ETV Bharat / state

ಸ್ಮಶಾನ ವಿಚಾರಕ್ಕಾಗಿ ಅನ್ಯಧರ್ಮಗಳ ನಡುವೆ ಜಗಳ: ಬೇಲಿ ಹಾಕಿ ಸಮಸ್ಯೆ ಇತ್ಯರ್ಥಪಡಿಸಿದ ಅರಣ್ಯ ಇಲಾಖೆ - Assistant Commissioner Bharat Selvam

ನಾವು ಎರಡೂ ಧರ್ಮದವರಿಗೆ ತೊಂದರೆಯಾಗದಂತೆ ನೋಡಿಕೊಂಡು ಈ ಸ್ಥಳಕ್ಕೆ ಬೇಲಿ ಹಾಕಿದ್ದೇವೆ ಎಂದು ಆರ್​​ಎಫ್​​​​ಒ ಸವಿತಾ ದೇವಾಡಿಗ ತಿಳಿಸಿದ್ದಾರೆ.

Bhatkala cemetery diputes solved
ಬೇಲಿ ಹಾಕಿ ಸಮಸ್ಯೆ ಇತ್ಯರ್ಥಪಡಿಸಿದ ಅರಣ್ಯ ಇಲಾಖೆ
author img

By

Published : Oct 10, 2020, 8:25 PM IST

ಭಟ್ಕಳ: ತಾಲೂಕಿನ ವೆಂಕಾಪುರ ವ್ಯಾಪ್ತಿಯ ಕಾರಗದ್ದೆಯ ಅರಣ್ಯ ಇಲಾಖೆ ಜಾಗದಲ್ಲಿ ಹಲವಾರು ವರ್ಷಗಳಿಂದ ಹಿಂದೂ ರುದ್ರ ಭೂಮಿಯ ವಿಚಾರಕ್ಕಾಗಿ ಅನ್ಯ ಧರ್ಮಗಳ ನಡುವೆ ಜಗಳವಾಗುತ್ತಿದ್ದು, ಈ ಸಮಸ್ಯೆಗೆ ಅರಣ್ಯ ಇಲಾಖೆ ತೆರೆ ಎಳೆದಿದ್ದು, ಆ ಸ್ಥಳಕ್ಕೆ ತಂತಿ ಬೆಲೆ ಹಾಕಿ ತನ್ನ ವಶಕ್ಕೆ ಪಡೆದುಕೊಂಡಿದೆ.

ಸ್ಮಶಾನ ಜಾಗಕ್ಕೆ ಬೇಲಿ ಹಾಕಿ ಸಮಸ್ಯೆ ಇತ್ಯರ್ಥ

ಕಾರಗದ್ದೆಯ ಅರಣ್ಯ ಇಲಾಖೆಯ ಸರ್ವೇ ನಂಬರ್​​ 32/ಎ/1 ರ 1.25 ಎಕರೆ ಜಾಗದಲ್ಲಿ ಕಾರಗದ್ದೆ ಹಾಗೂ ಹಿಂದೂ ಕಾಲೊನಿಯ ನಿವಾಸಿಗಳು ಅನಾದಿ ಕಾಲದಿಂದಲೂ ಅಂತ್ಯ ಸಂಸ್ಕಾರ ಮಾಡುತ್ತಾ ಬಂದಿದ್ದು. ಈ ಹಿಂದೆ ಸ್ಮಶಾನದ ಅಕ್ಕಪಕ್ಕದ ಅನ್ಯಧರ್ಮದ ವ್ಯಕ್ತಿಗಳು ಇಲ್ಲಿ ಶವ ಸಂಸ್ಕಾರ ಮಾಡುವ ಸಂದರ್ಭದಲ್ಲಿ ಅಕ್ಕ ಪಕ್ಕದ ಮನೆಯವರಿಗೆ ತೊಂದರೆ ಆಗುತ್ತದೆ ಎಂದು ಅಡ್ಡಿ ಪಡಿಸುತ್ತಾ ಬಂದಿರುವ ಸಾಕಷ್ಟು ನಿದರ್ಶನಗಳು ನಡೆದಿವೆ.

ಈ ವಿಚಾರ ಸಹಾಯಕ ಆಯುಕ್ತ ಭರತ್ ಸೆಲ್ವಂ ಗಮನಕ್ಕೆ ಬಂದಿದ್ದು, ಬಿಗಿ ಪೊಲೀಸ್​ ಬಂದೋಬಸ್ತ್​ನಲ್ಲಿ ಅರಣ್ಯ ಇಲಾಖೆ ಸ್ಥಳಕ್ಕೆ ತೆರಳಿದ ಅವರು ತಾತ್ಕಾಲಿಕವಾಗಿ ತಂತಿ ಬೇಲಿ ಅಳವಡಿಸಿ ಮುಂದಿನ ದಿನದಲ್ಲಿ ಸಿಮೆಂಟ್ ಗೋಡೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದಾರೆ.

ಈ ಬಗ್ಗೆ ಆರ್​ಆಫ್ಓ ಸವಿತಾ ದೇವಾಡಿಗ ಮಾತನಾಡಿ, ನಾವು ಎರಡು ಧರ್ಮದವರಿಗೆ ತೊಂದರೆಯಾಗದಂತೆ ನೋಡಿಕೊಂಡು ಈ ಸ್ಥಳಕ್ಕೆ ಬೇಲಿ ಹಾಕಿದ್ದೇವೆ. ಆದರೆ ಈ ಹಿಂದಿನಿಂದ ಹಿಂದೂ ರುದ್ರ ಭೂಮಿ ಈ ಸ್ಥಳದಲ್ಲಿ ಇರುವುದರಿಂದ ನಮಗೆ ಅಂತ್ಯ ಸಂಸ್ಕಾರ ಮಾಡುವುದನ್ನು ನಿಲ್ಲಿಸಲು ಬರುವುದಿಲ್ಲ. ಅದರಂತೆ ಅಕ್ಕ ಪಕ್ಕದವರಿಗೆ ತೊಂದರೆ ಆಗದಂತೆ ನಾವು ಹಾಕಿರುವ ಬೇಲಿಯ ಒಂದು ಮೂಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಡಲಾಗುವುದು ಹಾಗೂ ಜಾಲಿ ಪಟ್ಟಣ ಪಂಚಾಯತ್​ನಿಂದ ಸಿಸಿಟಿವಿ ಅಳವಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.