ETV Bharat / state

ಸರ್ಕಾರ ಅವಕಾಶ ನೀಡಿದ್ರೂ ಮೀನುಗಾರಿಕೆ ಕಷ್ಟ: ಮೀನುಗಾರರ ಅಳಲು - ರಾಜ್ಯ ಸರ್ಕಾರ

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮೀನುಗಾರರ ಸ್ಥಿತಿ ಈ ಬಾರಿ ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ. ಉತ್ತಮ ಮೀನುಗಾರಿಕೆ ನಡೆಯಬೇಕಾಗಿದ್ದ ಅವಧಿಯಲ್ಲಿ ಕೋವಿಡ್-‌19 ಹೊಡೆತ ನೀಡಿದೆ. ಇನ್ನೇನು ಮಳೆಗಾಲ ಆರಂಭವಾಗುವ ಹಂತದಲ್ಲೇ 14 ದಿನಗಳ ಕಾಲ ಮೀನುಗಾರಿಕೆ ಅವಧಿಯನ್ನ ಸರ್ಕಾರ ವಿಸ್ತರಣೆ ಮಾಡಿದ್ರೂ ಪ್ರಯೋಜನವಾಗ್ತಿಲ್ಲ ಅಂತ ಮೀನುಗಾರರು ಅಳಲು ತೋಡಿಕೊಂಡಿದ್ದಾರೆ.

coron-virus-effect-fishermans-facing-problems-in-uttar-kannada
ಸರ್ಕಾರ ಅವಕಾಶ ನೀಡಿದ್ರೂ ಮೀನುಗಾರಿಕೆ ಕಷ್ಟ; ಮೀನುಗಾರರ ಅಳಲು
author img

By

Published : Jun 3, 2020, 7:27 PM IST

ಕಾರವಾರ(ಉತ್ತರಕನ್ನಡ): ರಾಜ್ಯದಲ್ಲಿ ಈ ಬಾರಿ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಕೊರೊನಾದಿಂದಾಗಿ ಕಳೆದೆರಡು ತಿಂಗಳಿನಿಂದ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಮೀನುಗಾರರ ಕಷ್ಟವನ್ನ ಅರಿತ ಸರ್ಕಾರ ಮೀನುಗಾರಿಕೆ ಅವಧಿಯನ್ನ 14 ದಿನಗಳವರೆಗೆ ವಿಸ್ತರಣೆ ಮಾಡಿತ್ತು. ಆದ್ರೆ ಅನುಮತಿ ನೀಡಿದರೂ ಮೀನುಗಾರಿಕೆ ನಡೆಸಲಾಗದ ಪರಿಸ್ಥಿತಿ ಮೀನುಗಾರರದ್ದಾಗಿದೆ.

ಸರ್ಕಾರ ಅವಕಾಶ ನೀಡಿದ್ರೂ ಮೀನುಗಾರಿಕೆ ಕಷ್ಟ: ಮೀನುಗಾರರ ಅಳಲು

ಉತ್ತರಕ ನ್ನಡ ಜಿಲ್ಲೆಯ ಕರಾವಳಿಯಲ್ಲಿ ಈ ಬಾರಿ ಮೀನುಗಾರರ ಪರಿಸ್ಥಿತಿ ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ. ಉತ್ತಮ ಮೀನುಗಾರಿಕೆ ನಡೆಯಬೇಕಾಗಿದ್ದ ಅವಧಿಯಲ್ಲಿ ಕೊರೊನಾ ಭೀತಿಯಿಂದಾಗಿ ಮೀನುಗಾರಿಕೆ ಸ್ಥಗಿತ ಮಾಡಲಾಗಿತ್ತು. ಇನ್ನೇನು ಮಳೆಗಾಲ ಆರಂಭವಾಗುವ ಹಂತದಲ್ಲೇ 14 ದಿನಗಳ ಕಾಲ ಮೀನುಗಾರಿಕೆ ಅವಧಿಯನ್ನ ಸರ್ಕಾರ ವಿಸ್ತರಣೆ ಮಾಡಿದ್ರೂ ಪ್ರಯೋಜನವಾಗ್ತಿಲ್ಲವಂತೆ.

ಕಾರವಾರದ ಬೈತಖೋಲ ಬಂದರಿನಲ್ಲಿ 200ಕ್ಕೂ ಅಧಿಕ ಯಾಂತ್ರಿಕ ಮೀನುಗಾರಿಕಾ ಬೋಟುಗಳಿದ್ದು, ಸಾವಿರಾರು ಮಂದಿ ಮೀನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಸಾಲ ಮಾಡಿ ಮೀನುಗಾರಿಕೆ ಪ್ರಾರಂಭಿಸಿದ ಮೀನುಗಾರರಿಗೆ ಕೋವಿಡ್‌ ಪೆಟ್ಟು ಕೊಟ್ಟಿತ್ತು. ಇದೀಗ ಮೀನುಗಾರರ ಸಂಕಷ್ಟವನ್ನ ಅರಿತ ಸರ್ಕಾರ ಜೂನ್ ತಿಂಗಳಲ್ಲಿ 14 ದಿನ ಮೀನುಗಾರಿಕೆ ನಡೆಸಲು ಅವಕಾಶ ನೀಡಿದರೂ ಯಾರಿಗೂ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಮೀನುಗಾರಿಕಾ ಬೋಟ್ ಮಾಲೀಕರಾದ ಶ್ರೀಧರ ತಾಂಡೇಲ.

ಮೀನುಗಾರಿಕಾ ಬೋಟುಗಳಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಬಹುತೇಕರು ಹೊರ ರಾಜ್ಯದವರಾದ ಕಾರಣ ಕೋವಿಡ್‌ನಿಂದಾಗಿ ಎಲ್ಲರೂ ಊರಿಗೆ ಹೋಗಿದ್ದಾರೆ. ಬೋಟುಗಳಲ್ಲಿ ಬಲೆ ಎಳೆಯುವ ಕಾರ್ಯಕ್ಕೆ ಕಾರ್ಮಿಕರು ಸಿಗುತ್ತಿಲ್ಲ. ಯಾಂತ್ರೀಕೃತ ಬೋಟುಗಳು ಮೀನುಗಾರಿಕೆಗೆ ತೆರಳಲು ಸಾಧ್ಯವಾಗ ಸ್ಥಿತಿ ಇದೆ. ಅರಬ್ಬಿ ಸಮುದ್ರದಲ್ಲಿ ಇದೀಗ ಚಂಡಮಾರುತ ಉಂಟಾಗಿದ್ದು, ಮಳೆಗಾಲ ಆರಂಭವಾಗಿರುವುದರಿಂದ ಯಾರೂ ಸಹ ಸಮುದ್ರಕ್ಕೆ ಇಳಿಯುವುದಿಲ್ಲ.

ಇದೀಗ ಮೀನುಗಳು ಮೊಟ್ಟೆ ಇಡುವ ಸಂದರ್ಭವಾಗಿದ್ದು, ಮೀನುಗಾರಿಕೆ ನಡೆಸಿದಲ್ಲಿ ಮೀನು ಸಂತತಿ ನಾಶ ಮಾಡಿದಂತಾಗುತ್ತದೆ. ಹೀಗಾಗಿ ಅಗಸ್ಟ್ 1ರಿಂದ ಮೀನುಗಾರಿಕೆ ಮರು ಪ್ರಾರಂಭವಾಗುವ ಮೊದಲು ಜುಲೈ ತಿಂಗಳ ಕೊನೆಯ ವಾರದಲ್ಲೇ ಅವಕಾಶ ನೀಡಬೇಕು ಎನ್ನುವುದು ಮೀನುಗಾರ ಪ್ರಶಾಂತ ಹರಿಕಂತ್ರ ಅವರ ಅಭಿಪ್ರಾಯವಾಗಿದೆ.

ಸಂಕಷ್ಟದಲ್ಲಿರುವ ಮೀನುಗಾರರಿಗೆ ನೆರವಾಗಲು ಸರ್ಕಾರ ಮೀನುಗಾರಿಕಾ ಅವಧಿಯನ್ನ ವಿಸ್ತರಣೆ ಮಾಡಿದ್ದು ಉತ್ತಮ ನಿರ್ಧಾರ ಸರಿ. ಆದರೆ ಇದರಿಂದ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಿಗೆ ಯಾವುದೇ ಪ್ರಯೋಜನ ಇಲ್ಲವಾಗಿದ್ದು, ಈ ಬಗ್ಗೆ ಸರ್ಕಾರ ಪರಿಶೀಲಿಸಿ ಮೀನುಗಾರರ ಬೇಡಿಕೆಗನುಗುಣವಾಗಿ ಅವಧಿ ವಿಸ್ತರಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.