ಕಾರವಾರ: ಲಾಕ್ಡೌನ್ ನಡುವೆಯೂ ಅನಾವಶ್ಯಕವಾಗಿ ಓಡಾಡುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಬೈಕ್ ಗಳನ್ನು ಅಂಕೋಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಘೋಷಣೆಯಾಗಿದ್ದು, ಮನೆಯಲ್ಲಿಯೇ ಇದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾಕಷ್ಟು ಭಾರಿ ಸೂಚಿಸಲಾಗಿದೆ. ಇಷ್ಟಾದರೂ ಕೆಲವರು ನಾನಾ ಕಾರಣಗಳನ್ನು ಹೇಳಿ ಅನಾವಶ್ಯಕವಾಗಿ ಪಟ್ಟಣದಲ್ಲಿ ಅಡ್ಡಾಡುತ್ತಿದ್ದರು. ಹಾಗಾಗಿ ಪಿಎಸ್ಐ ಸಂಪತ ಕುಮಾರ್ ಹಾಗೂ ತಂಡ ಕಾರ್ಯಾಚರಣೆ ನಡೆಸಿ, ಸುಮಾರು 50 ಕ್ಕೂ ಹೆಚ್ಚು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಎಲ್ಲಾ ಸವಾರರನ್ನು ಠಾಣೆಗೆ ಕರೆಸಿ ದಂಡ ವಿಧಿಸಿ ಕೊನೆಯ ಎಚ್ಚರಿಕೆ ನೀಡಿದ್ದಾರೆ.
ಪುನಃ ಅನಾವಶ್ಯಕವಾಗಿ ರಸ್ತೆಗೆ ಇಳಿದಿರುವುದು ಕಂಡು ಬಂದಲ್ಲಿ ಅವರ ವಾಹನವನ್ನು ಸೀಜ್ ಮಾಡಲಾಗುವುದು. ಮೆಡಿಕಲ್, ಆಸ್ಪತ್ರೆ ಹೀಗೆ ಅವಶ್ಯಕತೆ ಇದ್ದವರು ಮಾತ್ರ ತೆರಳಲು ಅವಕಾಶವಿದ್ದು, ಅವರು ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.