ETV Bharat / state

ಅಂಕೋಲಾದಲ್ಲಿ ಸಿನಿಮಾ ಶೂಟಿಂಗ್​ ಮಾಡ್ತಿದ್ದವರ ಮೇಲೆ ಹೆಜ್ಜೇನು ದಾಳಿ: ಇಬ್ಬರು ಅಸ್ವಸ್ಥ

ಚಿತ್ರೀಕರಣ ತಂಡದಲ್ಲಿ ಲೈಟಿಂಗ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಈ ಇಬ್ಬರ ಮೇಲೆ ಹೆಜ್ಜೇನು ನೊಣಗಳು ತೀವ್ರತರವಾಗಿ ದಾಳಿ ಮಾಡಿವೆ.

Hejjenu attack during movie shooting: Two sick!
ಸಿನಿಮಾ ಚಿತ್ರೀಕರಣದ ವೇಳೆ ಹೆಜ್ಜೇನು ದಾಳಿ: ಇಬ್ಬರು ಅಸ್ವಸ್ಥ!
author img

By

Published : Nov 8, 2022, 3:46 PM IST

ಕಾರವಾರ(ಉತ್ತರ ಕನ್ನಡ): ಸಿನಿಮಾ ಚಿತ್ರೀಕರಣದ ವೇಳೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಚಿತ್ರತಂಡದ ಇಬ್ಬರು ಸದಸ್ಯರು ಗಾಯಗೊಂಡಿರುವ ಘಟನೆ ಅಂಕೋಲಾ ತಾಲೂಕಿನ ಜಮಗೋಡಿನ ರೈಲ್ವೆ ನಿಲ್ದಾಣ ಬಳಿ ನಡೆದಿದೆ.

ಗಂಭೀರ ಗಾಯಗೊಂಡವರನ್ನು ಮಂಡ್ಯ ಮೂಲದ ರಮೇಶ್ ಮತ್ತು ರಾಮು ಎಂದು ಗುರುತಿಸಲಾಗಿದೆ. ಚಿತ್ರೀಕರಣ ತಂಡದಲ್ಲಿ ಲೈಟಿಂಗ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಈ ಇಬ್ಬರ ಮೇಲೆ ಹೆಜ್ಜೇನು ನೊಣಗಳು ತೀವ್ರತರವಾಗಿ ದಾಳಿ ಮಾಡಿವೆ.

Hejjenu attack during movie shooting: Two sick!
ಸಿನಿಮಾ ಚಿತ್ರೀಕರಣದ ವೇಳೆ ಹೆಜ್ಜೇನು ದಾಳಿ: ಇಬ್ಬರು ಅಸ್ವಸ್ಥ

ಈ ವೇಳೆ ಇಬ್ಬರು ಸ್ಥಳದಲ್ಲೇ ಕುಸಿದುಬಿದ್ದು ಅಸ್ವಸ್ಥಗೊಂಡಿದ್ದರು.‌ ಇದನ್ನು ಗಮನಿಸಿದ ಸ್ಥಳೀಯ ಆಟೋ ಚಾಲಕರೊಬ್ಬರು ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದರಾದರೂ ಬಂದಿರಲಿಲ್ಲ. ಕೊನೆಗೆ ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಖಾಸಗಿ ಆಂಬ್ಯುಲೆನ್ಸ್ ಒಂದರ ಮೂಲಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಇಬ್ಬರು ಚೇತರಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಕಾರವಾರ: ಸ್ನೇಹಿತರನ್ನೇ ಅಪಹರಿಸಿ 5 ಕೋಟಿಗೆ ಬೇಡಿಕೆ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.