ETV Bharat / state

ಕ್ರಿಕೆಟ್ ಸ್ಟೇಡಿಯಂಗಾಗಿ ನಾಯಕರ ಮುಸುಕಿನ ಗುದ್ದಾಟ.. ಸ್ಥಳ ನಿಗದಿಗಾಗಿ ದಶಕಗಳ ಕಿತ್ತಾಟ - ಶಾಸಕ ಸತೀಶ್ ಸೈಲ್

ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ವಿಚಾರ ಹಾಲಿ, ಮಾಜಿ ಶಾಸಕರು ಹಾಗೂ ಮಾಜಿ ಸಚಿವರ ನಡುವೆ ಕಿತ್ತಾಟಕ್ಕೆ ಕಾರಣವಾಗಿದ್ದು, ಮೂವರು ಈ ವಿಚಾರವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯ ಪ್ರವೇಶಿಸಿ ಯೋಜನೆ ಕೈತಪ್ಪಿ ಹೋಗದಂತೆ ನೋಡಿಕೊಳ್ಳಬೇಕಾಗಿದೆ..

cricket-stadium-project-delaying-from-politics-in-karwar
ಕ್ರಿಕೆಟ್ ಸ್ಟೇಡಿಯಂ ವಿಚಾರದಲ್ಲಿ ನಾಯಕರ ರಾಜಕೀಯ
author img

By

Published : Apr 5, 2021, 7:32 PM IST

ಕಾರವಾರ (ಉ.ಕ) : ಕಡಲ ನಗರಿ ಕಾರವಾರದ ಕಾಳಿ ನದಿ ಸಂಗಮದ ಬಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಿಸಲು ಸಿದ್ಧತೆ ನಡೆಸಲಾಗಿತ್ತು. ಸರ್ಕಾರ ಕೆಸಿಎ ಒಡಂಬಡಿಕೆಯಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಜಾಗ ಕೂಡ ಗುರುತಿಸಿತ್ತು. ಆದರೆ, ಈ ಕ್ರಿಕೆಟ್ ಸ್ಟೇಡಿಯಂ ವಿಚಾರ ಕಾರವಾರದಲ್ಲಿ ಹಾಲಿ, ಮಾಜಿ ಶಾಸಕರು ಹಾಗೂ ಸಚಿವರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಕಾರವಾರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕಾಳಿನದಿ ಬಳಿಯ ಸದಾಶಿವಗಡ ಗುಡ್ಡದ ಮೇಲೆ ಕ್ರಿಕೆಟ್ ಮೈದಾನ ನಿರ್ಮಿಸಲು ನಿರ್ಧರಿಸಲಾಗಿತ್ತು. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಈ ಯೋಜನೆ ಕೈಗೆತ್ತಿಗೊಂಡಿದೆ.

ಕರ್ನಾಟಕ ಕ್ರಿಕೆಟ್ ಅಕಾಡೆಮಿ ಜೊತೆ ಒಡಂಬಡಿಕೆ ಸಹ ಮಾಡಿಕೊಳ್ಳಲಾಗಿತ್ತು. ನದಿ ಮತ್ತು ಸಮುದ್ರ ಸಂಗಮ ಆಗುವ ಪ್ರದೇಶದಲ್ಲಿ ಕ್ರೀಡಾಂಗಣ ರಾಜ್ಯದಲ್ಲಿ ಯಾವ ಪ್ರದೇಶದಲ್ಲೂ ಇಲ್ಲ. ಇನ್ನು, ದೇಶದಲ್ಲೂ ಸುಂದರ ಪ್ರಕೃತಿಯ ಮಡಿಲಿನಲ್ಲಿ ನಿರ್ಮಾಣವಾಗುವ ಏಕೈಕ ಕ್ರೀಡಾಂಗಣ ಎನ್ನುವ ಹೆಗ್ಗಳಿಗೆ ಪಾತ್ರವಾಗುವ ನಿರೀಕ್ಷೆಯಿತ್ತು.

ಕ್ರಿಕೆಟ್ ಸ್ಟೇಡಿಯಂಗಾಗಿ ನಾಯಕರ ಮುಸುಕಿನ ಗುದ್ದಾಟ..

ಆದರೆ, ಈ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಅನ್ನೋದು ಹಾಲಿ, ಮಾಜಿ ಶಾಸಕರು ಹಾಗೂ ಸಚಿವರ ನಡುವೆ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಒಂದೆಡೆ ಮಾಜಿ ಶಾಸಕ ಸತೀಶ್ ಸೈಲ್ ಕ್ರೀಡಾಂಗಣ ನಿರ್ಮಾಣವಾಗಲೇಬೇಕು ಎಂದು ಪಟ್ಟು ಹಿಡಿದಿದ್ದರೇ, ಇನ್ನೊಂದೆಡೆ ಹಾಲಿ ಶಾಸಕಿ ರೂಪಾಲಿ ನಾಯ್ಕ್ ಈಗಿರುವ ಪ್ರದೇಶ ಸೂಕ್ತವಲ್ಲ, ಬೇರೆ ಪ್ರದೇಶದಲ್ಲಿ ಬೇಕಾದರೆ ಕ್ರಿಡಾಂಗಣ ಮಾಡಿ. ಇಷ್ಟವಿದ್ದರೇ ಮಾಜಿ ಶಾಸಕರು ತಮ್ಮ ಸ್ವಂತ ಜಮೀನು ಕೊಟ್ಟು ಕ್ರೀಡಾಂಗಣ ಮಾಡಲಿ ಎಂದು ಕಿಡಿಕಾರುತ್ತಿದ್ದಾರೆ.

ಇನ್ನು, ಸುಮಾರು 14 ಎಕರೆ ಗೋಮಾಳ ಜಾಗದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೆ, ಕ್ರೀಡಾಂಗಣ ನಿರ್ಮಿಸಲು ನಿರ್ಧರಿಸಿರುವ ಸ್ಥಳದ ಅಕ್ಕಪಕ್ಕ 350 ಮನೆಗಳಿದ್ದು ಗುಡ್ಡದ ಮೇಲೆ ಕ್ರೀಡಾಂಗಣ ನಿರ್ಮಿಸಲು ಮುಂದಾಗಿ ಕಲ್ಲು ಮಣ್ಣು ತೆಗೆದರೆ ಮನೆಗಳಿಗೆ ಸಮಸ್ಯೆ ಆಗುತ್ತದೆ. ಸ್ಥಳೀಯರ ವಿರೋಧ ಇರುವುದರಿಂದ ಅಲ್ಲಿ ಕ್ರೀಡಾಂಗಣ ಬೇಡ ಅನ್ನೋದು ಹಾಲಿ ಶಾಸಕಿ ರೂಪಾಲಿ ನಾಯ್ಕರ ಅಭಿಪ್ರಾಯ.

ಮಾಜಿ ಶಾಸಕ ಸತೀಶ್ ಸೈಲ್ ಒಂದು ಹೆಜ್ಜೆ ಮುಂದೆ ಹೋಗಿ ಸ್ಥಳೀಯರೊಂದಿಗೆ ಸಮಾಲೋಚನಾ ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯವನ್ನು ಸಹ ಪಡೆದಿದ್ದರು. ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಒಂದು ಒಳ್ಳೆಯ ಯೋಜನೆ ಇದಾಗಿದೆ. ಈಗ ನಿರ್ಮಿಸಲು ಮುಂದಾಗಿರುವ ಸ್ಥಳದಲ್ಲೇ ಕ್ರೀಡಾಂಗಣ ನಿರ್ಮಿಸಲಿ ಎಂದು ಒತ್ತಾಯಿಸಿದ್ದಾರೆ.

ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕೂಡ ಕ್ರೀಡಾಂಗಣ ನಿರ್ಮಾಣದ ವಿಷಯದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸಾಗರಪೈ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಲಿ ಮತ್ತು ಮಾಜಿ ಶಾಸಕರು ರಾಜಕೀಯ ಉದ್ದೇಶದಿಂದ ಇಂತಹ ರಾಜಕೀಯ ನಡೆಸುತ್ತಿದ್ದಾರೆ. ಮಾಜಿ ಶಾಸಕ ಸತೀಶ್ ಸೈಲ್ ಕೆಸಿಎ ಏಜೆಂಟರ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ವಿಚಾರ ಹಾಲಿ, ಮಾಜಿ ಶಾಸಕರು ಹಾಗೂ ಮಾಜಿ ಸಚಿವರ ನಡುವೆ ಕಿತ್ತಾಟಕ್ಕೆ ಕಾರಣವಾಗಿದ್ದು, ಮೂವರು ಈ ವಿಚಾರವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯ ಪ್ರವೇಶಿಸಿ ಯೋಜನೆ ಕೈತಪ್ಪಿ ಹೋಗದಂತೆ ನೋಡಿಕೊಳ್ಳಬೇಕಾಗಿದೆ.

ಇದನ್ನೂ ಓದಿ: ಅನಂತಕುಮಾರ್ ಗೆದ್ಮೇಲೆ 5 ವರ್ಷ ಕಾಣಿಸಲ್ಲ, ಈಗಲೂ ಕಾಣಿಸ್ತಿಲ್ಲ ಅಷ್ಟೇ.. ಮಾಜಿ ಸಚಿವ ಅಸ್ನೋಟಿಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.