ETV Bharat / state

ನಾಲ್ಕು ಬಾರಿ ಚೆಕ್ ಬೌನ್ಸ್: ಡಾನ್ಸ್ ಸ್ಪರ್ಧೆಯಲ್ಲಿ ಗೆದ್ದವರಿಗೆ ಕೊಟ್ಟ ಬಹುಮಾನದಲ್ಲಿ ವಂಚನೆ!? - ಕರಾವಳಿ ಹಬ್ಬ ಕಾರ್ಯಕ್ರಮ

ಕರಾವಳಿ ಉತ್ಸವದಲ್ಲಿ ರಾಷ್ಟ್ರಮಟ್ಟದ ಡ್ಯಾನ್ಸ್ ಕಾಂಪಿಟೇಶನ್‌ ನಡೆದಿದ್ದು, ಈ ಸ್ಪರ್ಧೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ನೀಡಿದ್ದ ಬಹುಮಾನದ ಚೆಕ್​ ನಾಲ್ಕು ಬಾರಿ ಬೌನ್ಸ್​ ಆಗಿರುವುದು ಬೆಳಕಿಗೆ ಬಂದಿದೆ.

Check bounce given to the candidates  candidates who won the dance competition  dance competition in Karavali utsav  Check bounce case in Karwar  ನಾಲ್ಕು ಬಾರಿ ಚೆಕ್ ಬೌನ್ಸ್  ಸ್ಪರ್ಧೆಯಲ್ಲಿ ಗೆದ್ದವರಿಗೆ ಕೊಟ್ಟ ಬಹುಮಾನದಲ್ಲಿ ವಂಚನೆ  ರಾಷ್ಟ್ರಮಟ್ಟದ ಡ್ಯಾನ್ಸ್ ಕಾಂಪಿಟೇಶನ್‌  ಬಹುಮಾನದ ಚೆಕ್​ ನಾಲ್ಕು ಬಾರಿ ಬೌನ್ಸ್​ ದಿ ಯುನಿಟಿ ಕ್ರಿವ್ ಹೆಸರಿನ ಗೋವಾ ಮೂಲದ ಡ್ಯಾನ್ಸ್ ತಂಡ  ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ  ಕರಾವಳಿ ಹಬ್ಬ ಕಾರ್ಯಕ್ರಮ  ತಾಂಡವ ಕಲಾನಿಕೇತನ ಎಂಬ ಸಂಸ್ಥೆ
ಡಾನ್ಸ್ ಸ್ಪರ್ಧೆಯಲ್ಲಿ ನಮಗೆ ಕೊಟ್ಟ ಚೆಕ್​ ಬೌನ್ಸ್​ ಆಗಿದೆ ಎಂದ ಗೆದ್ದ ಅಭ್ಯರ್ಥಿಗಳು..
author img

By

Published : Nov 4, 2022, 2:51 PM IST

Updated : Nov 4, 2022, 3:09 PM IST

ಕಾರವಾರ: ಅವರು ಡ್ಸಾನ್ಸ್ ಗ್ರೂಪ್‌ ಮಾಡಿಕೊಂಡು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಾ ತಮ್ಮ ಕಲೆ ಪ್ರದರ್ಶಿಸುತ್ತಿದ್ದ ವಿದ್ಯಾರ್ಥಿಗಳು. ಅದರಂತೆ ಕಾರವಾರದಲ್ಲಿ ನಡೆದ ಕರಾವಳಿ ಹಬ್ಬದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಡ್ಯಾನ್ಸ್ ಕಾಂಪಿಟೇಶನ್ ನಲ್ಲಿ ಪ್ರದರ್ಶನ ನೀಡಿ 50 ಸಾವಿರದ ಪ್ರಥಮ ಬಹುಮಾನವನ್ನೂ ಪಡೆದುಕೊಂಡಿದ್ದರು. ಇದಾದ ಬಳಿಕ ಬಹುಮಾನದ ಚೆಕ್‌ ಅನ್ನು ಡ್ರಾ ಮಾಡಿಕೊಳ್ಳಲು ಮುಂದಾಗಿದ್ದ ವಿದ್ಯಾರ್ಥಿಗಳಿಗೆ ಶಾಕ್ ಆಗಿದೆ. ಬಹುಮಾನವಾಗಿ ನೀಡಿದ್ದ ಚೆಕ್ ನಾಲ್ಕು ಬಾರಿ ಬೌನ್ಸ್ ಆಗಿದ್ದು, ಸಂಘಟಕರಿಂದಲೂ ಯಾವುದೇ ಪ್ರತಿಕ್ರಿಯೆ ಸಿಗದೇ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

ಡಾನ್ಸ್ ಸ್ಪರ್ಧೆಯಲ್ಲಿ ನಮಗೆ ಕೊಟ್ಟ ಚೆಕ್​ ಬೌನ್ಸ್​ ಆಗಿದೆ ಎಂದ ಗೆದ್ದ ಅಭ್ಯರ್ಥಿಗಳು..

ದಿ ಯುನಿಟಿ ಕ್ರಿವ್ ಹೆಸರಿನ ಗೋವಾ ಮೂಲದ ಡ್ಯಾನ್ಸ್ ತಂಡದವರು ಚೆಕ್​ ಬೌನ್ಸ್​ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ಇದೇ ವರ್ಷ ಏಪ್ರಿಲ್‌ನಲ್ಲಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ತಾಂಡವ ಕಲಾನಿಕೇತನ ಎಂಬ ಸಂಸ್ಥೆ ಕರಾವಳಿ ಹಬ್ಬ ಕಾರ್ಯಕ್ರಮವನ್ನ ಆಯೋಜಿಸಿತ್ತು. ಇದೇ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಡ್ಯಾನ್ಸ್ ಕಾಂಪಿಟೇಶನ್‌ ನಡೆಸಿದ್ದು ಇದರಲ್ಲಿ ಭಾಗವಹಿಸಿದ್ದ ಹಲವು ತಂಡಗಳ ಪೈಕಿ ದಿ ಯುನಿಟಿ ಕ್ರಿವ್ ತಂಡ ಪ್ರಥಮ ಸ್ಥಾನ ಗಳಿಸಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ನಿಗದಿಯಂತೆ ಗೆದ್ದ ತಂಡಕ್ಕೆ 50 ಸಾವಿರ ರೂಪಾಯಿ ಬಹುಮಾನದ ಚೆಕ್‌ನ್ನು ವಿತರಿಸಿದ್ದು ಡ್ಯಾನ್ಸ್ ಗ್ರೂಪ್ ತಂಡದವರು ಖುಷಿಯಲ್ಲಿ ತೆರಳಿದ್ದರು.

ಮೊದಲ ಬಾರಿಗೆ ಬಹುಮಾನವಾಗಿ ಪಡೆದಿದ್ದ ಚೆಕ್‌ನ್ನ ಬ್ಯಾಂಕ್‌ಗೆ ಹಾಕಿದ್ದರು. ಆಗ ಅದು ಬೌನ್ಸ್ ಆಗಿತ್ತು. ಈ ವೇಳೆ ಕಾರ್ಯಕ್ರಮ ಆಯೋಜಿಸಿದ್ದ ತಾಂಡವ ಕಲಾನಿಕೇತನ ಸಂಸ್ಥೆಯ ಮಂಜುನಾಥ ನಾಯ್ಕ ಎನ್ನುವವರನ್ನ ವಿದ್ಯಾರ್ಥಿಗಳು ಸಂಪರ್ಕಿಸಿದ್ದರು. ಆಗ ಮಂಜುನಾಥ ನಾಯ್ಕ ಅವರು ನೀವು ಚೆಕ್ ಹಾಕಿ, ನಾವು ಹಣ ಹಾಕುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದರು. ಇದಾದ ಬಳಿಕ ಮೂರು ಬಾರಿ ಚೆಕ್ ಹಾಕಿದರೂ ಖಾತೆಯಲ್ಲಿ ಹಣವಿಲ್ಲದೇ ಬೌನ್ಸ್ ಆಗಿದೆ. ಈ ವೇಳೆ ಸಂಘಟಕರನ್ನ ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರು ನೀಡಿದ್ದ ವಿಳಾಸಕ್ಕೆ ನೋಟಿಸ್ ಕಳುಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾರೇ ಡ್ಯಾನ್ಸ್ ಗ್ರೂಪ್‌ನ ವಿದ್ಯಾರ್ಥಿಗಳು.

ಇನ್ನು ಕುಮಟಾ ಮೂಲದವರೆನ್ನಲಾದ ಮಂಜುನಾಥ ನಾಯ್ಕ ಕಾರವಾರದಲ್ಲಿ ಮಾಡಿದ್ದ ಕರಾವಳಿ ಹಬ್ಬ ಕಾರ್ಯಕ್ರಮದಲ್ಲಿ ಹೊರ ರಾಜ್ಯಗಳ ಹತ್ತಾರು ತಂಡಗಳು ಭಾಗವಹಿಸಿದ್ದವು. ಈ ಪೈಕಿ ಗೋವಾದ ದಿ ಯುನಿಟಿ ಗ್ರೂಪ್ ಕೂಡ ಒಂದು. ಆದರೆ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಬಹುಮಾನದ ಹಣ ಲಭ್ಯವಾಗಿದ್ದು, ಇವರಿಗೆ ಮಾತ್ರ ಅನ್ಯಾಯವಾಗಿದೆ. ಹೀಗಾಗಿ ನೊಂದ ಡ್ಯಾನ್ಸ್ ಗ್ರೂಪ್‌ನ ಸದಸ್ಯರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಚೆಕ್ ಬೌನ್ಸ್‌ ಆಗಿರುವ ಕುರಿತು ಸಂಘಟಕರು ಸ್ಪಂದಿಸದೇ ಇರುವುದರಿಂದಾಗಿ ಅವರೊಂದಿಗೆ ಕಾರ್ಯಕ್ರಮ ಮಾಡಿದ್ದ ಸಹಸಂಘಟಕರು ಇದೀಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕಾರ್ಯಕ್ರಮ ಆಯೋಜನೆ ಎಲ್ಲವೂ ಅವರದ್ದೇ ಆಗಿದ್ದು, ಇದೀಗ ಈ ರೀತಿ ವಂಚನೆ ಮಾಡಿರುವುದರಿಂದ ಕಾರವಾರದ ಹೆಸರು ಹಾಳಾಗುತ್ತಿದೆ. ಇದರಲ್ಲಿ ಕಾರವಾರದವರದ್ದು ಏನೂ ತಪ್ಪಿಲ್ಲವಾಗಿದ್ದು, ಇಂಥಹ ಸಂಘಟಕರಿಗೆ ಕಾರ್ಯಕ್ರಮಗಳನ್ನ ನಡೆಸಲು ಯಾರೂ ಸಹ ಅನುಮತಿ ನೀಡಬಾರದೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಒಟ್ಟಾರೇ ಉತ್ಸವದ ಹೆಸರಿನಲ್ಲಿ ಸ್ಪರ್ಧೆಗಳನ್ನ ಆಯೋಜಿಸಿ ವಿಜೇತರಾದವರಿಗೆ ಬಹುಮಾನ ನೀಡದೇ ವಂಚಿಸಿರುವುದು ನಿಜಕ್ಕೂ ದುರಂತವೇ. ಈ ಕುರಿತು ಸಂಬಂಧಪಟ್ಟವರು ಗಮನಹರಿಸಿ ಕಲಾವಿದರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಲು ಮುಂದಾಗಬೇಕಿದೆ.

ಓದಿ: ಅರಸೀಕೆರೆ ಭೀಕರ ರಸ್ತೆ ಅಪಘಾತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಚೆಕ್ ವಿತರಿಸಿದ ಗೋಪಾಲಯ್ಯ

Last Updated : Nov 4, 2022, 3:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.