ETV Bharat / state

ಮೀನುಗಾರರ ಸಮಸ್ಯೆ ಕುರಿತು ವಿಧಾನಸೌಧದಲ್ಲಿ ಧ್ವನಿ ಎತ್ತಲಾಗುವುದು : ಡಿಕೆಶಿ

author img

By

Published : Jul 7, 2021, 4:07 PM IST

ಹೊನ್ನಾವರದ ಕಾಸರಕೋಡ್​ನಲ್ಲಿ ಬಂದರು ವಿಸ್ತರಣೆ ಯೋಜನೆ ನಡೆದಿದೆ. ಸರ್ಕಾರ ಏನೇ ಯೋಜ‌ನೆ ಜಾರಿ ಮಾಡಿದರೂ ಜನಪರವಾಗಿ ಕಾಂಗ್ರೆಸ್ ಹೋರಾಡುತ್ತದೆ. ಬಂದರು ಬೇರೆಲ್ಲಾದರೂ ಮಾಡಲಿ. ಆದರೆ, ಮೀನುಗಾರರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಿ..

assembly
ಮೀನುಗಾರರ ಸಮಸ್ಯೆ ಕುರಿತು ಡಿಕೆಶಿ ಪ್ರತಿಕ್ರಿಯೆ

ಶಿರಸಿ : ರಾಜ್ಯದ ಕರಾವಳಿ ಭಾಗದ ಜ್ವಲಂತ ಸಮಸ್ಯೆಯಾದ ಮೀನುಗಾರರ ಸಮಸ್ಯೆ ಬಗ್ಗೆ ವಿಧಾನಸೌಧದಲ್ಲಿ ಧ್ವನಿ ಎತ್ತಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಭರವಸೆ ನೀಡಿದ್ದಾರೆ.

ಬುಧವಾರ ಶಿರಸಿಯಲ್ಲಿ ಪತ್ರಕರ್ತರ ಜತೆ ಮಾತ‌ನಾಡಿದ ಅವರು, ಒಬ್ಬ ಮೀನುಗಾರ 10 ಜನರಿಗೆ ಉದ್ಯೋಗ ಸೃಷ್ಟಿ ಮಾಡುತ್ತಾನೆ. ಈ ಕಾರಣ ಕರಾವಳಿ ಜಿಲ್ಲೆಗಳಲ್ಲಿ ಸಂಚರಿಸಿ ಮೀನುಗಾರರ ಸಮಸ್ಯೆ ಆಲಿಸಲಾಗಿದೆ. ಸಮಸ್ಯೆಗಳ ಪಟ್ಟಿಯನ್ನು ಸಿದ್ಧ ಮಾಡಲಾಗಿದ್ದು, ವಿಧಾನಸೌಧದಲ್ಲಿ ಈ ಬಗ್ಗೆ ಧ್ವನಿ ಎತ್ತಲಾಗುವುದು ಎಂದು ತಿಳಿಸಿದ್ರು.

ಹೊನ್ನಾವರದ ಕಾಸರಕೋಡ್​ನಲ್ಲಿ ಬಂದರು ವಿಸ್ತರಣೆ ಯೋಜನೆ ನಡೆದಿದೆ. ಸರ್ಕಾರ ಏನೇ ಯೋಜ‌ನೆ ಜಾರಿ ಮಾಡಿದರೂ ಜನಪರವಾಗಿ ಕಾಂಗ್ರೆಸ್ ಹೋರಾಡುತ್ತದೆ. ಬಂದರು ಬೇರೆಲ್ಲಾದರೂ ಮಾಡಲಿ. ಆದರೆ, ಮೀನುಗಾರರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಿ ಎಂದು ಹೇಳಿದ್ರು. ಇದೇ ವೇಳೆ ಕಾಂಗ್ರೆಸ್​ನಲ್ಲಿ ಯಾವುದೇ ಬಣವಿಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.