ETV Bharat / state

ವಿಜಯಪುರ: ಐವರು ವಿಚಾರಣಾಧೀನ ಖೈದಿಗಳಿಗೆ ಕೊರೊನಾ - ಕೊರೊನಾ ವೈರಸ್​

ಪ್ರತ್ಯೇಕ ಕೋವಿಡ್ ವಾರ್ಡ್ ರೂಮ್​​ ಮಾಡಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ ಪೊಲೀಸ್ ಸಬ್​​​ಇನ್ಸ್​​​ಪೆಕ್ಟರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇಬ್ಬರಿಗೆ ಹಾಗೂ ಸಿಂದಗಿ, ದೇವರಹಿಪ್ಪರಗಿ ತಾಲೂಕಿನ ಸರ್ಕಾರಿ ಕಚೇರಿಯ ಸಿಬ್ಬಂದಿ ಸೇರಿ 13 ಜನರಲ್ಲಿ ಪಾಸಿಟಿವ್ ಬಂದಿದೆ..

jail
ಕಾರಾಗೃಹ
author img

By

Published : Jul 18, 2020, 8:57 PM IST

ವಿಜಯಪುರ : ಪೆರೋಲ್​​ ಮೇಲೆ ಬಿಡುಗಡೆಯಾಗಿ ಮರಳಿ ಜೈಲಿಗೆ ಬಂದ ಖೈದಿಗಳಿಬ್ಬರಿಗೆ ಕೊರೊನಾ ಕಾಣಿಸಿದ ನಂತರ ಐವರು ವಿಚಾರಣಾಧೀನ ಕೈದಿಗಳಿಗೂ ಸೋಂಕು ಅಂಟಿದೆ. ಇಂದು ಒಟ್ಟು 176 ಹೊಸ ಕೊರೊನಾ ಪ್ರಕರಣ ದಾಖಲಾಗಿವೆ.

ಇತ್ತೀಚಿಗೆ ಶಿಕ್ಷೆಗೆ ಗುರಿಯಾಗಿದ್ದ ಕೆಲ ಖೈದಿಗಳು ನಾನಾ ಕಾರಣದಿಂದ ಪೆರೋಲ್​​ ಮೇಲೆ ಹೋಗಿದ್ದರು. ಅವರ ಅವಧಿ ಮುಗಿದ ನಂತರ ವಾಪಸ್ ವಿಜಯಪುರದ ದರ್ಗಾ ಜೈಲಿಗೆ ಬಂದಾಗ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಇಬ್ಬರಿಗೆ ಸೋಂಕು ದೃಢಪಟ್ಟಿತ್ತು. ಅದೇ ಜೈಲಿನಲ್ಲಿದ್ದ ಐವರು ವಿಚಾರಣಾಧೀನ ಆರೋಪಿಗಳಿಗೂ ಈಗ ಸೋಂಕು ತಗುಲಿದೆ.

ಕೊರೊನಾ ಕುರಿತಂತೆ ಜಿಲ್ಲಾಧಿಕಾರಿ ವೈ ಎಸ್ ​ಪಾಟೀಲ್‌ ಮಾಹಿತಿ

ಪ್ರತ್ಯೇಕ ಕೋವಿಡ್ ವಾರ್ಡ್ ರೂಮ್​​ ಮಾಡಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ ಪೊಲೀಸ್ ಸಬ್​​​ಇನ್ಸ್​​​ಪೆಕ್ಟರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇಬ್ಬರಿಗೆ ಹಾಗೂ ಸಿಂದಗಿ, ದೇವರಹಿಪ್ಪರಗಿ ತಾಲೂಕಿನ ಸರ್ಕಾರಿ ಕಚೇರಿಯ ಸಿಬ್ಬಂದಿ ಸೇರಿ 13 ಜನರಲ್ಲಿ ಪಾಸಿಟಿವ್ ಬಂದಿದೆ.

ಸಿಂಧಗಿಯ ಐದು ಪ್ರದೇಶ ಹಾಗೂ ಪುರಸಭೆಯನ್ನು ಸೀಲ್​​ಡೌನ್ ಮಾಡಲಾಗಿದೆ. ಆರೋಗ್ಯ ಇಲಾಖೆಯ ಮೂವರು ಸಿಬ್ಬಂದಿಗೆ ಸೋಂಕು ತಗುಲಿದ ಕಾರಣ ತಾಲೂಕು ಆಸ್ಪತ್ರೆಗೆ ಸ್ಯಾನಿಟೈಸರ್​​ ಸಿಂಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.