ವಿಜಯಪುರ: ನಗರದ ಹೊರವಲಯದ ಎಸ್ ಹೈಪರ್ ಮಾರ್ಟ್ ಹತ್ತಿರದ ರಂಭಾಪುರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ಸಿಂದಗಿಗೆ ಹೋಗುವ ರಸ್ತೆಯಲ್ಲಿ ಅಪಘಾತ ಸಂಭವಿಸಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ನಲ್ಲಿದ್ದ ಕಾರ್ಮಿಕರಿಗೆ ಗಾಯಗಳಾಗಿವೆ. ಮಹಿಳಾ ಕಾರ್ಮಿಕರು ಸೇರಿ 6-7 ಜನರಿಗೆ ಹೆಚ್ಚು ಪೆಟ್ಟಾಗಿದೆ.
ತಕ್ಷಣ ಸ್ಥಳೀಯರು ಗಾಯಳುಗಳನ್ನು ಆ್ಯಂಬುಲೆನ್ಸ್ ಸಹಾಯದಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಓದಿ:'ನಿನ್ನಂಥ ಅಪ್ಪ ಇಲ್ಲ': ಮಗನಿಗೆ 3 ಕೋಟಿ ರೂ. ಮೌಲ್ಯದ ಕಾರು ಗಿಫ್ಟ್ ನೀಡಿದ ಸೋನು ಸೂದ್