ETV Bharat / state

ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಬಲವಾಗಿ ವಿರೋಧಿಸಿದೆ: ಸಚಿವ ಹೆಬ್ಬಾರ್

ಕಸ್ತೂರಿ ರಂಗನ್ ವರದಿ ಸಂಪೂರ್ಣ ಅವೈಜ್ಞಾನಿಕ ಎಂದು ಕೇಂದ್ರಕ್ಕೆ ತಿಳಿಸಲಾಗಿದೆ. ಆ ಮಾತಿಗೆ ಸರ್ಕಾರ ಬದ್ಧವಿದೆ. ಅರಣ್ಯ ಇಲಾಖೆಯವರು ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು ಎಂದು ಸಚಿವ ಶಿವರಾಮ ಹೆಬ್ಬಾರ್​ ಹೇಳಿದರು.

minister-shivram-hebbar-talk
ಸಚಿವ ಹೆಬ್ಬಾರ್
author img

By

Published : Feb 13, 2021, 7:12 PM IST

ಶಿರಸಿ: ಕಸ್ತೂರಿ ರಂಗನ್ ವರದಿಯನ್ನು ಕರ್ನಾಟಕ ಸರ್ಕಾರ ಬಲವಾಗಿ ವಿರೋಧಿಸಿದೆ. ವರದಿಯನ್ನು ಸಾರಾಸಗಟಾಗಿ ತಿರಸ್ಕಾರ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ‌ ಹೆಬ್ಬಾರ್ ಹೇಳಿದರು.

ಸಚಿವ ಹೆಬ್ಬಾರ್, ಸಚಿವ

ಓದಿ: ತನ್ನನ್ನು ಅವಮಾನಿಸಿದ ವ್ಯಕ್ತಿಯನ್ನು ಟ್ರೋಲ್​ ಮಾಡಿದ್ರು ದೀಪಿಕಾ!

ಶಿರಸಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವ ಕಸ್ತೂರಿ ರಂಗನ್ ವರದಿ ಗುಜರಾತ್​​ಗೆ ನೀಡಿರುವುದು, ಗೋವಾ, ಮಹಾರಾಷ್ಟ್ರಕ್ಕೆ ನೀಡಿರುವುದು ಇಲ್ಲಿ ಅನುಷ್ಠಾನ ಮಾಡಲಾಗುವುದು. ಈ ಬಗ್ಗೆ ಕೇಂದ್ರ ಪರಿಸರ ಸಚಿವಾಲಯಕ್ಕೆ ತಿಳಿಸಲಾಗಿದೆ. ಪುನರ್ ಪರಿಶೀಲನೆಗೆ ಒತ್ತಾಯಿಸಲಾಗಿದೆ ಎಂದರು.

ಕಸ್ತೂರಿ ರಂಗನ್ ವರದಿ ಸಂಪೂರ್ಣ ಅವೈಜ್ಞಾನಿಕ ಎಂದು ಕೇಂದ್ರಕ್ಕೆ ತಿಳಿಸಲಾಗಿದೆ. ಆ ಮಾತಿಗೆ ಸರ್ಕಾರ ಬದ್ಧವಿದೆ ಎಂದ ಅವರು, ಅರಣ್ಯ ಇಲಾಖೆಯವರು ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು. ಜಿಪಿಎಸ್ ಆಗಿರುವ ಅತಿಕ್ರಮಣದಾರರ ಸುದ್ದಿಗೆ ಹೋದಲ್ಲಿ ಅಂತವರು ಜಿಲ್ಲೆ ಬಿಟ್ಟು ಹೋಗಬಹುದು ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಶಿರಸಿ ಜಿಲ್ಲೆ ಕುರಿತಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತರ ಕನ್ನಡ ಜಿಲ್ಲೆ ಇಬ್ಭಾಗ ಆಗುವುದನ್ನು ಎಲ್ಲರೊಂದಿಗೆ ಸಾಧಕ ಬಾಧಕ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ಅಲ್ಲದೇ ಯಲ್ಲಾಪುರ, ಹಳಿಯಾಳ, ಶಿರಸಿ ಹೀಗೆ ಎಲ್ಲರೂ ಜಿಲ್ಲೆ ಆಗಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಜಿಲ್ಲೆ ಮೊದಲು, ನಂತರ ಜಿಲ್ಲಾ ಕೇಂದ್ರದ ಬಗ್ಗೆ ವಿಚಾರ ಮಾಡಲಾಗುವುದು. ತಾಂತ್ರಿಕ ಅಂಶಗಳನ್ನು ಪರಿಗಣಿಸಿ, ಆರ್ಥಿಕ ಅಂಶಗಳನ್ನು ಅಧ್ಯಯನ ಮಾಡಿ ಜಿಲ್ಲೆಯ ಇಬ್ಭಾಗದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.