ETV Bharat / state

ಪಾರ್ಟಿ ನೆಪದಲ್ಲಿ ಕೊಲೆ ಆರೋಪ, ಅಪಘಾತ ಎಂದು ಬಿಂಬಿಸುವ ಯತ್ನ: ತನಿಖೆಗೆ ಮೃತನ ಸಂಬಂಧಿಕರ ಆಗ್ರಹ

ಪಾರ್ಟಿ ಕೊಡಿಸುವುದಾಗಿ ಸ್ನೇಹಿತನನ್ನು ಕರೆದುಕೊಂಡು ಹೋಗಿ ಕೊಲೆಗೈದು ನಂತರ ಇದನ್ನು ಅಪಘಾತವೆಂದು ಬಿಂಬಿಸಲಾಗಿದೆ ಆದ್ದರಿಂದ ನಾಪತ್ತೆಯಾದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಆಂದ್ಲೆ ಕ್ರಾಸ್​ ಬಳಿ ಸಾವನ್ನಪ್ಪಿದ ರವಿ ಹರಿಕಂತ್ರ ಸಂಬಧಿಕರು ಆಗ್ರಹಿಸಿದ್ದಾರೆ.

ನಾಪತ್ತೆಯಾದವರ ಬಂಧನಕ್ಕೆ ಆಗ್ರಹಿಸಿ ಮನವಿ
author img

By

Published : Oct 31, 2019, 8:30 AM IST

ಕಾರವಾರ: ಅಂಕೋಲಾದ ಆಂದ್ಲೆಕ್ರಾಸ್ ಬಳಿ ಇತ್ತೀಚೆಗೆ ಶವವಾಗಿ ಪತ್ತೆಯಾಗಿದ್ದ ರವಿ ಹರಿಕಂತ್ರ ಅವರ ಸಾವು ಅನುಮಾನಸ್ಪದವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಮೃತರ ಸಂಬಂಧಿಕರು ಡಿವೈಎಸ್‌ಪಿ ಶಂಕರ ಮರಿಹಾಳ ಹಾಗೂ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಒತ್ತಾಯಿಸಿದರು.

ಅಂಕೋಲಾ ತಾಲೂಕಿನ ಶಿರೂರಿನ ರವಿ ಸುರೇಶ ಹರಿಕಂತ್ರ ಎಂಬಾತರನ್ನು ಅವರ ಮೂವರು ಸ್ನೇಹಿತರು ಪಾರ್ಟಿ ಕೊಡಿಸುವದಾಗಿ ಕರೆದೊಯ್ದು ಕೊಲೆ ಮಾಡಿದ್ದಾರೆ. ನಂತರ ಅಪಘಾತದಲ್ಲಿ ರವಿ ಸಾವನಪ್ಪಿದ್ದಾನೆಂದು ಬಿಂಬಿಸಲಾಗಿದೆ. ಕೊಲೆ ನಡೆದ ನಂತರ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಹೇಳಿದರು.

ನಾಪತ್ತೆಯಾದವರ ಬಂಧನಕ್ಕೆ ಆಗ್ರಹಿಸಿ ಮನವಿ

ಆರೋಪಿತರಲ್ಲಿ ಓರ್ವನ‌ ಸಹೋದರಿಯನ್ನು ರವಿ ಪ್ರೀತಿಸುತ್ತಿದ್ದ. ಈ ಸಂಬಂಧ ಹಲವು ಬಾರಿ ಜಗಳವಾಗಿ ಬಳಿಕ ಬುದ್ಧಿ ಮಾತು ಹೇಳಿ ಮುಗಿಸಲಾಗಿತ್ತು. ಆದರೆ ಇದೇ ದ್ವೇಷದಿಂದ ಕೊಲೆ ನಡೆದಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ರವಿ ಕೊಲೆಯಾಗುವದಕ್ಕೂ ಕೆಲ ಗಂಟೆಗಳ ಮೊದಲು ತನ್ನ ತಾಯಿಯೊಂದಿಗೆ ಪೋನ್‌ನಲ್ಲಿ ಮಾತನಾಡಿದ್ದ. ಆರೋಪಿಗಳ ಹೆಸರು ತಿಳಿಸಿ ಅವರ ಜೊತೆ ಪಾರ್ಟಿಯಲ್ಲಿರುವದಾಗಿ ಹೇಳಿಕೊಂಡಿದ್ದಾನೆ. ಆದರೆ ಬಳಿಕ ಅಪಘಾತದ ಸುದ್ದಿ ಬಂದಿದ್ದು, ಅವನು ಹೇಳಿದವರು ಯಾರು ಇರಲಿಲ್ಲ. ಅಪಘಾತದಿಂದ ಈ ಸಾವು ಸಂಭವಿಸಿದೆ ಎಂದು ಬಿಂಬಿಸಲಾಗಿದೆ. ಅಪಘಾತ ಆಗಿದ್ದರೆ ಘಟನೆ ನಡೆದ ನಂತರ ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಬೇಕಿತ್ತು. ಆದರೆ, ಆರೋಪಿತರು ತಲೆ ಮರೆಸಿಕೊಂಡಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಲು ಎಂದು ಒತ್ತಾಯಿಸಿದರು.

Intro:Body:ಅಪಘಾತದಲ್ಲಿ ಮೃತಪಟ್ಟವನ ಸುತ್ತ ಹುಟ್ಟಿದ ಅನುಮಾನ... ನಾಪತ್ತೆಯಾದ ಮೂವರ ಬಂಧನಕ್ಕೆ ಆಗ್ರಹ

ಕಾರವಾರ: ಅಂಕೋಲಾದ ಆಂದ್ಲೆಕ್ರಾಸ್ ಬಳಿ ಇತ್ತೀಚೆಗೆ ಶವವಾಗಿ ಪತ್ತೆಯಾಗಿದ್ದ ರವಿ ಹರಿಕಂತ್ರ ಅವರ ಸಾವು ಅನುಮಾನಸ್ಪದವಾಗಿದ್ದು, ಸೂಕ್ತ ತನಿಖೆವನಡೆಸುವಂತೆ ಆಗ್ರಹಿಸಿ ಮೃತರ ಸಂಬಂಧಿಕರು ಡಿವೈಎಸ್‌ಪಿ ಶಂಕರ ಮರಿಹಾಳ ಹಾಗೂ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಒತ್ತಾಯಿಸಿದರು.
ಅಂಕೋಲಾ ತಾಲ್ಲೂಕಿನ ಶಿರೂರಿನ ರವಿ ಸುರೇಶ ಹರಿಕಂತ್ರ ಎಂಬಾತರನ್ನು ಅವರ ಮೂವರು ಸ್ನೇಹಿತರು ಪಾರ್ಟಿ ಕೊಡಿಸುವದಾಗಿ ಕರೆದೊಯ್ದು ಕೊಲೆ ಮಾಡಿದ್ದಾರೆ. ನಂತರ ಅಪಘಾತದಲ್ಲಿ ರವಿ ಸಾವನಪ್ಪಿದ್ದಾನೆಂದು ಬಿಂಬಿಸಲಾಗಿದೆ. ಕೊಲೆ ನಡೆದ ನಂತರ ಮೂವರು ಆರೋಪಿತರು ತಲೆ ಮರೆಸಿಕೊಂಡಿದ್ದು, ಅವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಹೇಳಿದರು. ಆರೋಪಿತರಲ್ಲಿ ಓರ್ವನ‌ ಸಹೋದರಿಯನ್ನು ರವಿ ಪ್ರೀತಿಸುತ್ತಿದ್ದ. ಈ ಸಂಬಂಧ ಹಲವು ಭಾರಿ ಜಗಳವಾಗಿ ಬಳಿಕ ಬುದ್ದಿಮಾತಲ್ಲಿ ಮುಗಿಸಲಾಗಿತ್ತು. ಆದರೆ ಇದೇ ದ್ವೇಷದಿಂದ ಕೊಲೆ ನಡೆದಿದೆ ಎಂದು ಆರೋಪಿಸಿದರು.
ರವಿ ಕೊಲೆಯಾಗುವದಕ್ಕೂ ಕೆಲ ಗಂಟೆಗಳ ಮೊದಲು ತನ್ನ ತಾಯಿಯೊಂದಿಗೆ ಪೋನ್‌ನಲ್ಲಿ ಮಾತನಾಡಿದ್ದು, ಆರೋಪಿಗಳ ಹೆಸರು ತಿಳಿಸಿ ಅವರ ಜೊತೆ ಪಾರ್ಟಿಯಲ್ಲಿರುವದಾಗಿ ಹೇಳಿಕೊಂಡಿದ್ದಾನೆ. ಆದರೆ ಬಳಿಕ ಅಪಘಾತದ ಸುದ್ದಿ ಬಂದಿದ್ದು, ಅವನು ಹೇಳಿದವರು ಯಾರು ಇರಲಿಲ್ಲ. ಅಪಘಾತದಿಂದ ಈ ಸಾವು ಸಂಭವಿಸಿದೆ ಎಂದು ಬಿಂಬಿಸಲಾಗಿದೆ. ಅಪಘಾತ ಆಗಿದ್ದರೆ ಘಟನೆ ನಡೆದ ನಂತರ ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಬೇಕಿತ್ತು. ಆದರೆ, ಆರೋಪಿತರು ತಲೆ ಮರೆಸಿಕೊಂಡಿದ್ದಾರೆ. ಕೂಡಲೇ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.