ETV Bharat / state

ಕಾರವಾರದಲ್ಲಿ ಜಲಸಾಹಸ ಚಟುವಟಿಕೆ: ರಾಷ್ಟ್ರ, ಅಂತಾರಾಷ್ಟ್ರೀಯ ಪಟುಗಳ ಸಜ್ಜುಗೊಳಿಸುವುದೇ ಗುರಿ

ಅವಕಾಶಗಳಿದ್ದರೂ ತರಬೇತಿ ಮಾರ್ಗದರ್ಶಕರಿಲ್ಲದೆ ಮಂಕಾಗಿದ್ದ ಜಲಸಾಹಸ ಚಟುವಟಿಕೆ ಇದೀಗ ಮತ್ತೆ ಆರಂಭಗೊಂಡಿರುವುದು ಯುವ ಜನತೆಯ ಉತ್ಸಾಹ ಹೆಚ್ಚಿಸಿದೆ.

ಜತ್ನಾದಿಂದ ಜಲಸಾಹಸಿ ಚಟುವಟಿಕೆ
ಜತ್ನಾದಿಂದ ಜಲಸಾಹಸಿ ಚಟುವಟಿಕೆ
author img

By ETV Bharat Karnataka Team

Published : Nov 13, 2023, 7:09 AM IST

Updated : Nov 13, 2023, 2:35 PM IST

ಜತ್ನಾದಿಂದ ಜಲಸಾಹಸ ಚಟುವಟಿಕೆ

ಕಾರವಾರ (ಉತ್ತರ ಕನ್ನಡ) : ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಉತ್ತರಕನ್ನಡದಲ್ಲಿ ಇಲ್ಲಿನ ಕಡಲತೀರಗಳು ಕೂಡ ಅಷ್ಟೇ ಆಕರ್ಷಣೀಯವಾಗಿವೆ. ಈ ಕಡಲುಗಳಲ್ಲಿ ಜಲಸಾಹಸದಂತಹ ಚಟುವಟಿಕೆಗಳಿಗೆ ವಿಫುಲ ಅವಕಾಶಗಳಿದ್ದರೂ ಕಳೆದ ಕೆಲ ವರ್ಷಗಳಿಂದ ಸೂಕ್ತ ವ್ಯವಸ್ಥೆಗಳಿಲ್ಲದೆ ಚಟುವಟಿಕೆಗಳು ಬಂದ್ ಆಗಿದ್ದವು. ಆದರೆ ಇದೀಗ ಕಾರವಾರದ ಕಾಳಿ ಸಂಗಮದ ಪ್ರದೇಶದಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಜಲಸಾಹಸ ಅಕಾಡೆಮಿ(ಜತ್ನಾ)ಯಿಂದ ಜಲಸಾಹಸ ಚಟುವಟಿಕೆ ಪುನಃ ಆರಂಭಗೊಂಡಿದ್ದು, ಕ್ರೀಡಾಸಕ್ತರಲ್ಲಿ ಹೊಸ ಭರವಸೆ ಮೂಡುವಂತಾಗಿದೆ.

ಉತ್ತರಕನ್ನಡ ಹೇಳಿಕೇಳಿ ಪ್ರವಾಸೋದ್ಯಮದ ಮೂಲಕವೇ ಗುರುತಿಸಿಕೊಂಡಿರುವ ಜಿಲ್ಲೆ. ದೇಶ ವಿದೇಶಿ ಪ್ರವಾಸಿಗರು ನಿತ್ಯವೂ ಭೇಟಿ ನೀಡಿ ಇಲ್ಲಿನ ಪ್ರಾಕೃತಿಕ ಸೌಂದರ್ಯ ಸವಿಯುವುದರ ಜೊತೆಗೆ ಕರಾವಳಿ ತೀರದತ್ತವೂ ಹೆಚ್ಚು ಆಕರ್ಷಿತರಾಗುತ್ತಾರೆ. ಇದೇ ಕಾರಣಕ್ಕೆ ಉತ್ತರಕನ್ನಡ ಜಿಲ್ಲೆಯ ಕಡಲತೀರಗಳಲ್ಲಿ ಕಳೆದ ಕೆಲ ವರ್ಷಗಳಿಂದ ಜಲಸಾಹಸ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿತ್ತು. ಹೊರ ರಾಜ್ಯಗಳಿಂದ ತರಬೇತಿ ಪಡೆದ ಕೆಲವರು ಜಿಲ್ಲೆಯ ವಿವಿಧೆಡೆ ಹತ್ತಾರು ಜಲಸಾಹಸ ಚಟುವಟಿಕೆಗಳನ್ನು ಪ್ರಾರಂಭಿಸಿ ಪ್ರವಾಸಿಗರಿಗೆ ಸೇವೆ ಒದಗಿಸಿದ್ದರು.

ಈ ಹಿಂದೆ ಇಂತಹವರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಆರಂಭಿಸಿದ್ದ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಜಲಸಾಹಸ ಅಕಾಡೆಮಿ ಸೂಕ್ತ ವ್ಯವಸ್ಥೆಗಳಿಲ್ಲದೆ ತರಬೇತಿ ಬಂದ್ ಆಗಿತ್ತು. ಆದರೆ, ಮತ್ತೆ ಸದಾಶಿವಗಡದ ಕಾಳಿ ನದಿ ದಂಡೆ ಮೇಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಜಲಸಾಹಸ ಅಕಾಡೆಮಿಯಿಂದ ಜಲಸಾಹಸಿ ಚಟುವಟಿಕೆಗಳ ಶಿಬಿರ ಆರಂಭಗೊಂಡಿದೆ. 10 ದಿನದ ಈ ಬೇಸಿಗೆ ಶಿಬಿರದಲ್ಲಿ ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರ ಸೇರಿದಂತೆ ಇನ್ನಿತರ ಭಾಗಗಳಿಂದ ಒಟ್ಟು 30 ಮಂದಿ ಯುವಕ ಯುವತಿಯರು ಪಾಲ್ಗೊಂಡಿದ್ದಾರೆ. ನವೆಂಬರ್ 18 ರಿಂದ ಮತ್ತೊಂದು ಶಿಬಿರ ಇಲ್ಲಿಯೇ ನಡೆಯಲಿದೆ ಎಂದು ತರಬೇತುದಾರ ಪ್ರಕಾಶ ಹರಿಕಂತ್ರ ಮಾಹಿತಿ ನೀಡಿದರು.

ಇನ್ನು ಶಿಬಿರದಲ್ಲಿ ಪ್ರಮುಕವಾಗಿ ಶಿಬಿರಾರ್ಥಿಗಳಿಗೆ ಈಜು ತರಬೇತಿ, ರ‍್ಯಾಪ್ಟಿಂಗ್, ಕಯಾಕಿಂಗ್, ರೆಸ್ಕ್ಯೂ ತರಬೇತಿ ನೀಡಲಾಗುತ್ತಿದೆ. ನ.18 ರಂದು ಮತ್ತೊಂದು ತಂಡಕ್ಕೂ ಇದೇ ರೀತಿ ತರಬೇತಿ ನೀಡಲಾಗುತ್ತದೆ. ಬಳಿಕ ಇಲ್ಲಿ ತರಬೇತಿ ಪಡೆದ ಎರಡು ತಂಡದಲ್ಲಿನ ಶಿಬಿರಾರ್ಥಿಗಳಿಗೆ ರ‍್ಯಾಂಕಿಂಗ್ ನೀಡಿ 40 ಮಂದಿ ಆಯ್ಕೆ ಮಾಡಿ ಅವರನ್ನು ಅಡ್ವಾನ್ಸ್ ಜಲಸಾಹಸ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ತರಬೇತಿ ಪಡೆದವರು ಮುಂದೆ ರಾಜ್ಯ, ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ. ಅಲ್ಲದೆ ಸ್ವ ಉದ್ಯೋಗ, ರೆಸ್ಕ್ಯೂ ತಂಡ, ಇಲ್ಲವೇ ಜಲಸಾಹಸ ಚಟುವಟಿಕೆಗಳನ್ನು ಕೂಡ ಪ್ರಾರಂಭಿಸಬಹುದಾಗಿದೆ.

ತರಬೇತಿ ಪಡೆಯುತ್ತಿರುವವರು ಕೂಡ ಉತ್ಸಾಹದಲ್ಲಿಯೇ ಪಾಲ್ಗೊಂಡಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ. ಬಂದ ಎರಡೇ ದಿನದಲ್ಲಿ ಈಜು ಕಲಿತು ಇದೀಗ ರ‍್ಯಾಪ್ಟಿಂಗ್ ಕೂಡ ಮಾಡುತ್ತಿದ್ದೇವೆ. ತರಬೇತಿ ಶಿಬಿರ ಸಾಕಷ್ಟು ಸಹಕಾರಿಯಾಗಿದ್ದು, ಸ್ವ ಉದ್ಯೋಗಕ್ಕೂ ಇದು ಬುನಾದಿಯಾಗಿದೆ ಎಂದು ತರಬೇತಿಯಲ್ಲಿ ಪಾಲ್ಗೊಂಡ ಬೆಂಗಳೂರು ಮೂಲದ ಶಿಬಿರಾರ್ಥಿ ಮೌಲ್ಯ ಎಂಬುವವರು ಹೇಳಿದರು.

ಇದನ್ನೂ ಓದಿ : ಕುಮಟಾದಲ್ಲಿ 'ಹೊಸ್ತು ಹಬ್ಬ'ದ ಸಂಭ್ರಮ: ಗದ್ದೆಗೆ ತೆರಳಿ ಪೂಜೆ ಸಲ್ಲಿಸುವ ಇಡೀ ಊರ ಜನ

Last Updated : Nov 13, 2023, 2:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.