ETV Bharat / state

ನಚಿಕೇತ್​, ಮಿಸ್ಮಿ ಗಾಯನಕ್ಕೆ ತಲೆದೂಗಿದ ಕಡಲ ಮಂದಿ; ಕುಣಿದು ಕುಪ್ಪಳಿಸಿದ ಶಾಸಕ ಸೈಲ್ - ನಚಿಕೇತ್ ಲೆಲೆ

ಕಾರವಾರದಲ್ಲಿ ಹೊಸ ವರ್ಷಕ್ಕೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜನತೆ ಸಂಭ್ರಮಿಸಿದರು.

new year celebration
ನಚಿಕೇತ್​, ಮಿಸ್ಮಿ ಗಾಯನಕ್ಕೆ ತೇಲಾಡಿದ ಕಡಲ ಮಂದಿ
author img

By ETV Bharat Karnataka Team

Published : Jan 1, 2024, 1:32 PM IST

Updated : Jan 1, 2024, 2:03 PM IST

ಕಾರವಾರದಲ್ಲಿ ಹೊಸ ವರ್ಷದ ಸಂಭ್ರಮ

ಕಾರವಾರ: ಎಲ್ಲೆಡೆ ಹೊಸ ವರ್ಷದ ಸಂಭ್ರಮ ಮುಗಿಲು ಮುಟ್ಟಿದೆ. ಕಡಲನಗರಿ ಕಾರವಾರದಲ್ಲಿ ಗಾಯಕರಾದ ನಚಿಕೇತ್ ಲೆಲೆ ಹಾಗೂ ಮಿಸ್ಮಿ ಬೋಸ್ ಅವರ ಸಂಗೀತ ಸುಧೆ ಸಾವಿರಾರು ಮಂದಿಯನ್ನು ಆನಂದದ ಕಡಲಲ್ಲಿ ತೇಲಾಡುವಂತೆ ಮಾಡಿತು. ಇನ್ನೊಂದೆಡೆ, ಯುವಕರು ಬಾನೆತ್ತರಕ್ಕೆ ಸಿಡಿಮದ್ದುಗಳನ್ನು ಸಿಡಿಸಿ ಹಾರಿ ಕುಣಿದು ಕುಪ್ಪಳಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರು.

ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಹೊಸ ವರ್ಷದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಸಿಂಗರ್ ನಚಿಕೇತ್ ಲೆಲೆ ಹಾಗೂ ಮಿಸ್ಮಿ ಬೋಸ್ ಒಂದು ಗಂಟೆವರೆಗೂ ನೆರೆದಿದ್ದ ಜನರನ್ನು ತಮ್ಮ ಗಾನಸುಧೆಯಿಂದ ರಂಜಿಸಿದರು. ಸ್ಥಳೀಯ ಕಲಾವಿದರಿಂದಲೂ ನೃತ್ಯ ಹಾಗೂ ಗಾಯನ ನಡೆಯಿತು.

ಶಾಸಕ ಸತೀಶ್ ಸೈಲ್ ಡ್ಯಾನ್ಸ್: ಕಾರ್ಯಕ್ರಮದಲ್ಲಿ ಶಾಸಕ ಸತೀಶ್​​ ಸೈಲ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ನ್ಯಾಯಾಧೀಶರು ಉಪಸ್ಥಿತರಿದ್ದರು. ನಚಿಕೇತ್ ಹಾಡಿಗೆ ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವರು ಸ್ಟೆಪ್​ ಹಾಕಿದರು.

ಕಡಲತೀರದಲ್ಲಿ ಪ್ರವಾಸಿಗರ ದಂಡು: ಸಂಜೆಯಾಗುತ್ತಿದ್ದಂತೆ ಕಡಲತೀರ ಕಳೆಗಟ್ಟಿತ್ತು. ಸ್ಥಳೀಯರು, ಪ್ರವಾಸಿಗರು ನೂರಾರು ಸಂಖ್ಯೆಯಲ್ಲಿ ತೀರದಲ್ಲಿ ಜಮಾಯಿಸಿದ್ದರು. ವರ್ಷದ ಕೊನೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಜನರು ಮುಗಿಬಿದ್ದರು. ಕೆಂಪು ಸೂರ್ಯನ ಸೊಬಗನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದರು. ಕೆಲವರು ಒಟ್ಟಾಗಿ ನಿಂತು ಸೆಲ್ಫಿ ಕ್ಲಿಕ್ಕಿಸಿದರು.

ಸಿಹಿ ಹಂಚಿ ಸಂಭ್ರಮ: ರಜಾ ದಿನವಾಗಿದ್ದ ಭಾನುವಾರ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಸ್ನೇಹಿತರು, ಹಿತೈಷಿಗಳೊಟ್ಟಿಗೆ ಬೆಳಿಗ್ಗೆಯಿಂದಲೇ ಹೊಸ ವರ್ಷದ ಸಂಭ್ರಮಾಚರಣೆಗೆ ಸಕಲ ಸಿದ್ದತೆಯಲ್ಲಿ ತೊಡಗಿದ್ದರು. ಕೆಲ ಭಾಗಗಳಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸಿ ಕೇಕ್ ಕತ್ತರಿಸಲು ಅಣಿಯಾಗಿದ್ದರು. ಸಂಜೆ ಹೊತ್ತಿಗೆ ನಗರದ ಹೋಟೆಲ್ ಹಾಗೂ ರೆಸಾರ್ಟ್​ಗಳು ಪ್ರವಾಸಿಗರಿಂದ ತುಂಬಿತ್ತು. ನಗರದ ವಿವಿಧ ಇಲಾಖೆಯ ಪ್ರವಾಸಿ ಮಂದಿರಗಳು ಕೂಡ ಭರ್ತಿಯಾಗಿತ್ತು.

ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಗೋವಾ ಪ್ರವಾಸ ಕೈಗೊಂಡಿದ್ದ ಪ್ರವಾಸಿಗರು ಅಲ್ಲಿ ಹೋಟೆಲ್ ಹಾಗೂ ರೆಸಾರ್ಟ್​ಗಳು ಕೊಠಡಿಗಳು ಭರ್ತಿಯಾಗಿರುವುದರಿಂದ ವಸತಿ ವ್ಯವಸ್ಥೆ ಸಿಗದೇ ಜಿಲ್ಲೆಯತ್ತ ಮುಖ ಮಾಡಿದ್ದರು. ಇದರಿಂದ ನಗರದ ಹೋಟೆಲ್‌ಗಳಿಗೂ ಬೇಡಿಕೆ ಹೆಚ್ಚಿದ್ದು, ಬಹುತೇಕ ಹೋಟೆಲ್‌ಗಳ ಕೊಠಡಿಗಳು ಭರ್ತಿಯಾಗಿದ್ದವು. ಹೊಸ ವರ್ಷಾಚರಣೆಗೆಂದೇ ಪ್ರವಾಸಿಗರ ಸ್ನೇಹಿತರ ಸಹಕಾರದಲ್ಲಿ ತಿಂಗಳ ಮುಂಚೆಯೇ ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸಿದ್ದು, ಕೊನೆ ಹಂತದಲ್ಲಿ ಪ್ರವಾಸ ಕೈಗೊಂಡವರು ವಸತಿಗಾಗಿ ಪರದಾಡುತ್ತಿರುವುದು ಕಂಡುಬಂತು.

ಕೆಲವು ಕಡೆಗಳಲ್ಲಿ ಕೆಲವು ಯುವತಿಯರ ಗುಂಪು ತಮಗೆ ಸೂಕ್ತವೆನಿಸಿದ ಸ್ಥಳಗಳಲ್ಲಿ ಸರಳವಾಗಿ ಪಾರ್ಟಿಗಳನ್ನು ನಡೆಸಿದರೆ, ಇನ್ನು ಕೆಲವರು ತಮ್ಮ ಮನೆಯ ಓಣಿಗಳಲ್ಲಿ ಡಿಜೆ ಹಾಕಿ ಕುಣಿದು ಕುಪ್ಪಳಿಸಿದರು. ಸ್ನೇಹಿತರು, ಕುಟುಂಬದವರ ಜತೆ ಸೆಲ್ಫಿ ತೆಗೆದುಕೊಳ್ಳುವುದು, ಇಷ್ಟದ ತಿಂಡಿಗಳನ್ನು ತಿಂದು ಸಂಭ್ರಮಿಸಿದರು.

ಇದನ್ನೂ ಓದಿ: ಮೈಸೂರಿನಲ್ಲಿ ಹೊಸ ವರ್ಷದ ಸಂಭ್ರಮ; ಅರಮನೆ ಎದುರು ಹಸಿರು ಪಟಾಕಿಗಳ ಚಿತ್ತಾರ

Last Updated : Jan 1, 2024, 2:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.