ಶಿರಸಿ : ದ್ವಿಚಕ್ರ ವಾಹನದಲ್ಲಿ 5 ಕೆ.ಜಿ. ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ನಗರದ ಮಾರಿಕಾಂಬಾ ದೇವಸ್ಥಾನದ ಬಳಿ ನಗರ ವಲಯ ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.
ಇಲ್ಲಿನ ಮಾರಿಕಾಂಬಾ ನಗರದ ಲಕ್ಷ್ಮೀ ಪ್ರಸಾದ ಸುರೇಶ ರೇವಣಕರ್ (37) ಬಂಧಿತ ಆರೋಪಿ. ಈತನನ್ನು ಎರಡು ದಿನಗಳಿಂದ ಹಿಂಬಾಲಿಸುತ್ತಿದ್ದ ಅರಣ್ಯ ಅಧಿಕಾರಿಗಳು, ಇಂದು ದೇವಸ್ಥಾನ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ಬೇರೆಡೆಗೆ ಹೋಗಿದ್ದಾಗ ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.