ಶಿರಸಿ(ಉತ್ತರ ಕನ್ನಡ): ಉತ್ತರಕನ್ನಡ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು: ಕೋಳಿ ಫಾರಂ ರಕ್ಷಣೆಗಾಗಿ ಅಕ್ರಮವಾಗಿ ಬೇಲಿಗೆ ಹಾಕಲಾಗಿದ್ದ ವಿದ್ಯುತ್ ತಂತಿ ತಗುಲಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಏಂಟಗದ್ದೆಯಲ್ಲಿ ನಡೆದಿದೆ. ಸರಸ್ವತಿ ನಾರಾಯಣ ಕೊಡಿಯಾ (55) ಸಾವಿಗೀಡಾದ ಮಹಿಳೆ.
ಇವರು ಬಾಳೆಗದ್ದೆ ಸಮೀಪದ ಏಂಟಗದ್ದೆಯಲ್ಲಿ ಜಾನುವಾರು ಮೇಯಿಸಲು ಹೋದ ಸಂದರ್ಭದಲ್ಲಿ ಅಕ್ರಮವಾಗಿ ಹಾಕಲಾಗಿದ್ದ ತಂತಿಗೆ ತಾಗಿ ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದಾರೆ. ಇದು ರಮೇಶ ಕೊಡಿಯಾ ಎಂಬುವರಿಗೆ ಸೇರಿದ ಜಾಗ ಎನ್ನಲಾಗಿದೆ. ಅವರು ಕೊಳಿ ಫಾರಂ ರಕ್ಷಣೆಗಾಗಿ ನೇರವಾಗಿ ಸರ್ವೀಸ್ ಲೈನ್ನಿಂದ ವಿದ್ಯುತ್ ಪಡೆದು ಬೇಲಿಗೆ ಹಾಕಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.
ಜಲಪಾತಕ್ಕೆ ಬಿದ್ದು ಯುವಕ ಮೃತ: ಜಲಪಾತದಲ್ಲಿ ಬಿದ್ದು ಯುವಕ ಮೃತಪಟ್ಟ ಘಟನೆ ಸಿದ್ದಾಪುರದ ಗುಂಡಿಗದ್ದೆ ಫಾಲ್ಸ್ನಲ್ಲಿ ನಡೆದಿದೆ. ಕೋಲಾರ ಮೂಲದ ರಾಘವೇಂದ್ರ ಗೌಡ (25) ಸಾವನ್ನಪ್ಪಿದ ಯುವಕ. ಪ್ರವಾಸಕ್ಕೆಂದು ಗುಂಡಿಗದ್ದೆ ಫಾಲ್ಸ್ಗೆ ಬಂದಿದ್ದ 25 ಜನರಲ್ಲಿ ಓರ್ವ ಯುವಕ ಮೃತಪಟ್ಟಿದ್ದಾನೆ. ಇವರೆಲ್ಲರೂ ಕೋಲಾರದಿಂದ ಪ್ರವಾಸಕ್ಕೆಂದು ಬಂದಿದ್ದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಧಾರಾಕಾರ ಮಳೆ: ಮನೆ ಕುಸಿದು ಮಹಿಳೆ ಸಾವು