೂಕಿನ ರಕ್ಕಸಗಿ ಪಿಕೆಪಿಎಸ್‌ನಲ್ಲಿ ಕೂಲಿ ಕೆಲಸ ಮಾಡಿದ ಹಮಾಲರಿಗೆ ಕೂಲಿ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ತಹಸೀಲ್ದಾರ್ ಜಿ.ಎಸ್. ಮಳಗಿ ಅವರಿಗೆ ಹಮಾಲರು ಮನವಿ ಪತ್ರ ಸಲ್ಲಿಸಿದರು.

Muddebihal
ಮುದ್ದೇಬಿಹಾಳ
author img

By

Published : Aug 21, 2020, 12:02 AM IST

ಮುದ್ದೇಬಿಹಾಳ: ಬೆಂಬಲ ಬೆಲೆ ಆಧಾರದ ಮೇಲೆ ತಾಲೂಕಿನ ರಕ್ಕಸಗಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ತೊಗರಿ ತುಂಬುವ ಕೆಲಸ ಮಾಡಿರುವ ತಮಗೆ ಸಂಘದ ಅಧಿಕಾರಿ ಕೂಲಿ ನೀಡದೇ ಸತಾಯಿಸುತ್ತಿದ್ದು ಅವರ ಮೇಲೆ ಕ್ರಮ ಜರುಗಿಸಿ ಕೂಲಿ ಪಾವತಿಸುವಂತೆ ಸಂಘದ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಿರುವ ಹಮಾಲರು ತಹಶೀಲ್ದಾರ್‌ರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

ಕೂಲಿ ಕೊಡದಿರುವ ಪಿಕೆಪಿಎಸ್ ಅಧಿಕಾರಿ ಮೇಲೆ ಕ್ರಮಕ್ಕೆ ಒತ್ತಾಯ.

ಪಟ್ಟಣದ ತಹಶೀಲ್ದಾರ್ ಕಛೇರಿಗೆ ಆಗಮಿಸಿದ ಹಮಾಲರು, ಕೃಷಿ ಉತ್ಪನ್ನ ಮಾರುಕಟ್ಟೆಯ ಅಧಿಕೃತ ಹಮಾಲರಾಗಿರುವ ನಮ್ಮನ್ನು ರಕ್ಕಸಗಿ ಪಿಕೆಪಿಎಸ್‌ನಲ್ಲಿ ತೊಗರಿ ತುಂಬಲು ಹಮಾಲಿಗಳೆಂದು ಕೂಲಿ ಮಾಡಲು ಪ್ರತಿ ಕ್ವಿಂಟಾಲ್‌ಗೆ 50 ರೂ. ಕೊಡುವುದಾಗಿ ಹೇಳಿ ಕೆಲಸ ಮಾಡಿಸಿಕೊಂಡಿದ್ದಾರೆ. ಏಳು ಜನ ಕೂಲಿಕಾರರದ್ದು ಒಟ್ಟು 1.60 ಲಕ್ಷ ರೂ. ಪಾವತಿಸಬೇಕಿತ್ತು. ಆದರೆ ಕೂಲಿ ಮಾಡಿ ನಾಲ್ಕು ತಿಂಗಳು ಗತಿಸಿದರೂ ಕೂಲಿ ಕೊಡದೇ ಸತಾಯಿಸುತ್ತಿದ್ದಾರೆ. ಕೂಲಿ ನಂಬಿಯೇ ಬದುಕು ಸಾಗಿಸುವ ನಮಗೆ ಬೇರೆ ಗತಿಯಿಲ್ಲದೇ ಉಪವಾಸ, ವನವಾಸದಿಂದ ಬಳಲುವಂತಾಗಿದೆ ಎಂದು ಆರೋಪಿಸಿದರು.

ರಕ್ಕಸಗಿ ಪಿ.ಕೆ.ಪಿ.ಎಸ್‌ನ ವ್ಯಾಪ್ತಿಯಲ್ಲಿ ತೊಗರಿ ಮಾರಾಟಕ್ಕೆ ಬಂದಿರುವ ರೈತರಿಂದ ಕ್ವಿಂಟಾಲ್‌ಗೆ 130 ರೂ.ಗಳಂತೆ ಹಣ ವಸೂಲಿ ಮಾಡಿದ್ದು ಇದರಲ್ಲಿ ನಮಗೆ 50 ರೂ.ಕೊಡಲೂ ಒಪ್ಪಿದ್ದರೂ ಸಹ ಯಾವುದೇ ಕೂಲಿ ಹಣ ಈವರೆಗೆ ಕೊಟ್ಟಿಲ್ಲ. ಕೂಡಲೇ ನಮಗೆ ಬರಬೇಕಾದ ಕೂಲಿ ಹಣ ಕೊಡಿಸಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಜಿ.ಎಸ್.ಮಳಗಿ ಅವರು ಮಾತನಾಡಿ, ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಮಾತನಾಡಿ ಹಮಾಲರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರೈತ ಮುಖಂಡ ಶಿವಬಸ್ಸು ಸಜ್ಜನ, ಮಲ್ಲಪ್ಪ ಹೊಸಮನಿ, ಹಮಾಲರಾದ ವಿ.ಬಿ.ಮದರಿ, ಸಿ.ಎಂ. ಒಣರೊಟ್ಟಿ, ಬಸವರಾಜ ತಾಂಬ್ರೊಳ್ಳಿ, ಬಸವರಾಜ ಹಿರೇಕುರಬರ, ಹಣಮಂತ ಅಂದೇಲಿ, ಎ.ಬಿ.ಅಗಸರ,ಎ.ಆರ್.ತಡಸದ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.