ETV Bharat / state

ಅನಾರೋಗ್ಯದ ನಡುವೆಯೂ ವ್ಹೀಲ್​ ಚೇರ್​ನಲ್ಲಿ ಬಂದು ಮತಹಾಕಿದ ಪದ್ಮಶ್ರೀ ಸುಕ್ರಜ್ಜಿ.. ಯುವ ಜನತೆಗೆ ಮಾದರಿ - ವಿಶೇಷಚೇತನರ ಮತಗಟ್ಟೆ

ಅಂಕೋಲಾ ತಾಲ್ಲೂಕಿನ ಬಡಗೇರಿ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಪ್ರದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮಗೌಡ ಅವರು ಹಕ್ಕು ಚಲಾಯಿಸಿದ್ದಾರೆ.

ಪ್ರದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮಗೌಡ
ಪ್ರದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮಗೌಡ
author img

By

Published : May 10, 2023, 7:17 PM IST

Updated : May 10, 2023, 7:37 PM IST

ಪದ್ಮಶ್ರೀ ಸುಕ್ರಿ ಬೊಮ್ಮಗೌಡ

ಕಾರವಾರ : ಅಂಕೋಲಾದ ಪದ್ಮಶ್ರೀ ಪುರಸ್ಕೃತ ಜಾನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ಅವರು ಇಂದು ವ್ಹೀಲ್ ಚೇರ್‌ನಲ್ಲೇ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ಅಂಕೋಲಾ ತಾಲ್ಲೂಕಿನ ಬಡಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 182ರಲ್ಲಿ ಸುಕ್ರಿ ಬೊಮ್ಮಗೌಡ ಮತದಾನ ಮಾಡಿದರು. ಸೊಂಟದ ನೋವಿನಿಂದ ಬಳಲುತ್ತಿರುವ ಸುಕ್ರಜ್ಜಿಗೆ ನಡೆಯಲು ಕಷ್ಟವಾಗಿರುವ ಹಿನ್ನೆಲೆ ತಮ್ಮ ಮನೆಯಿಂದ ಕಾರಿನಲ್ಲಿ ಮತಗಟ್ಟೆಗೆ ಆಗಮಿಸಿ ಅಲ್ಲಿ ವ್ಹೀಲ್ ಚೇರ್ ಮೂಲಕ ತೆರಳಿ ಮತದಾನ ಮಾಡಿ ಎಲ್ಲರಿಗೂ ಮಾದರಿಯಾದರು.

ಇಳಿವಯಸ್ಸಿನವರಿಗೆ ಮನೆಯಿಂದ ಮತದಾನಕ್ಕೆ ಅವಕಾಶ ನೀಡಿದ್ದರೂ ಸಹ ತಾವು ಮತಗಟ್ಟೆಗೆ ಬಂದು ಮತದಾನ ಮಾಡುವುದಾಗಿ ತಿಳಿಸಿ ಇಂದು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಮಹತ್ವದ ಜವಾಬ್ದಾರಿಯ ಪ್ರಾಮುಖ್ಯತೆಯನ್ನು ಸುಕ್ರಜ್ಜಿ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಸಚಿವ ಕಾರಜೋಳ ಕುಟುಂಬ ಸಮೇತ ಮತದಾನ : ಏಕಕಾಲಕ್ಕೆ ಆಗಮಿಸಿ ಸಚಿವ ನಿರಾಣಿ ಕುಟುಂಬದ 20 ಮಂದಿ ಮತದಾನ

ಮತದಾನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸುಕ್ರಜ್ಜಿ, ಸರ್ಕಾರ ರಚನೆಗೆ ನಮ್ಮ‌ ವೋಟು ಮಹತ್ವದ್ದಾಗಿದೆ. ಎಲ್ಲರೂ ಕೂಡ ಕಡ್ಡಾಯವಾಗಿ ಮತದಾನ ಮಾಡಬೇಕು. ಮದ್ಯ, ಹಣದ ಆಮಿಷಕ್ಕೆ ಒಳಗಾಗದೇ ಎಲ್ಲರೂ ಸಹ ಮತದಾನವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದ್ದರು.

ಹಾಲಕ್ಕಿ ಸಮುದಾಯವನ್ನು ಎಸ್ಟಿ ಪಂಗಡಕ್ಕೆ ಸೇರಿಸಬೇಕಾಗಿದ್ದು, ಜನಪರ ಸರ್ಕಾರವನ್ನ ಆಯ್ಕೆ ಮಾಡಿದಲ್ಲಿ ಜನರಿಗೆ ಅಗತ್ಯವಿರುವ ಕಾರ್ಯಗಳನ್ನು ಕೈಗೊಳ್ಳುವುದು ಸಾಧ್ಯವಾಗುತ್ತದೆ. ಜನರಿಗೆ ಒಳ್ಳೆಯದಾಗುವ ನಿಟ್ಟಿನಲ್ಲಿ ಯೋಚಿಸಿ ಎಲ್ಲರೂ ಮತದಾನ ಮಾಡಿ ಎಂದು ಸುಕ್ರಜ್ಜಿ ಮನವಿ ಮಾಡಿಕೊಂಡಿದ್ದರು.

ಪ್ರಜಾಪ್ರಭುತ್ವದ ಹಬ್ಬದಲ್ಲಿ ಗಮನ ಸೆಳೆದ ವಿಶೇಷ ಮತಗಟ್ಟೆಗಳು: ಪ್ರಜಾಪ್ರಭುತ್ವದ ಹಬ್ಬದಂತಿರುವ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಂಡಿರುವ ಉತ್ತರಕನ್ನಡ ಜಿಲ್ಲೆಯ ವಿವಿಧೆಡೆ ಒಟ್ಟು 71 ಮತಗಟ್ಟೆಗಳನ್ನು ವಿಶೇಷವಾಗಿ ಶೃಂಗರಿಸುವ ಮೂಲಕ ಮತದಾರರ ಸೆಳೆಯುವ ಪ್ರಯತ್ನ ನಡೆಸಿತು. ಜಿಲ್ಲೆಯ ಆರು ವಿಧಾನಸಭಾ ವ್ಯಾಪ್ತಿಯಲ್ಲಿ ಸಿದ್ಧಪಡಿಸಲಾಗಿದ್ದ ಈ ವಿಶೇಷ ಮತಗಟ್ಟೆಗಳು ಮತದಾರರ ಗಮನ ಸೆಳೆದವು. ಅಲ್ಲದೆ ಆಯಾ ಕ್ಷೇತ್ರಗಳಲ್ಲಿ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಮತಗಟ್ಟೆಗಳಲ್ಲಿನ ಕಲಾಕೃತಿಗಳು ಎಲ್ಲರ ಗಮನ ಸೆಳೆಯಿತು.

ಇದನ್ನೂ ಓದಿ: ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ಮತದಾನ.. ಯುವಕರಿಗೆ ಮಾದರಿಯಾದ ಹಿರಿಯ ನಾಗರಿಕರು

ಇನ್ನು ಕಾರವಾರ ಮತಗಟ್ಟೆಗೆ ಮತದಾನದ ವೇಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಪವಿಭಾಗಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ಜಯಲಕ್ಷ್ಮೀ ಅವರು ಮಾತನಾಡಿ, ವಿಶೇಷಚೇತನರ ಮತಗಟ್ಟೆಯಲ್ಲಿ ವ್ಹೀಲ್​ ಚೇರ್, ಅಂಧ ಮತದಾರರಿಗೆ ಬ್ರೈಲ್ ಬ್ಯಾಲೆಟ್ ಪೇಪರ್ ವ್ಯವಸ್ಥೆ ಮಾಡಲಾಗಿದ್ದು, ಅವರನ್ನು ಕರೆದೊಯ್ಯಲು ಸಹಚರರ ವ್ಯವಸ್ಥೆ ಕೂಡ ಮಾಡಲಾಗಿತ್ತು. ಕ್ಷೇತ್ರದಲ್ಲಿ ಮೂರು ಕಡೆ ಇವಿಎಂ ಮಷಿನ್ ಅನ್ನು ಸಿಬ್ಬಂದಿ ಸರಿಯಾಗಿ ಆನ್ ಮಾಡಲು ಬಾರದ ಕಾರಣ ಸ್ವಲ್ಪ ವಿಳಂಬವಾಗಿತ್ತು. ಉಳಿದಂತೆ ಎಲ್ಲೆಡೆ ಶಾಂತಿಯುತ ಮತದಾನ ನಡೆಯಿತು ಎಂದು ಮಾಹಿತಿ ನೀಡಿದ್ರು.

ಇದನ್ನೂ ಓದಿ: ಇಳಿ ವಯಸ್ಸಲ್ಲೂ ಕುಂದದ ಉತ್ಸಾಹ: ಶತಾಯುಷಿ ಅಜ್ಜಿಯಿಂದ ಮತದಾನ

Last Updated : May 10, 2023, 7:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.