ಉತ್ತರಕನ್ನಡ: ಯಲ್ಲಾಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿವರಾಮ ಹೆಬ್ಬಾರ್ ಯಲ್ಲಾಪುರ ತಾಲೂಕಿನ ಅರಬೈಲಿನಲ್ಲಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.
ಅರಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 64ರಲ್ಲಿ ಪತ್ನಿ ವನಜಾಕ್ಷಿ, ಮಗ ವಿವೇಕ್, ಮಗಳು ಶೃತಿ ಹಾಗೂ ಸೊಸೆ ದಿವ್ಯಾ ಹೆಬ್ಬಾರ್ ಜೊತೆಯಲ್ಲಿ ಆಗಮಿಸಿ, ಮತ ಚಲಾಯಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಅರ್ಹನೋ - ಅನರ್ಹನೋ ಎಂದು ಜನತಾ ಜನಾರ್ಧನನ ಕೋರ್ಟ್ ತೀರ್ಮಾನ ಮಾಡುತ್ತದೆ ಎಂದರು.
ಇನ್ನು, ಕಳೆದ ಒಂದಷ್ಟು ದಿನಗಳಿಂದ ನಡೆಯುತ್ತಿರುವ ವಾದಗಳಿಗೆ ಡಿಸೆಂಬರ್ 9ರಂದು ಉತ್ತರ ಸಿಗಲಿದೆ. ಅಂದು ಪ್ರಕರಣ ಮುಕ್ತಾಯವಾಗುತ್ತದೆ. ಯಾರೂ ಕೂಡ ಊಹೆ ಮಾಡದಷ್ಟು ದೊಡ್ಡ ಪ್ರಮಾಣದ ಅಂತರದಲ್ಲಿ ನಾನು ವಿಜಯ ಸಾಧಿಸುತ್ತೇನೆ ಎಂದರು.