ಭಟ್ಕಳ: ತಾಲೂಕಿನ ಜಾಲಿ ಪ.ಪಂ ಹಾಗು ಪುರಸಭೆ ವ್ಯಾಪ್ತಿಯಲ್ಲಿನ ಒಳಚರಂಡಿ ಕಾಮಾಗಾರಿಯನ್ನು ಯಾವುದೇ ಕಾರಣಕ್ಕೂ ಕೈಗೊಳ್ಳಬಾರದು ಎಂದು, ಪ.ಪಂ ಹಾಗೂ ಪುರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಜಾಲಿ ಪ.ಪಂ ವ್ಯಾಪ್ತಿಯ ದೇವಿನಗರದಲ್ಲಿ ಪ್ರಸ್ತಾವಿತ ವೆಟ್‍ವೆಲ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಆ ಭಾಗದಲ್ಲಿ ಶಾಲೆ, ಮಂದಿರ, ಮಸೀದಿ ಹಾಗೂ ಕುಡಿಯುವ ನೀರಿನ ಬಾವಿಗಳಿವೆ. ವೆಟ್‍ವೆಲ್ ನಿರ್ಮಾಣದಿಂದಾಗಿ ಹಲವು ಆರೋಗ್ಯ ಸಮಸ್ಯೆಗಳು ಉಲ್ಭಣಗೊಳ್ಳುವ ಅಪಾಯ ಕೂಡ ಇದೆ. ಆದ್ದರಿಂದ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಸದಸ್ಯರು ಆರೋಪಿಸಿದರು.
ಭಟ್ಕಳ ತಾಲೂಕಿನಾದ್ಯಂತ ಒಳಚರಂಡಿ ವ್ಯವಸ್ಥೆ ಹದಗೆಟ್ಟು ಹೋಗಿದೆ. ಮತ್ತೇ ಹೊಸದಾಗಿ ಸಮಸ್ಯೆಗಳನ್ನು ಸೃಷ್ಠಿಸಲು ಮುಂದಾಗಿರುವುದು ಜನರನ್ನು ನರಕಯಾತನೆಗೆ ನೂಕುವ ಪ್ರಯತ್ನವಾಗಿದೆ ಎಂದರು.