ETV Bharat / state

ಸಿದ್ದಾಪುರ 16ನೇ ಮೈಲ್ ಕಲ್ಲಿನ ಬಳಿ ಬಸ್ ಪಲ್ಟಿ : 47 ಮಂದಿ ಪ್ರಾಣಾಪಾಯದಿಂದ ಪಾರು.. - ಶಿರಸಿಯಲ್ಲಿ ಕೆಎಸ್​ಆರ್​ಟಿಸಿ ಬಸ್​ ಅಪಘಾತ

ಚಲಿಸುತ್ತಿದ್ದ ವೇಳೆ ಸ್ಟೇರಿಂಗ್​ ಕಟ್​ ಆಗಿ ಕರ್ನಾಟಕ ರಾಜ್ಯ ಸಾರಿಗೆ ಬಸ್ ಪಲ್ಟಿಯಾಗಿರುವ ಘಟನೆ ಉತ್ತರಕನ್ನಡದ ಶಿರಸಿ ಬಳಿ ನಡೆದಿದೆ.

ಕೆಎಸ್​ಆರ್​ಟಿಸಿ ಬಸ್​ ಪಲ್ಟಿ
ಕೆಎಸ್​ಆರ್​ಟಿಸಿ ಬಸ್​ ಪಲ್ಟಿ
author img

By

Published : Apr 4, 2023, 2:08 PM IST

Updated : Apr 4, 2023, 6:51 PM IST

ಬಸ್ ಪಲ್ಟಿ

ಶಿರಸಿ (ಉತ್ತರ ಕನ್ನಡ): ಸ್ಟೇರಿಂಗ್ ಕಟ್ ಆಗಿ ಸರ್ಕಾರಿ ಬಸ್​ ಪಲ್ಟಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ 16ನೇ ಮೈಲಿಕಲ್ ಬಳಿ ನಡೆದಿದೆ. ಹಳಿಯಾಳದಿಂದ ಸಾಗರಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ 47 ಜನ ಪ್ರಯಾಣಿಕರಿದ್ದರು. ಆದರೆ ಅಪಘಾತದಿಂದ ಸಿನಿಮೀಯ ರೀತಿಯಲ್ಲಿ ಪ್ರಯಾಣಿಕರು ಪಾರಾಗಿದ್ದಾರೆ.

ಒಂದೆರಡು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ​ಪಲ್ಟಿಯಾದ ತಕ್ಷಣ ಕಂದಕಕ್ಕೆ ಉರುಳಿದ ಬಸ್ ಮರಕ್ಕೆ ಡಿಕ್ಕಿ ಹೊಡೆದಿರುವುದರಿಂದ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.‌

ಅಪಘಾತದಲ್ಲಿ ಐಟಿ ಉದ್ಯೋಗಿ ಸಾವು: ಬೆಂಗಳೂರಿನಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ದ್ವಿಚಕ್ರ ವಾಹನದ ಟೈರ್ ಸ್ಫೋಟಗೊಂಡು ಹೊಸಕೆರೆಹಳ್ಳಿಯ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಸುಲೋಚನ (24) ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ದಿನ ಸಾವನ್ನಪ್ಪಿದ್ದರು. ಮತ್ತೊಬ್ಬ ಸವಾರ ಆನಂದ ಎಂಬುವವರು ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಲೋಚನ ಅರ್ಧ ಹೆಲ್ಮೆಟ್ ಧರಿಸಿದ್ದರಿಂದ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿತ್ತು.

ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದ ಸುಲೋಚನಾ ಹಾಗೂ ಆನಂದ್ ಕೋರಮಂಗಲದಿಂದ ತಮ್ಮ ಮನೆಗೆ ದ್ವಿಚಕ್ರ ವಾಹನದಲ್ಲಿ ವಾಪಸಾಗುತ್ತಿದ್ದರು. ನೈಸ್ ರಸ್ತೆಯ ಟೋಲ್ ಬಳಿ ದ್ವಿಚಕ್ರ ವಾಹನದ ಹಿಂಬದಿ ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿ ಇಬ್ಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಇದನ್ನೂ ಓದಿ: ಹಿರಿಯ ರಂಗ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಕಾರು ಅಪಘಾತದಲ್ಲಿ ನಿಧನ

ಕಾರು ಅಪಘಾತದಲ್ಲಿ ನಾಡೋಜ ವೀರಣ್ಣ ನಿಧನ: ಚಿತ್ರದುರ್ಗದಲ್ಲಿ ಸಂಭವಿಸಿದ ಅಪಘಾತದಲ್ಲಿ ಪಾರಂಪರಿಕ ತೊಗಲು ಗೊಂಬೆಯಾಟದ ಮೂಲಕ ರಾಜ್ಯ, ದೇಶ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿಯೂ ತಮ್ಮ ಕಲೆಯನ್ನು ಹಂಚಿದ್ದ ಹಿರಿಯ ಕಲಾವಿದ, ರಾಷ್ಟ್ರಪತಿ ಪ್ರಶಸ್ತಿ ವಿಜೇತ ನಾಡೋಜ ಬೆಳಗಲ್ಲು ವೀರಣ್ಣ (91) ನಿಧನ ಹೊಂದಿದ್ದರು. ಏ.2ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿಯ ತಳಕು ಸಮೀಪ ಅಪಘಾತ ನಡೆದಿತ್ತು. ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ಘಟನೆ ಸಂಭವಿಸಿತ್ತು.

ಇದನ್ನೂ ಓದಿ: ಸರ್ಕಾರಿ ಗೌರವಗಳೊಂದಿಗೆ ನಾಡೋಜ ಬೆಳಗಲ್ಲು ವೀರಣ್ಣ ಅಂತ್ಯಕ್ರಿಯೆ

ಬೆಳಗಲ್ಲು ವೀರಣ್ಣ ಅವರು ತೊಗಲು ಗೊಂಬೆಯಾಟದ ಕಲಾವಿದರಾಗಿದ್ದರು. ತೊಗಲು ಗೊಂಬೆಯಾಟದ ಹಿರಿಮೆಯನ್ನು ಸಪ್ತ ಸಾಗರದ ಆಚೆಗೆ ತಲುಪಿಸಿದ ಅಪರೂಪದ ಕಲಾವಿದ ವೀರಣ್ಣರವರು. ಶ್ರೀರಾಮಾಂಜನೇಯ ತೊಗಲು ಗೊಂಬೆ ಕಲಾ ಮೇಳ ಕಟ್ಟಿ ಊರೂರು, ರಾಜ್ಯದಿಂದ ರಾಜ್ಯ, ದೇಶದಿಂದ ವಿದೇಶಕ್ಕೆ ಸುತ್ತಿದವರು. ವೀರಣ್ಣರ ಸಾವಿಗೆ ಜಿಲ್ಲೆಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಖಾಸಗಿ ಬಸ್ ಚಾಲಕನ ಅಜಾಗರೂಕತೆಗೆ ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು.. ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇದನ್ನೂ ಓದಿ: ಟೈರ್ ಸ್ಫೋಟಗೊಂಡು ದ್ವಿಚಕ್ರ ವಾಹನ ಅಪಘಾತ: ಅರ್ಧ ಹೆಲ್ಮೆಟ್‌ ಧರಿಸಿದ್ದ ಟೆಕ್ಕಿ ಯುವತಿ ಸಾವು

Last Updated : Apr 4, 2023, 6:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.