ವಿಜಯಪುರ : ಜಿಲ್ಲೆಯಲ್ಲಿ ಮತ್ತೆ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 204ಕ್ಕೆ ಏರಿದೆ.
ಇಂದು ಸೋಂಕು ತಗುಲಿದ ಇಬ್ಬರೂ ಸಹ ವೃದ್ಧರೆ ಆಗಿದ್ದಾರೆ. ಒಬ್ಬರು ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದಾಗ ಅವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೋರ್ವ ವೃದ್ಧರು ಕಂಟೇನ್ಮೆಂಟ್ ಝೋನ್ ನಲ್ಲಿದ್ದವರಾಗಿದ್ದಾರೆ.
ಇಂದು 23 ಜನ ಸೇರಿ ಈವರೆಗೆ 131 ಜನ ಕೊರೊನಾ ಕಂಟಕದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. 67 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 6 ಮಂದಿ ಕೊರೊನಾ ಕಂಟಕಕ್ಕೆ ತುತ್ತಾಗಿದ್ದಾರೆ.