ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರಕ್ಕೆ ಇಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಕುರಿತು ಮಾಹಿತಿ ಪಡೆದರು.
ಮೊದಲ ಬಾರಿಗೆ ಕಾರವಾರಕ್ಕೆ ಆಗಮಿಸಿದ ಸಚಿವರು, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಹಾಗೂ ಬೆಂಬಲಿಗರೊಂದಿಗೆ ಕಡಲ ತೀರಕ್ಕೆ ತೆರಳಿ ಲೈಫ್ ಗಾರ್ಡ್ ವ್ಯವಸ್ಥೆ, ಜಲ ಸಾಹಸ ಕ್ರಿಡೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜತೆಗೆ ಕಡಲ ತೀರದ ಬಳಿ ಇರುವ ನೆಲಸಿರಿ ಉತ್ತರ ಕನ್ನಡ ಪ್ರಾಡಕ್ಟ್ಸ್ ಮಳಿಗೆ ವೀಕ್ಷಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧ ಬಗೆಯ ಉತ್ಪನ್ನಗಳನ್ನ ಒಂದೇ ಸೂರಿನಡಿ ಸಿಗುವಂತೆ ಮಳಿಗೆಯನ್ನು ತೆರೆಯಲಾಗಿದೆ. ಈ ನಿಟ್ಟಿನಲ್ಲಿ ಮಳಿಗೆಗೆ ಭೇಟಿ ನೀಡಿದ ಸಚಿವರು ಜಿಲ್ಲೆಯ ಉತ್ಪನ್ನಗಳನ್ನ ವೀಕ್ಷಿಸಿ ಖುಷಿಪಟ್ಟರು. ತಮ್ಮ ಜಿಲ್ಲೆಯಲ್ಲೂ ಸಹ ಇಂಥದ್ದೇ ಮಳಿಗೆಯನ್ನು ತೆರೆಯುವ ನಿಟ್ಟಿನಲ್ಲಿ ಅಧಿಕಾರಿಗಳಿಂದ ಸಿ.ಟಿ.ರವಿ ಮಾಹಿತಿ ಪಡೆದುಕೊಂಡರು.