ಶಿರಸಿ: ಶ್ರೀಗಂಧ ಮರದ ತುಂಡುಗಳ ಅಕ್ರಮ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಲಿಡ್ಕರ್ ಕಾಲೋನಿ ಕ್ರಾಸ್ ಬಳಿ ಸೆ.10ರಂದು ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿ, ಅಂದಾಜು 26 ಸಾವಿ ಮೌಲ್ಯದ ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ತಲೆ ಮರೆಸಿಕೊಂಡಿದ್ದ ಆರೋಪಿ ಕಸ್ತೂರ ಬಾ ನಗರದ ಸುಲಾಮತ್ ಗಲ್ಲಿಯ ಅಕ್ಬರ್ ಇಬ್ರಾಹಿಂ ಶೇಖ್ನನ್ನು ಈಗ ಬಂಧಿಸಲಾಗಿದೆ.
ಪರಾರಿಯಾದ ಆರೋಪಿ ಬಂಧಿಸಲು ಜಾಲ ಬೀಸಿದ್ದ ಮಾರುಕಟ್ಟೆ ಪೊಲೀಸರು, ಇಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.