ಉತ್ತರಕನ್ನಡ: ಸಮುದ್ರದಲ್ಲಿ ಈಜಾಡುವಾಗ ಅಲೆಗಳಿಗೆ ಸಿಲುಕಿ ಕೊಚ್ಚಿಹೊಗುತ್ತಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿರುವ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಸಾಗರ್ ಯಾದಲ್ (24) ರಕ್ಷಣೆಗೊಳಗಾದ ಪ್ರವಾಸಿಗ. ಬೆಂಗಳೂರಿನ ಮಣಿಪುರಂ ಗೋಲ್ಡ್ನಿಂದ 20 ಮಂದಿ ಸಿಬ್ಬಂದಿ ಸಿಗಂದೂರು ಹಾಗೂ ಕೊಲ್ಲೂರು ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಬಳಿಕ ಮುರುಡೇಶ್ವರಕ್ಕೆ ಆಗಮಿಸಿದ್ದರು. ಅದರಲ್ಲಿ ಐವರು ನೀರಿನಲ್ಲಿ ಇಳಿದು ಈಜಾಡುತ್ತಿರುವಾಗ ಸಾಗರ್ ಅಲೆಗೆ ಸಿಲುಕಿ ಸಮುದ್ರಪಾಲಾಗುತ್ತಿದ್ದ. ಅಷ್ಟರಲ್ಲಿ ಜೊತೆಯಲ್ಲಿದ್ದವರು ಕೂಗಿಕೊಂಡಾಗ ಹತ್ತಿರವೇ ಇದ್ದ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.