ಶಿರಸಿ: ಬನವಾಸಿಯ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆ ಪರಿಚಯಿಸಲು ಪ್ರಸಿದ್ಧ ಕದಂಬೋತ್ಸವದಲ್ಲಿ ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ನಡಿಗೆ ಹಮ್ಮಿಕೊಳ್ಳಲಾಗಿತ್ತು. ಬನವಾಸಿಯ ಮಧುಕೇಶ್ವರ ದೇವಸ್ಥಾನದಿಂದ ಕದಂಬೋತ್ಸವದ ಮುಖ್ಯ ವೇದಿಕೆವರೆಗೂ ನಡಿಗೆ ಸಾಗಿತು. ಸಾಹಿತಿಗಳು, ಸಾಮಾಜಿಕ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ನಡೆದ ನಡಿಗೆ ಸಾಂಸ್ಕೃತಿಕ ವೈಭವ ಬಿಂಬಿಸಿತು.
ಮಧುಕೇಶ್ವರ ದೇವಸ್ಥಾನದಿಂದ ಬನವಾಸಿ ಮುಖ್ಯ ಬೀದಿಗಳಲ್ಲಿ ಕನ್ನಡ ಪರ ಘೋಷಣೆಗಳು ಮೊಳಗಿದವು. 2 ಕಿ.ಮೀ ಉದ್ದಕ್ಕೂ ಉತ್ಸಾಹ, ಕನ್ನಡದ ಕವಿಗಳ ಘೋಷ ವಾಕ್ಯ ಮೊಳಗಿದವು. ಕದಂಬೋತ್ಸವ ಆಚರಣೆಗೆ ಸರ್ಕಾರ ಬಜೆಟ್ನಲ್ಲೇ ಅನುದಾನ ನಿಗದಿ ಮಾಡುವ ಸಾಧ್ಯತೆಯಿದೆ. ಪ್ರತಿವರ್ಷ ನಿಗದಿತ ದಿನಾಂಕದಲ್ಲಿ ಉತ್ಸವ ನಡೆಸುವ ಬಗ್ಗೆ ಸರ್ಕಾರ ನೀತಿ ರೂಪಿಸಲಿದೆ. ಅನುದಾನ ಸಹ ನಿಗದಿ ಮಾಡಲಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಸಾಂಸ್ಕೃತಿಕ ನಡಿಗೆ ಉದ್ದೇಶಿಸಿ ಹೇಳಿದರು.