ETV Bharat / state

ಕಾರವಾರ: ಮಂಜೂರಾಗದ ಕಟ್ಟಡ, ಬಾಡಿಗೆಗೂ ಕೊಠಡಿ ಸಿಗದೆ ಗ್ರಾಮಸ್ಥರೇ ನಿರ್ಮಿಸಿದ್ರು ಅಂಗನವಾಡಿ ಕೇಂದ್ರ - ಅಂಗನವಾಡಿ

ಸರ್ಕಾರದ ವಿಳಂಬ ನೀತಿಗೆ ರೋಸಿ ಹೋದ ಗ್ರಾಮಸ್ಥರು ತಾತ್ಕಾಲಿಕ ಅಂಗನವಾಡಿಯೊಂದನ್ನು ನಿರ್ಮಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಉಡಳ್ಳಿ ಗ್ರಾಮದಲ್ಲಿ ನಡೆದಿದೆ.

anganwadi
ತಾತ್ಕಾಲಿಕ ಅಂಗನವಾಡಿ ನಿರ್ಮಿಸಿದ ಗ್ರಾಮಸ್ಥರು
author img

By ETV Bharat Karnataka Team

Published : Dec 16, 2023, 7:31 AM IST

Updated : Dec 16, 2023, 10:45 AM IST

ತಾತ್ಕಾಲಿಕ ಅಂಗನವಾಡಿ ನಿರ್ಮಿಸಿದ ಗ್ರಾಮಸ್ಥರು

ಕಾರವಾರ : ಬಾಲ್ಯ ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರ ಅಂಗನವಾಡಿಗಳನ್ನು ತೆರೆದಿದೆ. ಆದರೆ, ಉತ್ತರಕನ್ನಡ ಜಿಲ್ಲೆಯ ಅದೆಷ್ಟೋ ಕಡೆ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ. ಇದ್ದ ಕೆಲ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿ ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದ್ದರೂ ಕೆಲ ತಿಂಗಳಿಂದ ಬಾಡಿಗೆ ಕೂಡ ಕಟ್ಟಿಲ್ಲ. ಹೀಗಾಗಿ, ಕಟ್ಟಡ ಮಂಜೂರಾಗುವುದೆಂದು ಕಾದು ಕುಳಿತಿದ್ದ ಗ್ರಾಮದ ಜನರು ಸರ್ಕಾರದ ವಿಳಂಬ ನೀತಿಗೆ ರೋಸಿ ಹೋಗಿ ಕೊನೆಗೆ ತಾತ್ಕಾಲಿಕ ಅಂಗನವಾಡಿಯೊಂದನ್ನು ನಿರ್ಮಿಸಿಕೊಂಡಿದ್ದಾರೆ.

ಹೌದು, ಒಂದೆಡೆ ಶಿಥಿಲಾವಸ್ಥೆ ತಲುಪಿ ಬಾಗಿಲು ಹಾಕಿಕೊಂಡಿರುವ ಅಂಗನವಾಡಿ ಕಟ್ಟಡ. ಇನ್ನೊಂದೆಡೆ ಪಕ್ಕದಲ್ಲಿಯೇ ತಾತ್ಕಾಲಿಕ ಅಂಗನವಾಡಿ ನಿರ್ಮಾಣಕ್ಕೆ ಮುಂದಾಗಿರುವ ಗ್ರಾಮಸ್ಥರು. ಮತ್ತೊಂದೆಡೆ, ನಿರ್ಮಾಣಗೊಂಡ ಅಂಗನವಾಡಿಯಲ್ಲಿ ಖುಷಿಯಿಂದ ಪೂಜೆ ಸಲ್ಲಿಸುತ್ತಿರುವ ಮಕ್ಕಳು. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಉಡಳ್ಳಿ ಗ್ರಾಮದಲ್ಲಿ.

ಕಳೆದ ನಾಲ್ಕೈದು ವರ್ಷಗಳಿಂದ ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿತ್ತು. ಕಳೆದ ವರ್ಷ ಅಂಗನವಾಡಿಯಲ್ಲಿ ಮಕ್ಕಳನ್ನು ಕೂರಿಸುವುದು ಅಪಾಯಕಾರಿ ಆಗಿರುವುದರಿಂದ ಅಧಿಕಾರಿಗಳು ಬಾಡಿಗೆ ಕಟ್ಟಡ ನೋಡಲು ಸೂಚಿಸಿದ್ದರು. ಆದರೆ, ಬಾಡಿಗೆ ಕಟ್ಟಡ ಸಿಗದ ಕಾರಣ ಗ್ರಾಮದಲ್ಲಿಯೇ ಓರ್ವರು ತಮ್ಮ ಮನೆಯ ಒಂದು ಕೋಣೆಯನ್ನು ಮೂರು ತಿಂಗಳ ಅವಧಿಗೆ ಮಕ್ಕಳ ವಿದ್ಯಾರ್ಜನೆಗೆ ನೀಡಿದ್ದರು. ಇತ್ತ ಕಟ್ಟಡ ಮಂಜೂರಾತಿಗಾಗಿ ಕಾದು ಕುಳಿತಿದ್ದ ಊರಿನವರು ಇಲಾಖೆಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಮನೆಯವರು ಕೊಟ್ಟ ಅವಧಿ ಕೂಡ ಮುಕ್ತಾಯಗೊಂಡ ಕಾರಣ ಇದೀಗ ಉಡಳ್ಳಿ ಬಿಳೆಗೋಡ ಗ್ರಾಮಸ್ಥರು ಸೇರಿ ಹಳೆ ಅಂಗನವಾಡಿ ಕಟ್ಟಡದ ಬಳಿಯೇ ತಾತ್ಕಾಲಿಕ ಕಟ್ಟಡ ನಿರ್ಮಾಣ ಮಾಡಿದ್ದಾರೆ. ತಾತ್ಕಾಲಿಕ ಅಂಗನವಾಡಿ ಸಿದ್ಧಗೊಂಡಿದ್ದು, ಶುಕ್ರವಾರ ಮಕ್ಕಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪೂಜೆ ಸಲ್ಲಿಸಿ ವಿದ್ಯಾಭ್ಯಾಸ ಆರಂಭ ಮಾಡಿದ್ದಾರೆ.

"ಗ್ರಾಮದಲ್ಲಿರುವ ಅಂಗನವಾಡಿ ಶಿಥಿಲಗೊಂಡು ಹಲವು ವರ್ಷಗಳೇ ಕಳೆದಿವೆ. ಈವರೆಗೂ ಕಟ್ಟಡ ಮಂಜೂರಾಗಿಲ್ಲ.‌ ಅಂಗನವಾಡಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಈ ಅಂಗನವಾಡಿ ಬಿಟ್ಟರೆ ನಾಲ್ಕೈದು ಕಿ.ಮೀ ದೂರ ಹೋಗಬೇಕಿದೆ. ಆದ್ದರಿಂದ ಕೂಡಲೇ ಸರ್ಕಾರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಮಂಜೂರು ಮಾಡಿ, ನಿರ್ಮಾಣ ಮಾಡಬೇಕು" ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬೆಳಗಾವಿ : ಅಂಗನವಾಡಿ ಕಟ್ಟಡಗಳ ಬಾಡಿಗೆ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಕಾರ್ಯಕರ್ತೆಯರ ಪ್ರತಿಭಟನೆ

ಇನ್ನು ಜಿಲ್ಲೆಯಲ್ಲಿ 2,782 ಅಂಗನವಾಡಿ ಕೇಂದ್ರಗಳಿದ್ದು ಈ ಪೈಕಿ 322 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅಂಗನವಾಡಿಗಳಿಗೆ ಕಳೆದ ಏಪ್ರಿಲ್ ತಿಂಗಳಿನಿಂದ ಇದುವರೆಗೆ ಸುಮಾರು 8 ತಿಂಗಳ ಬಾಡಿಗೆ ಹಣ ಸರ್ಕಾರದಿಂದ ಪಾವತಿಯಾಗಿಲ್ಲ. ಹೀಗಾಗಿ, ಅಂಗನವಾಡಿ ಸಿಬ್ಬಂದಿಯೇ ತಮ್ಮ ವೇತನದಲ್ಲಿ ಪ್ರತಿ ತಿಂಗಳ ಬಾಡಿಗೆಯನ್ನು ಪಾವತಿಸಬೇಕಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ಅಂಗನವಾಡಿಗಳ ಬಾಡಿಗೆ ಪಾವತಿ ವಿಳಂಬವಾಗಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ. ಇದೀಗ ಮತ್ತೊಮ್ಮೆ ಖುದ್ದು ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಆದಷ್ಟು ಶೀಘ್ರದಲ್ಲಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸೋದಾಗಿ ತಿಳಿಸಿದ್ದಾರೆ.

Last Updated : Dec 16, 2023, 10:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.