ETV Bharat / state

ಉ.ಕನ್ನಡದಲ್ಲಿ ಶಾಲೆ ಪ್ರಾರಂಭಕ್ಕೆ ಸಿದ್ಧತೆ: ಪಾಲಕರೇ ಇಲ್ಲಿದೆ ಮಹತ್ವದ ಮಾಹಿತಿ.. - ಜನವರಿ 1ರಂದು ಶಾಲೆ ಪ್ರಾರಂಭ

ಜನವರಿ 1ರಿಂದ ಶಾಲಾ- ಕಾಲೇಜುಗಳನ್ನು ಪುನಾರಂಭಿಸಲಾಗುತ್ತಿದ್ದು, ಕೋವಿಡ್​ ಮಾರ್ಗಸೂಚಿಗಳನ್ನು ಪಾಲನೆ ಮಾಡಿ ತರಗತಿ ನಡೆಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಸಿಇಒ ಎಂ.ಪ್ರಿಯಾಂಗ್​ ಹೇಳಿದರು.

ಲ್ಲಾ ಪಂಚಾಯತಿ ಸಿಇಒ ಎಂ.ಪ್ರಿಯಾಂಗ್​
ಲ್ಲಾ ಪಂಚಾಯತಿ ಸಿಇಒ ಎಂ.ಪ್ರಿಯಾಂಗ್​
author img

By

Published : Dec 24, 2020, 12:07 PM IST

ಕಾರವಾರ: 10 ಮತ್ತು 12ನೇ ತರಗತಿಯ ಮಕ್ಕಳಿಗೆ ಜನವರಿ 1ರಿಂದ ಶಾಲಾ- ಕಾಲೇಜುಗಳನ್ನು ಪುನಾರಂಭಿಸಲಾಗುತ್ತಿದ್ದು, ಪಾಲಕ-ಪೋಷಕರ ಅನುಮತಿ ಪತ್ರದೊಂದಿಗೆ ಮಕ್ಕಳು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ ತರಗತಿಗಳಿಗೆ ಹಾಜರಾಗಬಹುದು ಎಂದು ಜಿಲ್ಲಾ ಪಂಚಾಯತಿ ಸಿಇಒ ಎಂ.ಪ್ರಿಯಾಂಗ್​​ ತಿಳಿಸಿದರು.

ಜಿಲ್ಲಾ ಪಂಚಾಯತಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಆದರೆ ಈ ಸಂದರ್ಭದಲ್ಲಿ ಹಾಜರಾತಿ ಕಡ್ಡಾಯವಲ್ಲ. ಈಗಾಗಲೇ ಇರುವ ಆನ್‌ಲೈನ್ ಹಾಗೂ ಚಂದನ ತರಗತಿಗಳು ಹಾಗೆಯೇ ಮುಂದುವರಿಯಲಿದ್ದು, ಪ್ರಾಯೋಗಿಕವಾಗಿ ತರಗತಿಗಳನ್ನು ತೆರೆಯಲು ಸರ್ಕಾರ ಸೂಚಿಸಿದೆ ಎಂದರು.

ಲ್ಲಾ ಪಂಚಾಯತಿ ಸಿಇಒ ಎಂ.ಪ್ರಿಯಾಂಗ್​

ಶಾಲಾ- ಕಾಲೇಜುಗಳನ್ನು ತೆರೆಯದೇ ಸಾಕಷ್ಟು ದಿನಗಳಾಗಿರುವುದರಿಂದ ಶೌಚಾಲಯ ಸೇರಿದಂತೆ ಕೊಠಡಿಗಳು ಅಸ್ವಚ್ಛತೆಯಿಂದ ಕೂಡಿರುತ್ತವೆ. ಹೀಗಾಗಿ ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯ ಶಿಕ್ಷಕರಿಗೆ ಸ್ವಚ್ಛತೆ ಕೈಗೊಳ್ಳಲು ಡಿಡಿಪಿಐಗಳ ಮೂಲಕ ಸೂಚನೆ ನೀಡಲಾಗಿದೆ. ಗ್ರಾಮೀಣ ಶಾಲೆಗಳಲ್ಲಿ ಗ್ರಾಮ ಪಂಚಾಯತಿ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಆಯಾ ಸ್ಥಳೀಯ ಸಂಸ್ಥೆಗಳಿಂದ ಸ್ಯಾನಿಟೈಸ್ ಮಾಡಲು ಸೂಚಿಸಲಾಗಿದೆ. ಡಿ.30ರ ಒಳಗೆ ಶಾಲಾ- ಕಾಲೇಜುಗಳು ತರಗತಿಗಳನ್ನು ನಡೆಸಲು ಸಜ್ಜಾಗಿರಲಿದೆ ಎಂದು ತಿಳಿಸಿದರು.

ಶಾಲೆಗೆ ಬರುವ ವಿದ್ಯಾರ್ಥಿಗಳು ಪಾಲಕ- ಪೋಷಕರಿಂದ ‘ಆಕ್ಷೇಪಣೆ ಇಲ್ಲ’ (ಎನ್‌ಒಸಿ) ಎಂಬ ಪ್ರಮಾಣಪತ್ರವನ್ನು ತರಬೇಕು. ಕಡ್ಡಾಯವಾಗಿ ಶಾಲೆಗೆ ಬರಬೇಕೆಂದು ಎಲ್ಲಿಯೂ, ಯಾರನ್ನೂ ಒತ್ತಾಯಿಸುವುದಿಲ್ಲ. ಖಾಸಗಿ ಶಾಲೆಗಳು ಕೂಡ ಇದನ್ನು ಪಾಲನೆ ಮಾಡಬೇಕಿದೆ. ಮಧ್ಯಾಹ್ನದ ಬಿಸಿಯೂಟ ಇರುವುದಿಲ್ಲ. ಆದರೆ, ಅವಶ್ಯವಿರುವವರಿಗೆ ಬಿಸಿ ನೀರನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತದೆ. ಬೆಳಿಗ್ಗೆ ಮಾತ್ರ ತರಗತಿಗಳು ನಡೆಯಲಿದ್ದು, 10 ನಿಮಿಷಗಳ ವಿರಾಮದೊಂದಿಗೆ ಮೂರು ಪಿರಿಯಡ್ ನಡೆಯಲಿದೆ. ಅತಿ ಚಿಕ್ಕ ಕೊಠಡಿಯಾದರೆ ಗರಿಷ್ಠ 15 ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಿಕೊಂಡು ಪಾಠ ಮಾಡಲಾಗುತ್ತದೆ. ಮಾಸ್ಕ್​ಗಳನ್ನು ವಿದ್ಯಾರ್ಥಿಗಳು ಮನೆಯಿಂದಲೇ ತಂದರೆ ಉತ್ತಮ. ಥರ್ಮಲ್ ಸ್ಕ್ಯಾನರ್‌ಗಳನ್ನು ಶಾಲಾಭಿವೃದ್ಧಿ ನಿಧಿಯಲ್ಲಿ ಖರೀದಿಸಲು ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಸೋಪು ಅಥವಾ ಹ್ಯಾಂಡ್ ವಾಶ್ ಲಿಕ್ವಿಡ್‌ಗಳನ್ನು ಇಡಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 2,411 ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 1,569 ಶಿಕ್ಷಕರು ಹಾಗೂ 250ರಷ್ಟು ಪಿಯು ಉಪನ್ಯಾಸಕರು, ಒಟ್ಟು ಸುಮಾರು 4,300ರಷ್ಟು ಸರ್ಕಾರಿ ಶಿಕ್ಷಕರಿಗೆ ಆರ್‌ಟಿಪಿಆರ್ ಪರೀಕ್ಷೆ ನಡೆಸಲು ಡಿ.25ರ ಬಳಿಕ ಶಿಬಿರಗಳನ್ನು ನಡೆಸಲಾಗುತ್ತದೆ. ಎಲ್ಲಾ ಶಾಲೆಗಳಲ್ಲಿ ಐಸೋಲೇಶನ್‌ಗಾಗಿ ಪ್ರತ್ಯೇಕ ಕೋಣೆಯನ್ನು ಸಿದ್ಧವಿಟ್ಟುಕೊಳ್ಳಲು ಸೂಚಿಸಲಾಗಿದ್ದು, ಒಂದುವೇಳೆ ಕೋವಿಡ್ ಲಕ್ಷಣ ಕಂಡುಬಂದ ವಿದ್ಯಾರ್ಥಿಗಳಿಗೆ ಅಲ್ಲಿರಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.