ಭಟ್ಕಳ: ದೇಶಾದ್ಯಂತ ಲಾಕ್ಡೌನ್ ಸಡಿಲಿಕೆ ನಂತರ ನಾಳೆಯಿಂದ ದೇಶದ ಧಾರ್ಮಿಕ ಕೇಂದ್ರಗಳನ್ನು ಸಾರ್ವಜನಿಕ ದರ್ಶನಕ್ಕಾಗಿ ಪುನಃ ತೆರೆಯುವ ಸಿದ್ಧತೆ ನಡೆಯುತ್ತಿವೆ.
ಈ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಮುರುಡೇಶ್ವರ ದೇವಸ್ಥಾನ ತೆರೆಯಲಿದ್ದು,ಔಷಧ ಸಿಂಪಡಣೆ ಮಾಡಿ ಭಕ್ತರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಕಳೆದ ಮಾರ್ಚ್ 20ರಿಂದ ಮುರುಡೇಶ್ವರ ದೇವಸ್ಥಾನವನ್ನು ಬಂದ್ ಮಾಡಲಾಗಿತ್ತು. ಮುಂಜಾನೆ 7.30 ರಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ 3 ಗಂಟೆಯಿಂದ ಸಂಜೆ 6.45 ವರೆಗೆ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಈ ಬಗ್ಗೆ ದೇವಸ್ಥಾನ ಧರ್ಮದರ್ಶಿ ಶ್ರೀಪಾದ ಕಾಮತ್ ಮಾತನಾಡಿ ಸರ್ಕಾರದ ಆದೇಶದಂತೆ ಮುರುಡೇಶ್ವರ ದೇವಸ್ಥಾನ ತೆರೆಯಲು ತೀರ್ಮಾನಿಸಿದ್ದೇವೆ.ಇದಕ್ಕೆ ಬೇಕಾಗುವ ಮುನ್ನೆಚ್ಚರಿಕೆ ಕ್ರಮಗಳನ್ನು ದೇವಸ್ಥಾನ ಆಡಳಿತ ಮಂಡಳಿಯಿಂದ ಕೈಗೊಳ್ಳಲಾಗಿದೆ.
ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಬಾಕ್ಸ್ ಹಾಕಲಾಗಿದೆ. ಮಧ್ಯಾಹ್ನ ತೀರ್ಥಪ್ರಸಾದ ವಿತರಣೆ ಹಾಗೂ ಯಾವುದೇ ಸೇವೆಗಳು ಇರುವದಿಲ್ಲ. ಅದಕ್ಕೆ ಸಾರ್ವಜನಿಕರು ಹಾಗೂ ಭಕ್ತಾಧಿಗಳು ಸಹಕರಿಸಿ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕು ಎಂದರು.
ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಪಾಲಿಸಬೇಕಾದ ನಿಯಮಗಳು:
ದೇವರ ದರ್ಶನಕ್ಕೆ ಬರುವ ದೇವಾಲಯದ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ (6 ಅಡಿ) ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು.
ಮಾಸ್ಕ್ ಇಲ್ಲದಿದ್ದರೆ ದೇವಸ್ಥಾನ ಪ್ರವೇಶಕ್ಕೆ ಅವಕಾಶವಿಲ್ಲ.
ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ದರ್ಶನಕ್ಕೆ ಬರುವವರು ಹೂ, ಹಣ್ಣು ಕಾಯಿ ಎಣ್ಣೆ ಮುಂತಾದ ಪೂಜಾ ಸಾಮಗ್ರಿಗಳ ತರುವುದನ್ನು ನಿಷೇಧಿಸಲಾಗಿದೆ.