ವಿಜಯಪುರ: ಹೊಲದ ಮಧ್ಯೆ ಅಕ್ರಮ ಗಾಂಜಾ ಬೆಳೆದಿರುವುದನ್ನು ಪತ್ತೆ ಹಚ್ಚಿದ ಅಬಕಾರಿ ಪೊಲೀಸರು, ದಾಳಿ ನಡೆಸಿ 5 ಲಕ್ಷ 30 ಸಾವಿರ ಮೌಲ್ಯದ 53 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದ ರಾಮು ಗಗನಮಾಲಿ ಎಂಬುವವರು ತಮ್ಮ ಹೊಲದಲ್ಲಿರುವ ಬೆಳೆಗಳ ಮಧ್ಯೆ ಹಸಿ ಗಾಂಜಾ ಬೆಳೆದಿದ್ದರು. ಈ ಕುರಿತು ಮಾಹಿತಿ ಕಲೆ ಹಾಕಿದ ಅಬಕಾರಿ ಅಪರ ಆಯುಕ್ತ ಡಾ. ಮಂಜುನಾಥ ಹಾಗೂ ಅಬಕಾರಿ ಜಂಟಿ ಆಯುಕ್ತೆ ಸೈಯಿದಾ ಆಫ್ರೀನಾ ನೇತೃತ್ವದ ತಂಡ, ದಾಳಿ ನಡೆಸಿ ಹೊಲದಲ್ಲಿ ಬೆಳೆದಿದ್ದ 315 ಹಸಿ ಗಾಂಜಾ ಗಿಡಗಳು ಹಾಗೂ 3 ಕೆಜಿ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಇದರ ಬೆಲೆ 5 ಲಕ್ಷ 30 ಸಾವಿರ ಎಂದು ಅಂದಾಜಿಸಲಾಗಿದೆ.
ಓದಿ: ನವಲಿ ಗ್ರಾಮದ ಸಮೀಪ ಸಮತೋಲಿತ ನೀರು ಸಂಗ್ರಹಣಾ ಜಲಾಶಯ ನಿರ್ಮಾಣ: ಸಿಎಂ ಅಧ್ಯಕ್ಷತೆಯಲ್ಲಿ ಸಭೆ
ಹೊಲದ ಮಾಲೀಕ ರಾಮು ಗಗನಮಾಲಿ ಪರಾರಿಯಾಗಿದ್ದು, ಈತನ ವಿರುದ್ದ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.