ಕಾರವಾರ : ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯವೇ ತುಂಬಿಕೊಂಡು ಡಂಪಿಂಗ್ ಯಾರ್ಡ್ ರೀತಿ ಕಾಣಿಸಿಕೊಳ್ಳುತ್ತಿದ್ದ ಕಾರವಾರ ಜಿಲ್ಲಾಧಿಕಾರಿ ಕಚೇರಿ ಎದುರಿನ ಟ್ಯಾಗೋರ್ ಕಡಲತೀರ ಈಗ ಸ್ವಚ್ಛ, ಸುಂದರ. ಇದಕ್ಕೆ ಕಾರಣ ಈಟಿವಿ ಭಾರತ್ ವರದಿ.
ಕೆಲ ದಿನಗಳ ಹಿಂದೆ ಉತ್ಸವವೊಂದು ಕಡಲ ತೀರದಲ್ಲಿ ನಡೆದ ಹಿನ್ನಲೆ ಅಂಗಡಿ-ಮಳಿಗೆಗಳನ್ನ ಹಾಕಲಾಗಿತ್ತು. ಬಳಿಕ ಮೂರು ದಿನಗಳ ಹಿಂದೆ ಅಂಗಡಿಗಳನ್ನ ತೆರವು ಮಾಡಲಾಗಿತ್ತು. ಆದರೆ, ರಾಶಿ ರಾಶಿ ಕಸವನ್ನ ಹಾಗೇ ಬಿಟ್ಟು ಹೋಗಿದ್ದರು. ಇದರಿಂದಾಗಿ ಇಡೀ ಕಡಲ ತೀರವೇ ಕಸ ಹರಡಿ ನೋಡದಂತಹ ಪರಿಸ್ಥಿತಿ ನಿರ್ಮಾಣವಾಗಿ ಪ್ರವಾಸಿಗರು ಬೇಸರ ವ್ಯಕ್ತಪಡಿಸುವಂತಾಗಿತ್ತು.
ಈ ಬಗ್ಗೆ ಈಟಿವಿ ಭಾರತ್ 'ಕಸದ ತೊಟ್ಟಿಯಾದ ಟ್ಯಾಗೋರ್ ಕಡಲತೀರ ; ಪ್ರವಾಸಿಗರ ಬೇಸರ' ಎಂಬ ವರದಿ ಪ್ರಸಾರ ಮಾಡಿದ ಮರು ದಿನವೇ ನಗರಸಭೆಯಿಂದ ಕಸವನ್ನು ಸ್ವಚ್ಛಗೊಳಿಸಲಾಗಿದೆ.
ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ನಗರಸಭೆಯ ಪೌರ ಕಾರ್ಮಿಕರಿಂದ ಕಸ ಒಟ್ಟುಗೂಡಿಸಿ, ತ್ಯಾಜ್ಯ ವಿಲೇವಾರಿ ವಾಹನದಲ್ಲಿ ತುಂಬಿಕೊಂಡು ವಿಲೇವಾರಿ ಘಟಕಕ್ಕೆ ಕೊಂಡೊಯ್ಯಲಾಗಿದೆ. ವರದಿಯ ಬಳಿಕವಾದರೂ ನಗರಸಭೆ ಎಚ್ಚೆತ್ತುಕೊಂಡಿದ್ದಕ್ಕೆ 'ಈಟಿವಿ ಭಾರತ್'ಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ.. ಕಸದ ತೊಟ್ಟಿಯಂತಾದ ಟ್ಯಾಗೋರ್ ಕಡಲತೀರ: ಪ್ರವಾಸಿಗರ ಬೇಸರ