ETV Bharat / state

ಜನ್ಮ ನೀಡಿದ ಮೂರೇ ದಿನಕ್ಕೆ ಕೊನೆಯುಸಿರೆಳೆದ ತಾಯಿ: ವೈದ್ಯರ ವಿರುದ್ಧ ಆಕ್ರೋಶ

ಈಕೆಯ ತವರು ಮನೆಯಾದ ಭಟ್ಕಳ ತಾಲೂಕಿನ ಮುಂಡಳ್ಳಿಯಿಂದ ಮೂರು ದಿನದ ಹಿಂದಷ್ಟೇ ತಾಲೂಕಾಸ್ಪತ್ರೆಗೆ ದಾಖಲಾಗಿದ್ದರು.  ಸರ್ಜರಿ ಮಾಡಿ ಮಗುವನ್ನು ಹೊರತೆಗೆಯಲಾಗಿತ್ತು.

ಜನ್ಮ ನೀಡಿದ ಮೂರೇ ದಿನಕ್ಕೆ ತಾಯಿಯ ಸಾವು
author img

By

Published : Oct 31, 2019, 6:23 PM IST

ಭಟ್ಕಳ(ಉತ್ತರಕನ್ನಡ) : ಮಗುವಿಗೆ ಜನ್ಮ ನೀಡಿದ ಮೂರೇ ದಿನಕ್ಕೆ ಬಾಣಂತಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತಾಲೂಕಾಸ್ಪತ್ರೆಯಲ್ಲಿ ಜರುಗಿದೆ.

ಮಾಲತಿ ಸುಧಾಕರ ಆಚಾರಿ ಮೃತ ಬಾಣಂತಿ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈಕೆ ತನ್ನ ತವರು ಮನೆಯಾದ ಭಟ್ಕಳ ತಾಲೂಕಿನ ಮುಂಡಳ್ಳಿಯಿಂದ ಮೂರು ದಿನದ ಹಿಂದಷ್ಟೇ ತಾಲೂಕಾಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಸರ್ಜರಿ ಮೂಲಕ ಮಗುವನ್ನು ಹೊರತೆಗೆದಿದ್ದರು. ನಿನ್ನೆ ರಾತ್ರಿಯಿಂದ ವಿಪರೀತ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ವೈದ್ಯರು ಚಿಕಿತ್ಸೆ ನೀಡಿದರಾದರೂ ಇಂದು ಬೆಳಗ್ಗೆ ಮೃತ ಪಟ್ಟಿದ್ದಾಳೆ.

ಜನ್ಮ ನೀಡಿದ ಮೂರೇ ದಿನಕ್ಕೆ ತಾಯಿಯ ಸಾವು

ಈ ವಿಷಯ ತಿಳಿಯುತ್ತಿದಂತೆ ಮೃತ ಬಾಣಂತಿಯ ಸಂಬಂಧಿಕರೆಲ್ಲ ತಾಲೂಕಾಸ್ಪತ್ರೆಗೆ ಜಮಾಯಿಸಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಭಟ್ಕಳ: ತನ್ನ ಮಗುವಿಗಿ ಜನ್ಮ ನೀಡಿದ ಮೂರು ದಿನದ ನಂತರ ಬಾಣಾಂತಿ ತಾಯಿ ಮೃತ ಪಟ್ಟಿರುವ ಹೃದಯ ವಿದ್ರಾವಕ ಘಟನೆ ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ಗುರುವಾರದಂದು ನಡೆದಿದೆ

Body:ಭಟ್ಕಳ: ತನ್ನ ಮಗುವಿಗಿ ಜನ್ಮ ನೀಡಿದ ಮೂರು ದಿನದ ನಂತರ ಬಾಣಾಂತಿ ತಾಯಿ ಮೃತ ಪಟ್ಟಿರುವ ಹೃದಯ ವಿದ್ರಾವಕ ಘಟನೆ ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ಗುರುವಾರದಂದು ನಡೆದಿದೆ

ಮೃತ ಬಾಣಾಂತಿ ಮಹಿಳೆ ಮಾಲತಿ ಸುಧಾಕರ ಆಚಾರಿ ಬೈಂದೂರು ತಾಲೂಕಿನ ಶಿರೂರು ನಿವಾಸಿ

ಎಂದು ತಿಳಿದು ಬಂದಿದ್ದು .ಮೂಲತಃ ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ಮೃತ ಬಾಣಾಂತಿ ಮಹಿಳೆಯ ತವರು ಮನೆಯಿದ್ದು. ಮೂರು ದಿನದ ಹಿಂದಷ್ಟೇ ತಾಲೂಕಾಸ್ಪತ್ರೆಯಲ್ಲಿ ಸರ್ಜರಿ ಮಾಡಿ ಮಗುವನ್ನು ಹೊರತೆಗೆದಿದ್ದರು. ನಿನ್ನೆ ರಾತ್ರಿಯಿಂದ ವಿಪರೀತ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ವೈದ್ಯರು ಚಿಕಿತ್ಸೆ ನೀಡಲಾಗಿದ್ದು ಇಂದು ಬೆಳಿಗ್ಗೆ ಮಹಿಳೆ ಮೃತ ಪಟ್ಟಿದ್ದಾಳೆ. ಆದರೆ ಮಹಿಳೆಯ ಸಾವಿಗೆ ಕಾರಣ ಏನೆಂದು ತಿಳಿದು ಬಂದಿಲ್ಲವಾಗಿದೆ

ಈ ವಿಷಯ ತಿಳಿಯುತ್ತಿದಂತೆ ಮೃತ ಬಾಣಾಂತಿಯ ಸಂಬಂದಿಕರೆಲ್ಲ ತಾಳುಕಾಸ್ಪತ್ರೆಗೆ ಬಂದು ವೈದ್ಯರ ನಿರ್ಲಕ್ಷ್ಯದಿಂದ ಹೀಗಾಗಿರುದೆಂದು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು. ನಂತರ ಸ್ಥಳಕ್ಕೆ ನಗರ ಠಾಣೆ ಪೊಲೀಸರು  ಹಾಗೂ ಶಾಸಕ ಸುನೀಲ ನಾಯ್ಕ ಸ್ಥಳಕ್ಕೆ ಬಂದು ಎಲ್ಲರನ್ನು ಹತೋಟಿಗೆ ತಂದರು. ನಂತರ ಮಹಿಳೆಯ ಮಹಿಳೆಯ ಸಂಬಂಧಿಕರು ಮೃತ ದೇಹದ ಮರಣೋತ್ತರ ಪರೀಕ್ಷೇ ನಡೆಸಲು ಬಿಡದೆ. ಮಣಿಪಾಲದ ಪಾರೆಂಸಿಕ್ ಲ್ಯಾಬಗೆ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲು ಕಳುಹಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆಯೋ ? ಎಲ್ಲ ಬೇರೆ ಕಾರಣದಿಂದ ಮಹಿಳೆ ಮೃತ ಪಟ್ಟಿದಾಳೆಯೋ? ಎಂದು ಮಣಿಪಾಲದ ಪಾರೆಂಸಿಕ್ ಲ್ಯಾಬನ ರಿಪೋರ್ಟ್ ಕೈ ಸೇರಿದ ಮೇಲೆ ಸಾವಿಗೆ ನಿಖರ ಕಾರಣ ಏನೆಂದು ತಿಳಿಯಲಿದೆ.

ಈ ಬಗ್ಗೆ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆConclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.