ETV Bharat / state

ಭಲೇ ಪೋರ... ನೇಗಿಲು ಹಿಡಿದು ಉಳುಮೆ ಮಾಡಿದ 5 ವರ್ಷದ ಬಾಲಕ - ಕಾರವಾರ

ಕೃಷಿಯೆಂದರೆ ಯುವಜನತೆ ಅಷ್ಟಕ್ಕಷ್ಟೇ ಅನ್ನೊ ಕಾಲ ಇದು. ಆದರೆ ಇಲ್ಲೊಬ್ಬ ಪುಟ್ಟ ಪೋರ ತನ್ನ ತಂದೆಯ ಜೊತೆಗೆ ನೇಗಿಲು ಹಿಡಿದು ಹೊಲ ಉತ್ತು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಆ ದೃಶ್ಯಗಳನ್ನೊಮ್ಮೆ ನೀವೂ ನೋಡಿ...

plowing
ಗದ್ದೆ ಉಳುಮೆ
author img

By

Published : Jul 12, 2020, 6:10 PM IST

ಕಾರವಾರ: ಈತ ಐದು ವರ್ಷದ ಪುಟ್ಟ ಪೋರ. ಕುಟುಂಬದವರ ಕೃಷಿ ಕಾಯಕದಿಂದ ಪ್ರೇರಿತನಾದ ಈತ ನಿತ್ಯ ತಂದೆ ಸೇರಿದಂತೆ ಕೆಲಸದವರೊಂದಿಗೆ ತೆರಳಿ ಉಳುಮೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

ನೇಗಿಲು ಹಿಡಿದು ಗದ್ದೆ ಉಳುಮೆ ಮಾಡಿದ ಬಾಲಕ

ಹೌದು, ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರ್ವೆ ಗ್ರಾಮದ ತನ್ವಿತ ಮಹಾದೇವ ಗೌಡ ಇದೀಗ ಹೊಲದಲ್ಲಿ ನೇಗಿಲು ಹಿಡಿದು ಉಳುಮೆ ಮಾಡುತ್ತಿದ್ದಾನೆ. ತಂದೆ ಹಾಗೂ ಕುಟುಂಬದವರು ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿದ್ದಾರೆ. ಇವರ ಜೊತೆ ನಿತ್ಯ ಗದ್ದೆಗೆ ತೆರಳುತ್ತಿದ್ದ ಈತ ಇದೀಗ ಅವರೊಂದಿಗೆ ನೇಗಿಲು ಹಿಡಿಯುವುದನ್ನು ರೂಢಿಗತ ಮಾಡಿಕೊಂಡಿದ್ದಾನೆ.

ಈತ ಉಳುಮೆ ಮಾಡುತ್ತಿರುವ ವಿಡಿಯೋ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದು, ಪುಟ್ಟ ಬಾಲಕನ ಕೃಷಿ ಪ್ರೀತಿ ಹೀಗೆ ಮುಂದುವರಿಯಲಿ ಎಂದು ಸ್ಥಳೀಯರು ಶುಭ ಹಾರೈಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.