ETV Bharat / state

ಉತ್ತರ ಕನ್ನಡ ಪರಿಷತ್​ ಫಲಿತಾಂಶ : ಬಿಜೆಪಿಯ ಗಣಪತಿ ಉಳ್ವೇಕರ್​ಗೆ ಗೆಲುವು - bjp ganapati ulvekar won in council election

ಒಟ್ಟು 2915 ಮತಗಳ ಪೈಕಿ 2907 ಮತ ಚಲಾವಣೆಗೊಂಡಿದ್ದವು. ಈ ಪೈಕಿ 54 ಮತಗಳು ತಿರಸ್ಕೃತಗೊಂಡಿವೆ. ಆದರೆ, ಕೊನೆವರೆಗೂ ಕಾಂಗ್ರೆಸ್-ಬಿಜೆಪಿ ನಡುವೆ ಏರ್ಪಟ್ಟಿದ್ದ ನೇರಾನೇರ ಹಣಾಹಣಿಯಲ್ಲಿ ಬಿಜೆಪಿಯ ಗಣಪತಿ ಉಳ್ವೇಕರ್ ಗೆಲುವಿನ ನಗೆ ಬೀರಿದ್ದಾರೆ..

bjp-ganapati-ulvekar-won-in-council-election
ಬಿಜೆಪಿ ಗಣಪತಿ ಉಳ್ವೇಕರ್​ಗೆ ಗೆಲುವು
author img

By

Published : Dec 14, 2021, 12:38 PM IST

ಕಾರವಾರ : ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್​​​ ಅಭ್ಯರ್ಥಿ ಭೀಮಣ್ಣ ನಾಯ್ಕ್​ ವಿರುದ್ಧ 183 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಗಣಪತಿ ಉಳ್ವೇಕರ್​ಗೆ ಗೆಲುವು..

ಗಣಪತಿ ಉಳ್ವೇಕರ್ 1514 ಮತಗಳನ್ನು ಪಡೆದಿದ್ದರೇ ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ಅವರಿಗೆ 1331 ಮತಗಳು ಬಂದಿದೆ. ಉಳಿದಂತೆ ಪಕ್ಷೇತರ ಅಭ್ಯರ್ಥಿಗಳಾದ ಈಶ್ವರಗೌಡ 4, ದತ್ತಾತ್ರೇಯ ನಾಯ್ಕ 3 ಹಾಗೂ ಸೋಮಶೇಖರ್ ವಿಎಸ್ 1 ಮತ ಪಡೆದಿದ್ದಾರೆ.

uttara kannada council election results : ಒಟ್ಟು 2915 ಮತಗಳ ಪೈಕಿ 2907 ಮತ ಚಲಾವಣೆಗೊಂಡಿದ್ದವು. ಈ ಪೈಕಿ 54 ಮತಗಳು ತಿರಸ್ಕೃತಗೊಂಡಿವೆ. ಆದರೆ, ಕೊನೆವರೆಗೂ ಕಾಂಗ್ರೆಸ್-ಬಿಜೆಪಿ ನಡುವೆ ಏರ್ಪಟ್ಟಿದ್ದ ನೇರಾನೇರ ಹಣಾಹಣಿಯಲ್ಲಿ ಬಿಜೆಪಿಯ ಗಣಪತಿ ಉಳ್ವೇಕರ್ ಗೆಲುವಿನ ನಗೆ ಬೀರಿದ್ದಾರೆ.

ಕಳೆದ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲು ಕಂಡಿದ್ದ ಉಳ್ವೇಕರ್ ಈ ಬಾರಿ ಗೆಲುವು ಕಂಡಿದ್ದಾರೆ. ಇದರೊಂದಿಗೆ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ಬಿಜೆಪಿ ಎಂಎಲ್​ಸಿ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದೆ. ಆದರೆ, ಮೂರು ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮತ್ತೊಂದು ಸೋಲುಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.