ETV Bharat / state

ಕಾರವಾರ : ಹಂದಿ ಉರುಳಿಗೆ ಬಿದ್ದು ಹೆಣ್ಣು ಚಿರತೆ ಸಾವು - Female leopard dies after falling into snair wire

ಹಂದಿಗೆ ಹಾಕಿದ್ದ ಉರುಳಿಗೆ ಒಂದು ವರ್ಷದ ಹೆಣ್ಣು ಚಿರತೆಯೊಂದು ಸಿಲುಕಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕವಲಕ್ಕಿ ಸಮೀಪದ ಮಾಸುಕಲ್ಮಕ್ಕಿ ಬಳಿ ನಡೆದಿದೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು, ಹೆಚ್ಚಿನ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

karwar-female-leopard-dies-in-snare-wire
ಕಾರವಾರ : ಹಂದಿ ಉರುಳಿಗೆ ಬಿದ್ದು ಹೆಣ್ಣು ಚಿರತೆ ಸಾವು
author img

By

Published : Apr 9, 2022, 1:54 PM IST

ಕಾರವಾರ: ಹಂದಿಗೆ ಹಾಕಿದ್ದ ಉರುಳಿಗೆ ಚಿರತೆಯೊಂದು ಸಿಲುಕಿ ಸಾವನ್ನಪ್ಪಿರುವ ಘಟನೆ ಹೊನ್ನಾವರ ತಾಲ್ಲೂಕಿನ ಕವಲಕ್ಕಿ ಸಮೀಪದ ಮಾಸುಕಲ್ಮಕ್ಕಿ ಬಳಿ ನಡೆದಿದೆ. ಮೃತಪಟ್ಟ ಚಿರತೆಯನ್ನು ಅಂದಾಜು ಒಂದು ವರ್ಷದ ಹೆಣ್ಣು ಚಿರತೆ ಎಂದು ಹೇಳಲಾಗಿದೆ. ಜಮೀನಿಗೆ ಬರುವ ಕಾಡುಪ್ರಾಣಿಗಳ ಹಾವಳಿ ತಡೆಯಲೋ ಅಥವಾ ಕಾಡುಪ್ರಾಣಿಯನ್ನು ಬೇಟೆಯಾಡಲು ಇಟ್ಟಿದ್ದ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಸ್ಥಳಕ್ಕೆ ಡಿ.ಎಫ್.ಓ ರವಿಶಂಕರ್ ಹಾಗೂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌‌ ಜಾಗದ ಮಾಲೀಕರಿಂದ ಮಾಹಿತಿ ಪಡೆದು ಹೆಚ್ಚಿನ ತನಿಖೆ ನಡೆಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ತಾಲೂಕಿನ ಮುಗ್ವಾ, ಹೊಸಾಕುಳಿ, ಸಾಲ್ಕೋಡ್ ಭಾಗದಲ್ಲಿ ಈ ಹಿಂದೆ ಚಿರತೆ ಕಾಣಿಸಿಕೊಂಡಿತ್ತು. ಅಲ್ಲದೇ ನಾಯಿ, ಆಕಳುಗಳ ಮೇಲೆ ದಾಳಿ ಮಾಡಿವೆ ಎಂದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ಕಾರವಾರದಲ್ಲಿ ಹಂದಿ ಉರುಳಿಗೆ ಬಿದ್ದು ಹೆಣ್ಣು ಚಿರತೆ ಸಾವು

ಇದೀಗ ಮರಿ ಚಿರತೆ ಮೃತಪಟ್ಟಿದ್ದರೂ ಸಾರ್ವಜನಿಕರಲ್ಲಿ ಆತಂಕ ದೂರವಾಗಿಲ್ಲ. ಅಧಿಕಾರಿಗಳು ಕಾಡಿನಿಂದ ನಾಡಿನತ್ತ ಬರುವ ಮಾಡುವ ಪ್ರಾಣಿಗಳನ್ನು ಪುನಃ ಕಾಡಿಗೆ ಮರಳುವಂತೆ ಮಾಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.

ಓದಿ : ರೈತರ ಪಾಲಿಗೆ ಸಿಹಿಯಾಗದ ಕಬ್ಬು: ಯಾಂತ್ರಿಕೃತ ವ್ಯವಸ್ಥೆ ನಡುವೆಯೂ ಬೆಳೆ ಬೆಳೆಯಲು ರೈತರು ಹಿಂದೇಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.