ETV Bharat / health

ಮದುವೆಗೆ ಮುನ್ನ ಈ ಪರೀಕ್ಷೆ ಮಾಡಿಸಿದ್ರೆ ವೈವಾಹಿಕ ಜೀವನದಲ್ಲಿ ಸಮಸ್ಯೆ ಇರೋದಿಲ್ಲ: ತಜ್ಞರ ಸಲಹೆ

Test Necessary before marriage: ದಂಪತಿಗಳು ಮದುವೆಗೆ ಮುನ್ನ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ತುಂಬಾ ಅವಶ್ಯವಾಗಿದೆ. ವಿವಾಹದ ಮೊದಲು ಯಾವೆಲ್ಲಾ ಪರೀಕ್ಷೆಗಳಿಗೆ ಒಳಗಾಗಬೇಕು ಎಂದು ತಜ್ಞರು ನೀಡಿರುವ ಸಲಹೆಗಳನ್ನು ಈ ಸ್ಟೋರಿಯಲ್ಲಿ ತಿಳಿಯೋಣ ಬನ್ನಿ.

HAPPY MARRIED LIFE TIPS
ಮದುವೆಗೆ ಮುನ್ನ ಈ ಪರೀಕ್ಷೆ ಮಾಡಿಸಿ (ETV Bharat)
author img

By ETV Bharat Health Team

Published : Nov 28, 2024, 5:28 PM IST

Test Necessary before marriage: ಮದುವೆಯು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ್ದು ಹಾಗೂ ಸಂತೋಷದ ಕ್ಷಣಗಳಿಂದ ಕೂಡಿರುತ್ತದೆ. ವಿವಾಹದ ಸಂಬಂಧದಲ್ಲಿ ಯಾವಾಗಲೂ ಮಧುರತೆ ಇರಬೇಕು ಎಂದು ಎಲ್ಲರೂ ಭಾವಿಸುತ್ತಾರೆ. ಹಾಗಾದ್ರೆ, ಮದುವೆಗೆ ಮುನ್ನ ನಾವು ಜಾತಕ ನೋಡುವುದು, ಮದುವೆಯ ಆಹಾರ ಮೆನು ಮತ್ತು ಬಟ್ಟೆ ಶಾಪಿಂಗ್ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ. ಈ ಭರಾಟೆಗಳಲ್ಲಿ ನಾವು ನಮ್ಮ ಜೀವನದ ಪ್ರಮುಖ ವಿಷಯಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಇದರ ಪರಿಣಾಮವಾಗಿ, ಹಲವು ದಂಪತಿಗಳು ಒಂದಿಲ್ಲೊಂದು ಕಾರಣಕ್ಕಾಗಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಎರಡು ಜೀವಗಳಷ್ಟೇ ಅಲ್ಲ, ಇಬ್ಬರ ಕುಟುಂಬಗಳು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಮದುವೆಗೆ ಮೊದಲು ಕೆಲವು ಪರೀಕ್ಷೆಗೆ ಒಳಗಾಗುವುದರಿಂದ ಲೈಂಗಿಕವಾಗಿ ಹರಡುವ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಆನುವಂಶಿಕ ಹಾಗೂ ಸಂತಾನೋತ್ಪತ್ತಿಗೆ ಸಂಬಂಧಿಸಿದಂತಹ ಕಾಯಿಲೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ಕಾರಣದಿಂದಾಗಿ ವಿವಾಹಕ್ಕೂ ಮೊದಲು ದಂಪತಿಗಳು ಇಲ್ಲಿ ನೀಡಲಾದ ಪರೀಕ್ಷೆಗಳನ್ನು ಮಾಡಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಹೆಚ್ಐವಿ ಪರೀಕ್ಷೆ: ಮದುವೆಗೂ ಮುನ್ನ ದಂಪತಿಗಳು ಹೆಚ್‌ಐವಿ ಪರೀಕ್ಷೆಯನ್ನು ಮಾಡಿಸಲೇಬೇಕಾಗುತ್ತದೆ. ಒಂದು ವೇಳೆ ಹೆಚ್​ಐವಿ ಸೋಂಕು ತಗುಲಿದ್ದರೆ, ಮದುವೆಯ ನಂತರ ಇಬ್ಬರ ಜೀವನವೂ ತೊಂದರೆಗೆ ಸಿಲುಕುತ್ತದೆ. ಇದರಿಂದಾಗಿ ಮದುವೆಗೂ ಮುನ್ನ ಹೆಚ್​ಐವಿ ಪರೀಕ್ಷೆ ಮಾಡಿಸಿಕೊಳ್ಳುವುದು ಅವಶ್ಯವಾಗಿದೆ. ಯಾವುದೇ ಮುಜುಗರವಿಲ್ಲದೆ ಇದನ್ನು ಮಾಡಿಸಿಕೊಳ್ಳಬೇಕು ಎಂದು ವೈದ್ಯರು ತಿಳಿಸುತ್ತಾರೆ.

ಎಸ್​ಟಿಡಿ ಪರೀಕ್ಷೆ: ದಂಪತಿಗಳು ಮದುವೆಗೆ ಮೊದಲು ಎಸ್​ಟಿಡಿ ಪರೀಕ್ಷೆಯನ್ನು ಮಾಡಿಸಬೇಕಾಗುತ್ತದೆ. ಇದರಿಂದ ಲೈಂಗಿಕವಾಗಿ ಹರಡುವ ರೋಗಗಳು ಹರಡುವ ಸಾಧ್ಯತೆ ಕಡಿಮೆ ಇರುತ್ತದೆ. ಇಬ್ಬರಲ್ಲಿ ಒಬ್ಬರು ಮದುವೆಗೆ ಮೊದಲು ಲೈಂಗಿಕ ಸಮಸ್ಯೆಗಳನ್ನು ಹೊಂದಿದ್ದರೆ, ಮದುವೆಯ ನಂತರ, ಲೈಂಗಿಕವಾಗಿ ಹರಡುವ ರೋಗಗಳು ತೀವ್ರ ಸ್ವರೂಪ ಪಡೆದುಕೊಳ್ಳಬಹುದು. ಇದರಿಂದ ಈ ಸಮಸ್ಯೆಯನ್ನು ತಪ್ಪಿಸಲು STD ಪರೀಕ್ಷೆಯನ್ನು ಮಾಡಿಸಬೇಕಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ವಂಶವಾಹಿ ಪರೀಕ್ಷೆ: ಮದುವೆಗೂ ಮುನ್ನ ಎಲ್ಲರೂ ವಂಶವಾಹಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಈ ಪರೀಕ್ಷೆಯಿಂದ ನೀವು ನಿಮ್ಮ ಮಕ್ಕಳನ್ನು ಕೆಲವು ಆನುವಂಶಿಕವಾಗಿ ಕಾಡುವ ಹಲವು ಸಮಸ್ಯೆಗಳನ್ನು ಅಪಾಯದಿಂದ ರಕ್ಷಿಸಬಹುದು. ಅಲ್ಲದೆ, ಈ ಪರೀಕ್ಷೆಯು ಭವಿಷ್ಯದಲ್ಲಿ ನಿಮ್ಮ ಮಕ್ಕಳಿಗೆ ಆನುವಂಶಿಕ ಕಾಯಿಲೆಗಳನ್ನು ತಡೆಯಲು ಈ ಪರೀಕ್ಷೆಯ ಮಾಹಿತಿ ಮುಖ್ಯವಾಗಿದೆ. ಈ ಪರೀಕ್ಷೆ ಮಾಡುವುದರಿಂದ ರೋಗ ಪತ್ತೆಯಾದರೆ ಶೀಘ್ರ ಚಿಕಿತ್ಸೆ ಪಡೆಯಬಹುದು. ಜೊತೆಗೆ ನಿಮ್ಮ ಸಂಗಾತಿ ಯಾವ ಆನುವಂಶಿಕ ಕಾಯಿಲೆಗಳಿಗೆ ಗುರಿಯಾಗುತ್ತಾರೆ ಎಂಬುದನ್ನು ಕಂಡುಹಿಡಿಯಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಥಲಸ್ಸೆಮಿಯಾ: ಥಲಸ್ಸೆಮಿಯಾ ಒಂದು ರಕ್ತದ ಕಾಯಿಲೆಯಾಗಿದೆ. ಪತಿ-ಪತ್ನಿಯರಿಬ್ಬರಿಗೂ ಈ ಕಾಯಿಲೆ ಇದ್ದರೆ, ಭವಿಷ್ಯದಲ್ಲಿ ಮಕ್ಕಳಿಗೂ ಬರುವ ಸಾಧ್ಯತೆಯಿರುತ್ತದೆ. ಮಕ್ಕಳಿಗೆ ಈ ಕಾಯಿಲೆ ಬಂದರೆ ಗಂಭೀರ ಸ್ವರೂಪ ಪಡೆದುಕೊಳ್ಳಬಹುದು. ಥಲಸ್ಸೆಮಿಯಾ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯವಾಗಿದೆ.

ರಕ್ತ ಪರೀಕ್ಷೆ: ಮದುವೆಗೆ ಮುನ್ನ ರಕ್ತ ಪರೀಕ್ಷೆ ಮಾಡುವುದು ಬಹಳ ಅತ್ಯಂತ ಅವಶ್ಯವಾಗಿದೆ. ಏಕೆಂದರೆ ದಂಪತಿಯ ರಕ್ತದ ಗುಂಪು ಪರಸ್ಪರ ಹೊಂದಿಕೆಯಾಗದಿದ್ದರೆ, ಗರ್ಭಾವಸ್ಥೆಯಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಬಹುದು. ಇದರಿಂದ ಮದುವೆಗೂ ಮುನ್ನ ಮಹಿಳೆಯರು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವೈದ್ಯ ಹೇಳುತ್ತಾರೆ.

ಮಾನಸಿಕ ಪರೀಕ್ಷೆ: ಮದುವೆಯ ಮೊದಲು ಅಥವಾ ನಂತರ ಮಾನಸಿಕ ಅಸ್ವಸ್ಥತೆಯನ್ನು ನಿರ್ಲಕ್ಷಿಸುವುದು ತುಂಬಾ ಕಷ್ಟವಾಗುತ್ತದೆ. ಮಾನಸಿಕ ಆರೋಗ್ಯವನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ನಿಮಗೆ ಯಾವುದೇ ಮಾನಸಿಕ ಸಮಸ್ಯೆಗಳಿದ್ದರೆ, ನೀವು ಮನೋವೈದ್ಯರನ್ನು ಸಂಪರ್ಕಿಸಬೇಕು. ಇದರ ಪರಿಣಾಮವಾಗಿ, ನಿಮ್ಮ ವೈವಾಹಿಕ ಜೀವನವನ್ನು ಉತ್ತಮವಾಗಿಡುತ್ತದೆ.

ಅಂಡಾಶಯದ ಪರೀಕ್ಷೆ: ಕೆಲವರು ತಡವಾಗಿ ಮದುವೆಯಾಗುತ್ತಾರೆ. 30 ವರ್ಷ ದಾಟುತ್ತಿದ್ದಂತೆ ಮಹಿಳೆಯರಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ವಯಸ್ಸಾದ ಹಾಗೂ ಇತರ ಕಾರಣಗಳಿಂದ ಮೊಟ್ಟೆಯ ಉತ್ಪಾದನೆಯು ಕಡಿಮೆಯಾಗುವ ಸಾಧ್ಯತೆಯಿರುತ್ತದೆ. ಇದರಿಂದ ಮಹಿಳೆಯರು ಅಂಡಾಶಯವನ್ನು ಪರೀಕ್ಷಿಸಿಕೊಳ್ಳಬೇಕು. ಇದರಿಂದ ಮಕ್ಕಳಾಗುವುದು ಕಷ್ಟವಾಗುತ್ತದೆ. ಅದಕ್ಕಾಗಿಯೇ ಈ ಪರೀಕ್ಷೆಯು ತುಂಬಾ ಮುಖ್ಯವಾಗಿದೆ.

ಬಂಜೆತನ ಪರೀಕ್ಷೆ: ಪುರುಷರಲ್ಲಿ ವೀರ್ಯಾಣು ಸಂಖ್ಯೆಯನ್ನು ಅಳೆಯಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಪುರುಷರಲ್ಲಿ ವೀರ್ಯದ ಸಂಖ್ಯೆ ಕಡಿಮೆಯಿದ್ದರೆ, ಅದನ್ನು ಹೆಚ್ಚಿಸಬಹುದು. ಆದ್ದರಿಂದ ಪುರುಷರು ಈ ಪರೀಕ್ಷೆಯನ್ನು ಮಾಡಬೇಕಾಗುತ್ತದೆ. ಇದು ಭವಿಷ್ಯದ ಅಪಾಯಗಳನ್ನು ತಡೆಯಬಹುದು ಎಂದು ವೈದ್ಯರು ವಿವರಿಸುತ್ತಾರೆ.

ಪ್ಯಾಪ್ ಸ್ಮೀಯರ್ ಪರೀಕ್ಷೆ: ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ನಿರ್ಧರಿಸಲು ಪ್ಯಾಪ್ ಸ್ಮೀಯರ್ ಪರೀಕ್ಷೆಯನ್ನು ಮಾಡಲಾಗುತ್ತದೆ. ಆದ್ದರಿಂದ ಮದುವೆಗೂ ಮುನ್ನ ಮಹಿಳೆಯರು ಪ್ಯಾಪ್ ಸ್ಮೀಯರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನ, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ.

ಇದನ್ನೂ ಓದಿ: 2024ರಲ್ಲಿ ವಿವಾಹವಾಗಬೇಕೆಂಬ ಇಚ್ಛೆ ಹೊಂದಿದ್ದೀರಾ?: ಇಲ್ಲಿವೆ ಅತ್ಯಂತ ಮಂಗಳಕರ ಶುಭ ಮುಹೂರ್ತಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.