ETV Bharat / state

ಕಾರವಾರ: ಮಳೆಗೆ ಮನೆ ಗೋಡೆ ಕುಸಿದು ತಾಯಿ- ಮಗಳು ಸಾವು - karwar house collapsed case

ಭಾರಿ ಮಳೆಗೆ ಮನೆ ಗೋಡೆ ಕುಸಿದು ತಾಯಿ ಮಗಳು ಮೃತಪಟ್ಟಿರುವ ಘಟನೆ ಮುರ್ಕವಾಡ ಗ್ರಾಮದಲ್ಲಿ ನಡೆದಿದೆ.

wall collapsed due to rain
ಮಳೆಗೆ ಮನೆ ಗೋಡೆ ಕುಸಿದ ತಾಯಿ ಮಗಳು ಸಾವು
author img

By

Published : Jul 12, 2022, 10:25 AM IST

ಕಾರವಾರ: ಭಾರಿ ಮಳೆಯಿಂದಾಗಿ ತೇವಗೊಂಡ ಮನೆಯ ಗೋಡೆ ಕುಸಿದು ನಿದ್ರಿಸುತ್ತಿದ್ದ ತಾಯಿ, ಮಗಳು ಸಾವನ್ನಪ್ಪಿರುವ ಘಟನೆ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ನಡೆದಿದೆ. ರುಕ್ಮಿಣಿ ವಿಠ್ಠಲ್ ಮಾಚಕ (37) ಹಾಗು ಶ್ರೀದೇವಿ ವಿಠ್ಠಲ್ ಮಾಚಕ (13) ಮೃತರು.

ಗೋಡೆ ಕುಸಿದು ಬಿದ್ದ ಘಟನೆ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಬಂದು ಮಣ್ಣು ತೆರವು ಮಾಡಲು ಪ್ರಯತ್ನಿಸಿದರೂ ಮೇಲೇಳಲಾಗದೆ ಇಬ್ಬರೂ ಸ್ಥಳದಲ್ಲಿಯೇ ಅಸುನೀಗಿದ್ದಾರೆ.‌ ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಕಾಶ ಗಾಯಕವಾಡ ಹಾಗೂ ತಾ.ಪಂ ಇಒ ಪರಶುರಾಮ್ ಗಸ್ತಿ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳಿಯಾಳ ಪೊಲೀಸ್ ‌ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿದೆ ಇಲ್ಲಿನ ಜಲಾಶಯಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.