ಕಾರವಾರ: ದೇಶದ ಮಣ್ಣಿನ ಕಂಪಿನ ಆಧಾರದ ಮೇಲೆ ಆರ್ಥಿಕ ನೀತಿಯನ್ನು ಬಿಜೆಪಿ ಸಂಘಟನೆ ನೀಡಿದ್ದು, ಇದನ್ನು ತಿಳಿಯದ ಸೋಕಾಲ್ಡ್ ಆರ್ಥಿಕ ತಜ್ಞರಿಗೆ ಎಲ್ಲಿ ಅರ್ಥವಾಗಬೇಕು ಎಂದು ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.
ಕಾರವಾರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಗಾಂಧೀಜಿ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲ ಆರ್ಥಿಕ ತಜ್ಞರು ಭಾರತದಲ್ಲಿ ಆರ್ಥಿಕ ಪ್ರಗತಿ ಕುಂಠಿತವಾಗಿದೆ. ಆರ್ಥಿಕತೆಯ ಬೆಂಬಲವೇ ಇಲ್ಲ ಎಂದು ಕೆಲ ಸೋಕಾಲ್ಡ್ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಆದರೆ, ಬಿಜೆಪಿ ಸಂಘಟನೆಯು ಏಕಾತ್ಮ ಮಾನವತಾವಾದದ ಅಡಿಯಲ್ಲಿ ಆರ್ಥಿಕತೆ ನೀತಿ ನೀಡಿದ್ದು, ಆ ಪುಸ್ತಕ ಓದಿದವರಿಗೆ ಮಾತ್ರ ಆರ್ಥಿಕತೆಯ ದಿಕ್ಕು ಮತ್ತು ದಾರಿ ಗೊತ್ತಾಗುತ್ತದೆ ಎಂದರು.
ದೇಶವನ್ನು ಮುನ್ನಡೆಸುವ ನಿಟ್ಟಿನಲ್ಲಿ ಪಕ್ಷಕ್ಕೆ ತನ್ನದೆಯಾದ ತತ್ವ ಸಿದ್ದಾಂತವಿದ್ದು, ಅದರಂತೆಯೇ ದೇಶದ ಆರ್ಥಿಕತೆ ಹೇಗಿರಬೇಕು ಎಂಬುದರ ಬಗ್ಗೆಯೂ ಸ್ಪಷ್ಟ ಕಲ್ಪನೆ ಇದೆ. ಇತ್ತೀಚೆಗೆ ಕೆಲವರು ಒಂದು ಪಾರ್ಟಿಯಲ್ಲಿದ್ದು ಅಲ್ಲಿ ಸೀಟ್ ಕೊಟ್ಟಿಲ್ಲ ಅಂದ್ರೇ ಇನ್ನೊಂದು ಪಾರ್ಟಿಗೆ ಹಾರುತ್ತಾರೆ. ಎಲ್ಲಿ ಹೋದ್ರು ಒಂದೇ ಮುಖ ನೋಡುವ ಹಾಗಾಗಿದೆ. ಆದರೆ, ಈ ತರ ಎಲ್ಲ ಟ್ರೈನ್ ಹತ್ತಿ ಬಂದಿರುವ ಸಮುದಾಯ ನಮ್ಮ ಪಕ್ಷವಲ್ಲ ಎಂದು ಅನಂತಕುಮಾರ್ ಹೆಗಡೆ ಹೇಳಿದ್ದಾರೆ.