ETV Bharat / state

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರೇ ಹುಷಾರ್​.. ಹೀಗೂ ಮಾಡ್ತಾರೆ ಮೋಸ.. - Department of Minority Welfare

ವಿದ್ಯಾರ್ಥಿ ಶಿಷ್ಯವೇತನಕ್ಕೆ ಬಿಡುಗಡೆಗೊಳಿಸುವ ನೆಪದಲ್ಲೂ ಹಣ ಲೂಟಿ ಮಾಡಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ.

scholarship-cheating-cheating-case
author img

By

Published : Oct 12, 2019, 7:01 PM IST

ಭಟ್ಕಳ: ಇನ್ಮುಂದೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವವರೇ ಎಚ್ಚರಿಕೆಯಿಂದಿರಿ. ವಿದ್ಯಾರ್ಥಿ ಶಿಷ್ಯವೇತನಕ್ಕೆ ಬಿಡುಗಡೆಗೊಳಿಸುವ ನೆಪದಲ್ಲೂ ಹಣ ಲೂಟಿ ಮಾಡಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿ ವೇತನಕ್ಕಾಗಿ 2018-2019ರಲ್ಲಿ ಆನ್​​ಲೈನ್​ ಮೂಲಕ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ಒಟ್ಟು 14 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಸರಿಯಾಗಿ ದಾಖಲೆಗಳನ್ನು ಸಲ್ಲಿಸದ ಮತ್ತು ತಾಂತ್ರಿಕತೆಯಿಂದ ತಪ್ಪು ದಾಖಲೆಗಳ ಸಲ್ಲಿಕೆಯ ಕಾರಣ ಇದರಲ್ಲಿ 2.68 ಲಕ್ಷ ವಿದ್ಯಾರ್ಥಿಗಳ ಅರ್ಜಿ ತಿರಸ್ಕೃತಗೊಂಡಿದ್ದವು. ಆಗಿರುವ ತೊಂದರೆಯನ್ನು ಸರಿಪಡಿಸಿಕೊಳ್ಳಲು ಮರು ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿತ್ತು.

ತಾಲೂಕು ವಿಸ್ತೀರ್ಣಾಧಿಕಾರಿ (ಉಪವಿಭಾಗ) ಶಂಸುದ್ದೀನ

ಅದೇ ರೀತಿ ಮರು ಅರ್ಜಿ ಸಲ್ಲಿಸಿ ವಿದ್ಯಾರ್ಥಿವೇತನ ಪಡೆದಿದ್ದ ಭಟ್ಕಳದ ಇಮ್ತಿಯಾಜ್ ಹುಸೇನ್ ಎಂಬುವರ ಮಗಳ ಖಾತೆಯಿಂದ ಅಪರಿಚಿತನೋರ್ವ ₹12,600 ಎಗರಿಸಿದ್ದಾನೆ. ಅಪರಿಚಿತ ವ್ಯಕ್ತಿ (9986620964 ಸಂಖ್ಯೆಯಿಂದ) ಕರೆ ಮಾಡಿ ಅಲ್ಪಸಂಖ್ಯಾತರ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದ ಕುರಿತು ಮಾಹಿತಿ ಪಡೆದಿದ್ದಾನೆ. ಇನ್ಮುಂದೆ ಈ ರೀತಿ ಆಗದಂತೆ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದಾನೆ. ಅದನ್ನು ನಂಬಿದ ಯುವತಿ ಖಾತೆ ಸಂಖ್ಯೆ ಮತ್ತು ಮೊಬೈಲ್​ಗೆ ಬಂದಿರುವ ಒಟಿಪಿ ಸಂಖ್ಯೆ ನೀಡಿದ್ದಾಳೆ. ಮಾಹಿತಿ ಹಂಚಿಕೊಂಡ ಕೆಲವೇ ಸೆಕೆಂಡ್​ಗಳಲ್ಲಿ ಆಕೆಗೆ ಸತ್ಯಾಂಶ ತಿಳಿಯುವುದರೊಳಗೆ ಖಾತೆಗೆ ಕನ್ನ ಹಾಕಿದ್ದ. ವಿದ್ಯಾರ್ಥಿನಿಯ ತಂಗಿಗೂ ಸೇರಿ ಶಿರಸಿಯಲ್ಲಿ ಇಂತಹ 4 ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಪಾರದರ್ಶಕತೆ ಕಾಪಾಡಿಕೊಳ್ಳಲು ಸರ್ಕಾರವೇ ಆನ್‍ಲೈನ್ ಮೂಲಕವೇ ಅರ್ಜಿ ಆಹ್ವಾನಿಸಿ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡುತ್ತಿದೆ. ಕರೆ ಮಾಡುವ ಅಪರಿಚಿತರಿಗೆ ಯಾವುದೇ ವಿವರ ನೀಡಬಾರದು. ತಮಗೆ ಸಂಶಯ ಬಂದಲ್ಲಿ ಅಲ್ಪಸಂಖ್ಯಾತರ ಅರಿವು ಕೇಂದ್ರಗಳಿಗೆ ದೂರು ಕೊಡಿ. ಹಾಗೂ ಅಲ್ಲಿ ಬೇಕಾದ ಮಾಹಿತಿ ಪಡೆದುಕೊಳ್ಳಿ ಎಂದು ತಾಲೂಕು ವಿಸ್ತೀರ್ಣಾಧಿಕಾರಿ (ಉಪವಿಭಾಗ) ಶಂಸುದ್ದೀನ ಹೇಳಿದ್ದಾರೆ.

Intro:ಭಟ್ಕಳ: ಮನುಷ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದುವರಿದಂತೆ ಜನಸಾಮಾನ್ಯರಿಗೆ ಅರ್ಥವಾಗದ, ಅರಿವಿಗೂ ಬಾರದ ಅಪರಾಧಗಳು ಹೆಚ್ಚುತ್ತಿವೆ. ಮೋಸ ಮಾಡಲು ಹೊಸ ಹೊಸ ವಿಧಾನಗಳು ಅನುಕರಣಯಾಗುತ್ತಿದ್ದು, ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸುವ ನೆಪದಲ್ಲಿ ಸಾವಿರಾರು ರೂ. ಹಣ ಲೂಟಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
Body:ಭಟ್ಕಳ: ಮನುಷ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದುವರಿದಂತೆ ಜನಸಾಮಾನ್ಯರಿಗೆ ಅರ್ಥವಾಗದ, ಅರಿವಿಗೂ ಬಾರದ ಅಪರಾಧಗಳು ಹೆಚ್ಚುತ್ತಿವೆ. ಮೋಸ ಮಾಡಲು ಹೊಸ ಹೊಸ ವಿಧಾನಗಳು ಅನುಕರಣಯಾಗುತ್ತಿದ್ದು, ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸುವ ನೆಪದಲ್ಲಿ ಸಾವಿರಾರು ರೂ. ಹಣ ಲೂಟಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಅಲ್ಪಸಂಖ್ಯಾತರ ನಿರ್ದೇಶನಾಲಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರಾಜ್ಯದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ 2018-2019ರಲ್ಲಿ ಅರ್ಜಿ ಅಹ್ವಾನಿಸಿತ್ತು. ಅರ್ಹ ವಿದ್ಯಾರ್ಥಿಗಳಿಗೆ ಪ್ರೀ ಮೆಟ್ರಿಕ್ ಆದರೆ 1ರಿಂದ 10ನೇ ತರಗತಿ ವರೆಗೂ ಪ್ರತಿ ವರ್ಷ 5 ಸಾವಿರ ವರೆಗೆ, ಪೋಸ್ಟ್ ಮೆಟ್ರಿಕ್ ಆದರೆ 15 ಸಾವಿರ ವರೆಗೆ, ಮೆರಿಟ್ ಕಮ್ ಮಿನ್ಸ್ ಸ್ಕಾಲರಶಿಫ್ (ತಾಂತ್ರಿಕ, ವೈದ್ಯಕೀಯ, ಎಂಬಿಎಗಳಂತಹ ಶಿಕ್ಷಣಕ್ಕಾಗಿ) ವರ್ಷಕ್ಕೆ 2.5ಲಕ್ಷಗಳ ವರೆಗೆ ಸರ್ಕಾರ ಪ್ರತಿವರ್ಷ ಶಿಷ್ಯ ವೇತನ ನೀಡುತ್ತದೆ. ಕೇಂದ್ರ ಸರ್ಕಾರ 40%, ರಾಜ್ಯ ಸರ್ಕಾರ 60% ಅನುದಾನ ಭರಿಸುತ್ತದೆ.

ಶಿಷ್ಯ ವೇತನ ನೀಡಲು ಪಾರದರ್ಶಕತೆ ತರುವ ಉದ್ದೇಶದಿಂದ ಸರ್ಕಾರ ಅರ್ಹ ವಿದ್ಯಾರ್ಥಿಗಳಿಂದಲೇ ನೇರವಾಗಿ ಆನಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ 2018-2019ರ ಸಾಲಿಗೆ ಕರ್ನಾಟಕ ರಾಜ್ಯದಾದ್ಯಂತ ಒಟು 14 ಲಕ್ಷ ವಿದ್ಯಾರ್ಥಿಗಳು ಆನಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಸುಮಾರು 2.68 ಲಕ್ಷ ವಿದ್ಯಾರ್ಥಿಗಳ ಶಿಷ್ಯವೇತನ ಆಧಾರ ಕಾರ್ಡ ಅಥವಾ ಇನ್ನಿತರ ತಾಂತ್ರಿಕ ಅಡಚಣೆಗಳಿಂದ ತಿರಸ್ಕೃತಗೊಂಡಿತ್ತು. ಅಲ್ಲದೇ ತಿರಸ್ಕೃತ ವಿದ್ಯಾರ್ಥಿಗಳಿಗೆ ತಾಂತ್ರಿಕ ತೊಂದರೆಯನ್ನು ಸರಿಪಡಿಸಿಕೊಂಡು ಮರು ಅರ್ಜಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ನಿರ್ದೇಶನಾಲಯ ಅವಕಾಶ ನೀಡಿತ್ತು. ವಿದ್ಯಾರ್ಥಿಗಳು ಈ ಹಿನ್ನಲೆಯಲ್ಲಿ ಮತ್ತೆ ತಿದ್ದುಪಡಿ ನಡೆಸಿ ಅರ್ಜಿ ಸಲ್ಲಿಸಿದ್ದರು.

ಮರು ಅರ್ಜಿ ಸಲ್ಲಿಸಿದ್ದ ಭಟ್ಕಳದ ಇಮ್ತಿಯಾಜ್ ಹುಸೇನ್ ಎನ್ನುವವರ ಮಗಳ ಮೊಬೈಲ್‍ಗೆ ಅಪರಿಚಿತನೊರ್ವ (9986620964 ಸಂಖ್ಯೆಯಿಂದ) ಕರೆ ಮಾಡಿ ಅಲ್ಪಸಂಖ್ಯಾತರ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದರ ಬಗ್ಗೆ ಮಾಹಿತಿ ಕೇಳಿದ್ದಾನೆ. ವಿದ್ಯಾರ್ಥಿನಿ ಅರ್ಜಿ ಸಲ್ಲಿಸಿದ್ದು ಒಂದು ಬಾರಿ ತಿರಸ್ಕೃತ ಗೊಂಡು ಮರು ಅರ್ಜಿ ಸಲ್ಲಿಸಿದ ಕುರಿತು ಮಾಹಿತಿ ನೀಡಿದ್ದಾಳೆ. ಒಂದೇ ಕ್ಷಣದಲ್ಲಿ ತಾನು ನಿಮ್ಮ ಸಮಸ್ಯೆ ಪರಿಹರಿಸುವದಾಗಿ ಆಕೆಯ ಖಾತೆ ಸಂಖ್ಯೆ ಮತ್ತು ಒಟಿಪಿಯನ್ನು ಪಡೆದು ಖಾತೆಯಲ್ಲಿ ಜಮಾ ಆಗಿದ್ದ 12600 ರೂ.ಗಳನ್ನು ವಂಚಕ ಎಗರಿಸಿದ್ದಾನೆ. ಸತ್ಯಾಸತ್ಯತೆಯ ಅರಿವು ಬರುವುದರೊಳಗೆ ಖಾತೆಯ ಹಣ ನಾಪತ್ತೆಯಾಗಿದೆ. ಇದೆ ವಿದ್ಯಾರ್ಥಿನಿಯ ತಂಗಿಯ ಖಾತೆಯಿಂದಲೂ ಹಣ ಎಗರಿಸಿದ್ದಾರೆ ಎನ್ನಲಾಗಿದೆ. ಶಿರಸಿಯಲ್ಲಿ ಇಂತಹ 4 ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಈ ಕುರಿತು ಒಂದೇ ಒಂದು ದೂರು ದಾಖಲಾಗಿಲ್ಲ. ಮನುಷ್ಯ ತನ್ನ ಚಟುವಟಿಕೆಗಳಿಂದ ಎಲ್ಲಿಯವರೆಗೂ ಅರಿವು ಹೊಂದಿರುವದಿಲ್ಲವೊ ಅಲ್ಲಿಯವರೆಗೆ ಅಪರಾಧಗಳು ಹೆಚ್ಚುತ್ತಲೇ ಇರುತ್ತವೆ. ಅಂತೆಯೇ, ಈ ಅಪರಾಧಗಳನ್ನು ನಿಯಂತ್ರಿಸುವ ಕೆಲಸ, ಯಾರಿಗೆ ದೂರು ನೀಡಬೇಕು ಎನ್ನುವ ಮಾಹಿತಿಯನ್ನು ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೈಟ್: ಶಂಸುದ್ದೀನ- ತಾಲೂಕು ವಿಸ್ತೀರ್ಣಾಧಿಕಾರಿ, ಉಪವಿಭಾಗ ಭಟ್ಕಳ

ಶಿಷ್ಯ ವೇತನ ವಿತರಿಸಲು ಪಾರದರ್ಶಕತೆ ಇರಬೇಕು ಎನ್ನುವ ಉದ್ದೇಶದಿಂದ ಸರ್ಕಾರ ವಿದ್ಯಾರ್ಥಿಗಳಿಂದಲೇ ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಿಸಿ ನೇರವಾಗಿ ಅವರ ಖಾತೆಗೆ ಜಮಾ ಮಾಡುತ್ತಿದೆ. ಯಾರೋ ಅಪರಿಚಿತರು ಮಾಡುವ ಕರೆ, ಮಾತಿಗೆ ಮರುಳಾಗದೆ ಅವರಿಗೆ ತಮ್ಮ ಖಾತೆಯ ಸಂಖ್ಯೆ, ಒಟಿಪಿ ಇತರ ಯಾವುದೇ ಮಾಹಿತಿ ನೀಡಬೇಡಿ. ತಮಗೆ ಸಂಶಯವಿದ್ದರೆ ಪ್ರತಿ ತಾಲೂಕಿನಲ್ಲಿರುವ ಅಲ್ಪಸಂಖ್ಯಾತರ ಅರಿವು ಕೇಂದ್ರಕ್ಕೆ ತೆರಳಿ ವಿಚಾರಿಸಿ ಮಾಹಿತಿ ಪಡೆದುಕೊಳ್ಳಿ.

ನಿಖಿಲ್ ಬುಳ್ಳಾವರ, ಎಎಸ್‍ಪಿ ಭಟ್ಕಳ ಉಪವಿಭಾಗ ಮಾತನಾಡಿ ಆನ್‍ಲೈನ್‍ನಲ್ಲಿ ವಿದ್ಯಾರ್ಥಿಗಳೇ ಮಾಹಿತಿಯನ್ನು ತುಂಬಿರಿ. ಇತರ ವ್ಯಕ್ತಿ ಗಳೊಂದಿಗೆ ತಮ್ಮ ದಾಖಲೆಗಳನ್ನು ಹಂಚಿಕೊಳ್ಳಬೇಡಿ. ಇಂತಹ ಘಟನೆ ನಡೆದ 24 ಘಂಟೆಯ ಒಳಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ. ಇದರಿಂದ ನಮಗೆ ಮುಂದಿನ ಕ್ರಮಕೈಗೊಳ್ಳಲು ಅನುಕೂಲConclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.