ಭಟ್ಕಳ: ಮುರುಡೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರೆಕಟ್ಟೆ ಎದುರಿನ ತೆರೆದ ಅಸಮರ್ಪಕ ಚರಂಡಿ ಅವ್ಯವಸ್ಥೆ ಕುರಿತು ಪ್ರತಿಭಟನೆ ನಡೆಸಿದ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಪಾಲಕರು ಶಾಲಾ ಆವರಣದಲ್ಲಿ ಕೆಲ ಕಾಲ ಕೂಡಿ ಹಾಕಿ ವಸ್ತು ಸ್ಥಿತಿಯ ಮನವರಿಕೆ ಮಾಡಿದ ಘಟನೆ ಮಂಗಳವಾರ ನಡೆದಿದೆ.
ರಸ್ತೆ ಕಾಮಗಾರಿಯಿಂದ ಚರಂಡಿ ನಿರ್ಮಾಣದ ಅರ್ಧಂಬರ್ಧ ಮಾಡಿ ಹಾಗೆ ಬಿಟ್ಟಿದ್ದು ,ಪ್ರತಿನಿತ್ಯ ವಿದ್ಯಾರ್ಥಿಗಳು ಚರಂಡಿ ವಾಸನೆ ಜೊತೆಗೆ ಪಾಠ ಹಾಗೂ ಬಿಸಿ ಊಟ ಸೇವಿಸುತ್ತಿದ್ದು. ಇದನ್ನು ಸರಿ ಪಡಿಸುವಂತೆ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಪಾಲಕರು ಅಧಿಕಾರಿಗಳಿಂದ ಹಿಡಿದು ಜನಪ್ರತಿನಿಧಿಗಳವರೆಗೆ ಹಲವು ಬಾರಿ ಮನವಿ ಕೊಟ್ಟರು ಸ್ಪಂದಿಸಿಲ್ಲ.
ಹೀಗಾಗಿ ಮಂಗಳವಾರ ವಿದ್ಯಾರ್ಥಿ ಪಾಲಕರು, ಹಳೆಯ ವಿದ್ಯಾರ್ಥಿಗಳು, ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸುವ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ಕೆಲ ಕಾಲ ಕೂಡಿ ಹಾಕಿ ಶಾಲಾ ಗೇಟ್‍ಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ನಂತರ ಅದೇ ವಾಸನೆ ಜೊತೆಗೆ ಅಧಿಕಾರಿಗಳಿಗೆ ಬಿಸಿ ಊಟ ಹಾಕಿ ಕಳುಹಿಸಿದ ಘಟನೆ ನಡೆದಿದೆ.